Advertisement
ರಾಜ್ಯ ಮಾತ್ರವಲ್ಲದೇ ದೇಶದ ಮೂಲೆ ಮೂಲೆಯಿಂದ ಭಾವೈಕ್ಯತೆಯ ಕ್ಷೇತ್ರ ಅತ್ತೂರಿಗೆ ಜನರು ಆಗಮಿಸಿದರು. ಪಾರ್ಕಿಂಗ್‌ಗೆ ನಿಗದಿಗೊಳಿಸಿದ ಮೈದಾನಗಳೆಲ್ಲವೂ ಭರ್ತಿಗೊಂಡು ಭಕ್ತರು ರಸ್ತೆ ಬದಿಯಲ್ಲೇ ವಾಹನ ಪಾರ್ಕಿಂಗ್ ಮಾಡಿದ್ದರು. ಪವಿತ್ರ ಪುಷ್ಕರಿಣಿ, ಪವಾಡ ಮೂರ್ತಿ, ಮೋಂಬತ್ತಿ ಉರಿಸುವಲ್ಲಿ ಜನದಟ್ಟಣೆಯಿತ್ತು. ಭಿಕ್ಷುಕರು ವಾಪಸ್ ಭಿಕ್ಷಾಟನೆ ಕಾನೂನಾತ್ಮಕವಾಗಿ ನಿಷೇಧಿಸಿದ್ದರಿಂದ ಭಿಕ್ಷೆ ಬೇಡಲು ಬಂದ ಭಿಕ್ಷುಕರನ್ನು ಪೊಲೀಸರು ವಾಪಸ್ ಕಳುಹಿಸಿದರು.
ಗುರುವಾರ ವಾರ್ಷಿಕ ಹಬ್ಬದ ಕೊನೆಯ ದಿನವಾಗಿದ್ದು, ಬೆಳಗ್ಗೆ 10.30ಕ್ಕೆ ಹಬ್ಬದ ಪ್ರಮುಖ ದಿವ್ಯ ಬಲಿಪೂಜೆಯನ್ನು ಉಡುಪಿ ಧರ್ಮಾಧ್ಯಕ್ಷರಾದ ರೈ| ರೆ| ಡಾ| ಜೆರಾಲ್ಡ್ ಲೋಬೊ ನೆರವೇರಿಸಲಿ¨ªಾರೆ. ಇಡೀ ದಿನ ಹತ್ತು ಬಲಿಪೂಜೆಗಳು ನಡೆಯಲಿದ್ದು, ರಾತ್ರಿ 9.30ಕ್ಕೆ ಕೊನೆಯ ಬಲಿಪೂಜೆಯು ಕೊಂಕಣಿಯಲ್ಲಿ ನಡೆಯಲಿದೆ. ಇದರೊಂದಿಗೆ ವೈಭವದ ಅತ್ತೂರು ವಾರ್ಷಿಕ ಮಹೋತ್ಸವಕ್ಕೆ ತೆರೆ ಬೀಳಲಿದೆ.