Advertisement

Karkala: ಅನಂತಶಯನ ಗುಡ್ಡೆಯಂಗಡಿ ರಸ್ತೆ ದುಃಸ್ಥಿತಿ; ಸವಾರರಿಗೆ ಪ್ರಾಣಸಂಕಟ

02:22 PM Nov 27, 2024 | Team Udayavani |

ಕಾರ್ಕಳ: ಪುರಸಭೆ ವ್ಯಾಪ್ತಿ ಅನಂತಶಯನದಿಂದ ಗುಡ್ಡೆಯಂಗಡಿವರೆಗಿನ ರಸ್ತೆ ಅಲ್ಲಲ್ಲಿ ಹದಗೆಟ್ಟು ಹೋಗಿದ್ದು, ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ.

Advertisement

ಬೃಹತ್‌ ಗಾತ್ರದ ಹೊಂಡ, ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ತೆಳ್ಳಾರು, ದುರ್ಗ, ಶಿರ್ಲಾಲು ಗ್ರಾಮಗಳಿಗೆ ಕಾರ್ಕಳ ಪೇಟೆಯಿಂದ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ನಿತ್ಯ ಸಾವಿರಾರು ಮಂದಿ ಸಾರ್ವಜನಿಕರು ಈ ರಸ್ತೆ ಓಡಾಡಬೇಕಿದೆ. ಕಾರು, ಸಹಿತ ಇತರೆ ಸರಕು ವಾಹನಗಳು ಬಸ್ಸುಗಳಿಗೆ ಈ ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ಸಂಚಾರ ಸಂಕಷ್ಟಕರವಾಗಿ ಪರಿಣಮಿಸಿದೆ.

ಮಳೆಗಾಲ ಆರಂಭವಾದಂದಿನಿಂದ ಬೃಹದಾಕಾರದ ಹೊಂಡಗಳು ರಸ್ತೆಯುದ್ದಕ್ಕೂ ಕಾಣಿಸಿಕೊಂಡಿದ್ದು, ಗುಂಡಿಗಳು ದಿನ ಕಳೆದಂತೆ ದೊಡ್ಡದಾಗುತ್ತಿದೆ.

ಗಾಜ್ರಿಯ ಆಸ್ಪತ್ರೆ, ವೃದ್ಧಾಶ್ರಮ, ಗೋ-ಶಾಲೆ ಹಲವಾರು ಪೂಜಾ ಸ್ಥಳಗಳು, ವಿದ್ಯಾಕೇಂದ್ರಗಳು, ಪುರಸಭೆ ಪಂಪ್‌ ಹೌಸ್‌, ದುರ್ಗ ಫಾಲ್ಸ್‌ ಸೇರಿದಂತೆ ಎಲ್ಲಾ ಕಡೆಗಳಿಗೂ ಈ ರಸ್ತೆ ಸಂಪರ್ಕ ರಸ್ತೆ ಮುಖ್ಯವಾಗಿದೆ.

ಪುರಸಭೆಗೂ ಮನವಿ
ಶೀಘ್ರ ಹೊಂಡ-ಗುಂಡಿಗಳನ್ನು ಮುಚ್ಚಿ ಡಾಮರೀಕರಣಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಸಾರ್ವಜನಿಕ ವಲಯ ದಿಂದಲೂ ಈ ಬಗ್ಗೆ ಕಾರ್ಕಳ ಪುರಸಭೆಗೂ ಮನವಿ ಸಲ್ಲಿಸಲಾಗಿದೆ. ಶೀಘ್ರ ರಸ್ತೆಯನ್ನು ವ್ಯವಸ್ಥಿತಗೊಳಿಸಿಕೊಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

Advertisement

ದ್ವಿಚಕ್ರ ವಾಹನ ಸವಾರರಿಗೆ ಯಮಕೂಪ
ದ್ವಿಚಕ್ರ ವಾಹನ ಸವಾರರಿಗೆ ಈ ಗುಂಡಿ ಯಮಕೂಪವಾಗಿದೆ. ರಾತ್ರಿ ವೇಳೆ ಕೊಂಚ ಎಚ್ಚರ ತಪ್ಪಿದರೂ ಅಪಘಾತ ಕಟ್ಟಿಟ್ಟ ಬುತ್ತಿ. ಈಗಾಗಲೆ ಈ ರಸ್ತೆಯಲ್ಲಿ ಸಣ್ಣಪುಟ್ಟ ಅಪಘಾತಗಳು ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಪುರಸಭೆ ವ್ಯಾಪ್ತಿ ರಸ್ತೆಗಳ ದುರಸ್ತಿ ಕಾರ್ಯ ಮತ್ತು ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಶೀಘ್ರದಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸಿ, ಹಂತಹಂತವಾಗಿ ಕಾಮಗಾರಿ ನಡೆಸಲಾಗುತ್ತದೆ. ವ್ಯವಸ್ಥಿತವಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು.
-ಯೋಗೀಶ್‌ ದೇವಾಡಿಗ, ಅಧ್ಯಕ್ಷರು, ಪುರಸಭೆ, ಕಾರ್ಕಳ

ಸಾಕಷ್ಟು ಮಂದಿ ಪೆಟ್ಟು ಮಾಡಿಕೊಂಡಿ ದ್ದಾರೆ. ಅನಂತಶಯನ ಗುಡ್ಡೆಯಂಗಡಿ ರಸ್ತೆ ಅರ್ಧ ಕಿ. ಮೀ. ತೀರ ಹದಗೆಟ್ಟಿದೆ. ಈ ರಸ್ತೆಯಲ್ಲಿ ಗುಂಡಿಗಳಿಂದ ಸಾಕಷ್ಟು ಮಂದಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಪುರಸಭೆಗೆ ಈಗಾಗಲೆ ಮನವಿ ಮಾಡಲಾಗಿದೆ. ಇದೇ ಮಾರ್ಗದಲ್ಲಿ ನೀರಿನ ಮುಖ್ಯ ಪೈಪ್‌ಲೈನ್‌ ಕೆಲಸ ನಡೆಯಲು ಬಾಕಿ ಇದ್ದು, ಈ ಕಾಮಗಾರಿ ಅನಂತರ ರಸ್ತೆ ಅಭಿವೃದ್ಧಿಗೊಳಿಸುವ ಕೆಲಸ ಆಗಬೇಕಿದೆ. ಎರಡು ಕಾಮಗಾರಿ ಶೀಘ್ರವಾಗಿ ನಡೆಯಬೇಕು.
-ಎಸ್‌. ಪಾರ್ಶ್ವನಾಥ್‌ ವರ್ಮ, ಮಾಜಿ ಸದಸ್ಯರು, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next