Advertisement
ಕಸಬ ಗ್ರಾಮದ ಜೋಡುರಸ್ತೆ ಮಹಮ್ಮದ್ ರಿಜ್ವಾನ್ ಅವರ ಪತ್ನಿ ಮೈಮುನಾ (27) ಮೃತಪಟ್ಟವರು. ಅವರು 2017ರಲ್ಲಿ ರಿಜ್ವಾನ್ ಅವರೊಂದಿಗೆ ವಿವಾಹವಾಗಿದ್ದರು. ಅತ್ತೆ, ಮಾವ ಸೇರಿದಂತೆ ಪತಿಯ ಮನೆಯವರು ಹಿಂಸೆ ಮಾಡುತ್ತಿದ್ದು, ಮನೆ ಬಿಟ್ಟು ಹೋಗು ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ಮೈಮುನಾ ಸಹೋದರಿ ರಶೀದಾ ಅವರಲ್ಲಿ ಅಲವತ್ತುಕೊಂಡಿದ್ದರು. 4 ವರ್ಷಗಳ ಹಿಂದೆ ಚೂರಿ ಹಾಕಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದರು. ನ. 28ರಂದು ಮೈಮೂನಾ ಅವರ ಅತ್ತೆಯ ಅಕ್ಕ ಮೆಹರುನ್ನಿಸಾ ಮತ್ತು ಅವರ ಮಗಳು ದಿಲ್ ಶಾದ್ ಸೇರಿ ಎಲ್ಲರೂ ಗಲಾಟೆ ಮಾಡಿದ್ದು, ಬೇರೆ ಬಾಡಿಗೆ ಮನೆ ಮಾಡಿ ವಾಸವಾಗಿರುವಂತೆ ಮತ್ತು ಪತಿಗೆ ಬಾಡಿಗೆ ಮನೆಗೆ ಹೋಗದಂತೆ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾಗಿ ರಶೀದಾ ಹೇಳಿದ್ದಾರೆ.
ಅತ್ತೆ ನೂರ್ಜಾನ್, ಮಾವ ಮೊಹಮ್ಮದ್ ಶರೀಫ್, ಇತರರಾದ ಸಿರಾಜ್, ರಫಾತ್, ಅಬ್ದುಲ್ ಖಾದರ್, ಮಜೀದ್, ಮೆಹರುನ್ನಿಸಾ ಮತ್ತು ದಿಲ್ಶಾದ್ ಅವರು ಮಾನಸಿಕ ಹಿಂಸೆ ನೀಡಿ, ಸಾಯಲು ದುಷ್ಟೇರಣೆ ನೀಡಿದ ಕಾರಣದಿಂದ ವಿಷ ಸೇವಿಸಿ ಸಾವನಪ್ಪಿದ್ದಾಳೆ ಎಂದು ಸಹೋದರಿ ರಶೀದಾ ಬಾನು ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.