Advertisement

ಕಾರ್ಕಳ: 24 ಪಲ್ಲಕ್ಕಿಯಲ್ಲಿ ಭವ್ಯ ಮಂಗಳ ಶೋಭಾಯಾತ್ರೆ​​​​​​​

06:10 AM Aug 19, 2018 | Team Udayavani |

ಕಾರ್ಕಳ: ಪರಮಪೂಜ್ಯ 108 ಮುನಿಶ್ರೀ ವೀರಸಾಗರ ಮಹಾರಾಜರ ಭವ್ಯಮಂಗಲ ಚಾತುರ್ಮಾಸ ಹಿನ್ನೆಲೆಯಲ್ಲಿ 1008ನೇ ಭಗವಾನ್‌ ಶ್ರೀ ಪಾರ್ಶ್ವನಾಥ ಸ್ವಾಮಿಯ ಮೋಕ್ಷ ಕಲ್ಯಾಣ ಕಾರ್ಯಕ್ರಮದ ಪ್ರಯುಕ್ತ ಭವ್ಯಮಂಗಲ ಶೋಭಾಯಾತ್ರೆ ಆ. 18ರಂದು ನಗರದಲ್ಲಿ ನಡೆಯಿತು.

Advertisement

ಭಗವಾನ್‌ ಶ್ರೀ ಬಾಹುಬಲಿ ಪ್ರವಚನ ಮಂದಿರದಿಂದ ಹೊರಟ ಶೋಭಾಯಾತ್ರೆ ಆನೆಕೆರೆ, ಮೂರು ಮಾರ್ಗ, ಬಸ್‌ನಿಲ್ದಾಣದಿಂದ ಅನಂತಶಯನ ಮಾರ್ಗವಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಾಹುಬಲಿ ಪ್ರಚನಮಂದಿರಕ್ಕೆ ಸಾಗಿತು. ಅದಕ್ಕೂ ಮೊದಲು ಮುಂಜಾನೆ ಹಿರಿಯಂಗಡಿ ಗುರುಬಸದಿಯಿಂದ ತೀರ್ಥಂಕರರ ಜಿನಬಿಂಬಗಳನ್ನು ಬಾಹುಬಲಿ ಪ್ರವಚನ ಮಂದಿರಕ್ಕೆ ಕೊಂಡೊಯ್ದು ಅಭಿಷೇಕ ಮಾಡಲಾಯಿತು.

24 ತೀರ್ಥಂಕರರ ಜಿನಬಿಂಬಗಳನ್ನು 24 ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ವಿವಿಧ ಸ್ತೋತ್ರ, ಜಿನವಾಣಿ, ಘೋಷಣೆಗಳ ಮೂಲಕ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಹೊರಜಿಲ್ಲೆಗಳ ಜನಪದೀಯ ಕಲಾ ತಂಡಗಳ ನೃತ್ಯಗಳು, ಡೋಲು, ವಾದ್ಯ, ಬ್ಯಾಂಡ್‌ಸೆಟ್‌ ಮೊದಲಾದ ಕಲಾ ಪ್ರಕಾರಗಳು ಮತ್ತಷ್ಟು ಮೆರುಗು ನೀಡಿತು.

ಹರಿದು ಬಂದ ಭಕ್ತಸಾಗರ
ಕರಾವಳಿ ಭಾಗದ ಸಾವಿರಾರು ಭಕ್ತರು ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.ಜತೆಗೆ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಮಂಗಳೂರು ಮಾತ್ರವಲ್ಲದೇ ಉಡುಪಿ ಜಿಲ್ಲೆಯ ವಿವಿಧ ಭಾಗಗಳ ಸಾವಿರಾರು ಮಂದಿ ಶ್ರಾವಕ, ಶ್ರಾವಕಿಯರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next