Advertisement
ಈಗಾಗಲೇ ಕೆಲವರಿಗೆ ನೋಟಿಸ್ ನೀಡಿದ್ದು, ಸಮರ್ಪಕ ರೀತಿಯಲ್ಲಿ ವ್ಯಾಪಾರ, ಉದ್ದಿಮೆ ನಡೆಸದಿದ್ದರೆ ಸಂಬಂಧಪಟ್ಟವರ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ವ್ಯಾಪಾರ ಚಟುವಟಿಕೆ ಮುಚ್ಚಿಸುವುದಾಗಿ ಎಚ್ಚರಿಸಿದೆ.
Related Articles
ಪುರಸಭೆ ವ್ಯಾಪ್ತಿಯಲ್ಲಿ 80ಕ್ಕೂ ಅಧಿಕ ಅಂಗಡಿಗಳು ಟ್ರೇಡ್ ಲೈಸೆನ್ಸ್ ನವೀಕರಣಕ್ಕೆ ಬಾಕಿ ಇರಿಸಿಕೊಂಡಿದ್ದು, ಇದರ ನವೀಕರಣ ಪ್ರಕ್ರಿಯೆಗೆ ಸೂಚಿಸಲಾಗಿದೆ. 10ಕ್ಕೂ ಅಧಿಕ ಕಡೆಗಳಲ್ಲಿ ಲೈಸೆನ್ಸ್ ಇಲ್ಲದೆ ವ್ಯಾಪಾರ ಮಾಡುತ್ತಿರುವವರಿಗೆ ಈಗಾಗಲೆ ನೋಟಿಸ್ ನೀಡಲಾಗಿದ್ದು, ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಕಾನೂನು ಕ್ರಮ ಕೈಗೊಳ್ಳಬೇಕುಕೆಲವು ಕಡೆಗಳಲ್ಲಿ ಅನುಮತಿ ಒಂದಕ್ಕೆ ಪಡೆಯುವುದು, ಇನ್ನೊಂದು ವ್ಯವಹಾರ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಲೈಸೆನ್ಸ್ ಇಲ್ಲದೆ ವ್ಯಾಪಾರ ನಡೆಸುವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಿದೆ.
– ಶುಭದ ರಾವ್, ಪುರಸಭೆ ಸದಸ್ಯ ದುಪ್ಪಟ್ಟು ದಂಡ ವಿಧಿಸಲಾಗುವುದು
ಲೈಸೆನ್ಸ್ ಇಲ್ಲದೆ ವ್ಯಾಪಾರ ಮಾಡುವ ಅಂಗಡಿ, ಮುಂಗಟ್ಟು ಇನ್ನಿತರೆ ಉದ್ದಿಮೆ ಘಟಕ, ಮಳಿಗೆಗಳನ್ನು ಮುಚ್ಚಿಸಿ ದುಪ್ಪಟ್ಟು ದಂಡ ವಿಧಿಸಲಾಗುವುದು. ನವೀಕರಣಕ್ಕೆ ಬಾಕಿ ಇರುವವರು ಕೂಡಲೇ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕಠಿನ ಕ್ರಮ ಕೈಗೊಳ್ಳಲಾಗುವುದು.
– ರೂಪಾ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ