ಪುಂಜಾಲಕಟ್ಟೆ : ಭೂ ಕೈಲಾಸ ಪ್ರತೀತಿಯ ಪುರಾಣೈತಿಹ್ಯ ಪ್ರಸಿದ್ಧ ಕ್ಷೇತ್ರವಾದ ಬಂಟ್ವಾಳ ತಾಲೂಕಿನ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಗದಾತೀರ್ಥ ವನ್ನು ಶುದ್ಧೀಕರಿಸುವ ಕಾರ್ಯ ಆರಂಭ ಗೊಂಡಿದ್ದು, ನೀರಿಂಗಿಸುವಿಕೆ, ಪಾಚಿ ತೆಗೆ ಯುವ ಕಾರ್ಯ ನಡೆಯುತ್ತಿದೆ.
ಬೆಟ್ಟದ ಮೇಲಿರುವ ಕೊಳಗಳಲ್ಲಿ ಸದಾ ನೀರಿರುವಂತೆ, ಕೆಳಗಿನ ಭಾಗದಲ್ಲಿ ಸುಮಾರು 600 ಅಡಿ ಉದ್ದ, 200 ಅಡಿ ಅಗಲದ ಬೃಹತ್ ಸರೋವರವಾದ ಗದಾತೀರ್ಥದಲ್ಲಿ ಸದಾ ನೀರಿರುತ್ತದೆ. ಈ ತೀರ್ಥದಲ್ಲಿ ಅಮಾವಾಸ್ಯೆಸ್ನಾನ ವಿಶೇಷ.
ಕೇವಲ ಸ್ನಾನಕ್ಕೆ ಮಾತ್ರ ಗದಾತೀರ್ಥದಲ್ಲಿ ನೀರು ಬತು ್ತವುದೇ ಇಲ್ಲ ಎನ್ನುತ್ತಾರೆ ಇಲ್ಲಿನ ಹಿರಿಯ ಗ್ರಾಮಸ್ಥರು.
Advertisement
ಶ್ರೀ ಕ್ಷೇತ್ರವು ಬೆಟ್ಟದ ತುದಿಯಲ್ಲಿದ್ದು, ದ್ವಾಪರಯುಗದಲ್ಲಿ ಭೀಮಸೇನನು ಮೊಣಕಾಲೂರಿದ ಜಾಗ ಜಾನುತೀರ್ಥ ಹಾಗೂ ಉಂಗುಷ್ಠ ಊರಿದ ಜಾಗ ಉಂಗುಷ್ಠತೀರ್ಥವೆಂದೂ, ಈ ಭಂಗಿ ಯಿಂದ ಗದೆಯನ್ನು ಎಸೆದ ಜಾಗ ಗದಾತೀರ್ಥವೆಂದೂ ಪ್ರತೀತಿ ಇದೆ.
ಯೋಜನೆ ತಯಾರಾಗಿಲ್ಲ
ಕೆರೆಯನ್ನು ಸ್ವಚ್ಛಗೊಳಿಸಲು ಉದ್ಯೋಗ ಖಾತರಿ ಯೋಜನೆ ಯಲ್ಲಿ ಅವಕಾಶವಿದೆ. ಆದರೆ ಈ ಬಾರಿ ಯೋಜನೆ ತಯಾರಾಗಿ ಲ್ಲದ ಕಾರಣ ಅನುದಾನ ದೊರಕುತ್ತಿಲ್ಲ. ಮಳೆಗಾಲದ ಮೊದಲು ಕೆರೆಯನ್ನು ಸ್ವಚ್ಛಗೊಳಿಸಬೇಕಾಗಿದೆ.
– ವೇದವ ಪಿಡಿಒ, ಕಾವಳಮೂಡೂರು ಗ್ರಾ.ಪಂ.
– ವೇದವ ಪಿಡಿಒ, ಕಾವಳಮೂಡೂರು ಗ್ರಾ.ಪಂ.