Advertisement
ಸ್ಥಳೀಯರ ಹೋರಾಟ ಕೊನೆಗೂ ಫಲಶ್ರುತಿಗೊಂಡು ಸರ್ಕಾರವು ಸೇತುವೆ ಕಾಮಗಾರಿಗೆ ಅನು ಮತಿ ನೀಡಿತ್ತು. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿ ಯಾವಾಗ ಮುಕ್ತಾಯಗೊಳ್ಳು ತ್ತದೆ. ಸಂಚಾರಕ್ಕೆ ಅನುವು ಯಾವಾಗ ಎಂದು ಸ್ಥಳೀಯರು ಚಾತಕ ಪಕ್ಷಿಯಂತೆ ಕಾಯ ತೊಡಗಿದ್ದಾರೆ.
Related Articles
Advertisement
ಹೊರ ಜಿಲ್ಲೆಯ ಜನರಿಗೂ ಅನುಕೂಲ: ಈ ಸೇತುವೆ ನಿರ್ಮಾಣದಿಂದ 2 ತಾಲೂಕುಗಳ ವ್ಯಾಪಾರ ವಹಿವಾಟು ವೃದ್ಧಿ ಆಗುವುದರ ಜೊತೆಗೆ ಹೊಳೆನರಸೀಪುರ, ಅರಕಲಗೂಡು ತಾಲೂಕುಗಳಿಗೆ ಸಂಚರಿಸಲು ಸಾರ್ವಜನಿಕರಿಗೆ ಬಹಳ ಅನುಕೂಲವಾಗಿದೆ. ಮಡಕೇರಿ ಜಿಲ್ಲೆಗೆ ತೆರಳಲು 50 ರಿಂದ 60 ಕಿ.ಮೀ. ಕಡಿಮೆಯಾಗುತ್ತದೆ. ಇದರಿಂದಎಲ್ಲಾ ಭಾಗದ ಜನರಿಗೂ ಬಹಳ ಅನುಕೂಲವಾಗಿದೆ. ಕೆಆರ್‌ಡಿಸಿಎಲ್ (ಕರ್ನಾಟಕ ರಸ್ತೆ ಸಾರಿಗೆ ನಿಗಮ)ನಿಂದ 16 ಕೋಟಿ ರೂ. ಅನುದಾನದಲ್ಲಿ ಬಿಎಸ್‌ಆರ್ ಕಂಪನಿ ಕಾಮಗಾರಿ ನಿರ್ವಹಿಸುತ್ತಿದೆ. ಈಗಾಗಲೇ ಕಾಮಗಾರಿ ಆರಂಭಗೊಂಡು 9 ತಿಂಗಳು ಕಳೆದಿವೆ. ಪಿಲ್ಲರ್‌ಗಳ ನಿರ್ಮಾಣ ಹಂತ ಭಾಗಶಃ ಅರ್ಧಷ್ಟು ಮುಕ್ತಾಯಗೊಂಡಿದೆ. ಕಾಮಗಾರಿಯು ಮಳೆ ಹಾಗೂ ಕೊರೊನಾ ಸೋಂಕಿನ ಕಾರಣದಿಂದಾಗಿ ಮಂದಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಯನ್ನು ಸ್ವಲ್ಪ ಚುರುಕುಗೊಳಿಸಿದರೆ ಮುಂದಿನ ಮೂರ್ನಾಲ್ಕುತಿಂಗಳುಗಳಲ್ಲಿ ಕಾಮಗಾರಿ ಮುಗಿದು ಸಾರ್ವಜನಿಕರ ಸಂಚಾರಕ್ಕೆ ಬಹುಬೇಗನೆ ಸಿಗುತ್ತದೆ ಎಂಬುವುದು ಸಾರ್ವಜನಿಕರ ಆಶಯ.
ಸೇತುವೇಕಾಮಗಾರಿ ನಡೆಯುತ್ತಿದೆ ಎಂಬುವುದು ಮುಖ್ಯವಲ್ಲ. ಕಾಮಗಾರಿಯು ಯಾವ ಗುಣಮಟ್ಟದಲ್ಲಿದೆ ಸಾಗುತ್ತಿದೆ ಎಂಬುವುದು ಮುಖ್ಯವಾಗಿದೆ. ಆದ್ದರಿಂದ ಸೇತುವೆ ಕಾಮಗಾರಿಯ ಹೊಣೆ ಹೊತ್ತಿರುವ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿಕಳಪೆ ಕಾಮಗಾರಿ ನಡೆಯದಂತೆ ಕ್ರಮ ವಹಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು.
ಈ ಸೇತುವೆ ನಿರ್ಮಾಣದಿಂದ ಎರಡು ತಾಲೂಕುಗಳ ಲಕ್ಷಾಂತರ ಜನರ ಸಂಪರ್ಕದಕೊಂಡಿಯಾಗಿದೆ. ಇದಕ್ಕೆ ಶ್ರಮಿಸಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಾಸಕ ಎಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಮಂಜೇಗೌಡ್ರು, ಎಲ್ಲಾ ಪಕ್ಷದ ನಾಯಕರಿಗೆ ಗ್ರಾಮದ ಮುಖಂಡ ಕೃಷ್ಣೇಗೌಡ ಅಭಿನಂದನೆ ಸಲ್ಲಿಸಿದರು.
ಹಲವು ದಶಕಗಳಿಂದಲೂ ಸೇತುವೆ ನಿರ್ಮಾಣಕ್ಕಾಗಿ ಹೋರಾಟಮಾಡುತ್ತಬಂದಿದ್ದೆವು. ಸ್ಥಳೀಯರ ಬಹುದಿನಗಳ ಕನಸು ನನಸಾಗಿದೆ. ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೇತುವೆ ಕಾಮಗಾರಿಯನ್ನು ಚುರುಕುಗೊಳಿಸಿಬೇಕಿದೆ. -ಕೃಷ್ಣೇಗೌಡ, ಗ್ರಾಮದ ಮುಖಂಡ
-ಟಿ.ಕೆ.ಕುಮಾರಸ್ವಾಮಿ ಬೈರಾಪುರ