ಹಾಸನ: ಶಾಂತಿಗ್ರಾಮದ ಬಳಿ ಇರುವ ಗಾಡೇನಹಳ್ಳಿಯ 11ನೇ ಕೆಎಸ್‌ಆರ್‌ಪಿ ಪಡೆ ಕೇಂದ್ರದ ಆವರಣದಲ್ಲಿ ಕಾರ್ಗಿಲ್ ವಿಜಯ ದಿವಸ್ ಹಾಗೂ ಜಲಶಕ್ತಿ ಅಭಿಯಾನವನ್ನು ವಿಭಿನ್ನವಾಗಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಅಕ್ರಂಪಾಷಾ, 11ನೇ ಕೆಎಸ್‌ಆರ್‌ಪಿ ಪಡೆಯ ಕಮಾಂಡೆಂಟ್ ಕೃಷ್ಣಪ್ಪ, ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ಹಾಸನ ಉಪ ವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಸಸಿ ನೆಟ್ಟು ಕಾರ್ಗಿಲ್ ವಿಜಯ ದಿನವನ್ನು ಆಚರಿಸಿದರು.
ಕೆಎಸ್‌ಆರ್‌ಪಿ ಬೆಟಾಲಿನ್ ಆವರಣದ ಸ್ವಚ್ಛತೆ ಅಭಿವೃದ್ಧಿ ಕಾರ್ಯ, ಜಲಸಂರಕ್ಷಣೆ, ವನಸಂವರ್ಧನೆ ಕಾರ್ಯಗಳನ್ನು ಕಂಡು ಜಿಲ್ಲಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದರು. ಸಂಸ್ಥೆ ಅಭಿವೃದ್ಧಿಗೆ ಸಹಕಾರ ನೀಡಲಿದ್ದು ಇನ್ನಷ್ಟು ಗಿಡಮರಗಳನ್ನು ನೆಟ್ಟು ಬೆಳೆಸಿ ಎಂದು ಪ್ರೋತ್ಸಾಹಿಸಿದರು.
ಕಮಾಂಡೆಂಟ್ ಕೃಷ್ಣಪ್ಪ ಅವರು ಕಳೆದ 5 ವರ್ಷಗಳಿಂದ ಗಾಡೇನಹಳ್ಳಿ ಕೇಂದ್ರದಲ್ಲಿ ಮಾಡ ಲಾಗಿರುವ ರಚನಾತ್ಮಕ ಅಭಿವೃದ್ಧಿಯನ್ನು ವಿವರಿಸಿ ದರು. ತಹಶೀಲ್ದಾರ್ ಮೇಘನಾ, ಜಿಲ್ಲಾ ವಾರ್ತಾ ಧಿಕಾರಿ ವಿನೋದ್‌ಚಂದ್ರ ಮತ್ತಿತರರು ಇದ್ದರು.
ಹುತಾತ್ಮರಿಗೆ ಶ್ರದ್ಧಾಂಜಲಿ: ಕುವೆಂಪು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪಾರ್ಕ್ ಆವರಣದಲ್ಲಿ ಕಾರ್ಗಿಲ್ ದಿನಾಚರಣೆ ಅಂಗವಾಗಿ ಮಡಿದ ಯೋಧರಿಗೆ ಜಿಲ್ಲಾಧಿಕಾರಿ ಅಕ್ರಂಪಾಷಾ ಶ್ರದ್ಧಾಂಜಲಿ ಅರ್ಪಿಸಿದರು. ಇದೇ ವೇಳೆ ನಿವೃತ್ತ ಯೋಧ ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.