Advertisement
ಯುದ್ಧ ಶುರುವಾಗಿದ್ದೇ ಪಾಕ್ ನಾಟಕದಿಂದಪ್ರಸ್ತುತ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್‌ಗೆ ಸೇರಿರುವುದು ಕಾರ್ಗಿಲ್ ಜಿಲ್ಲೆ. 2019ಕ್ಕೂ ಮುನ್ನ ಇದು ಜಮ್ಮುಕಾಶ್ಮೀರಕ್ಕೆ ಸೇರಿತ್ತು. ಪಾಕಿಸ್ಥಾನ ಸೇನೆ ಸಿಯಾಚಿನ್ ನೀರ್ಗಲ್ಲು ಪ್ರದೇಶದ ಮೇಲೆ ಕಣ್ಣಿಟ್ಟು, ಗಡಿ ನಿಯಂತ್ರಣ ರೇಖೆಯೊಳಗೆ ಪ್ರವೇಶಿಸಿತು. ಪಾಕಿಸ್ಥಾನದ ಉಗ್ರರೂ ಕೂಡ ಸೇನಾ ಸಮವಸ್ತ್ರ ಧರಿಸಿದ್ದರು. ಈಗಿನ ಕಾರ್ಗಿಲ್ ಬೆಟ್ಟಗಳು, ಮುಶೊRà ಕಣಿವೆ, ದ್ರಾಸ್, ಬಟಾಲಿಕ್‌ನಲ್ಲಿ ಪಾಕ್ ಸೈನಿಕರು ಕಾಣಿಸಿಕೊಂಡಿದ್ದರು. ಇವರನ್ನು ಆ ಜಾಗಗಳಿಂದ ಹೊರಗಟ್ಟಲು ಭಾರತೀಯ ಸೇನೆ ವಾಯುಪಡೆ ನೆರವಿನೊಂದಿಗೆ ಕೈಗೊಂಡಿದ್ದೇ ಆಪರೇಶನ್ ವಿಜಯ್.
– ಲೆ| ಹಿತೇಶ್, ಲ್ಯಾನ್ಸ್ ನಾಯಕ್ ಬಚ್ಚನ್ ಸಿಂಗ್ ಪುತ್ರ ಯುದ್ಧದ ಮುಖ್ಯಾಂಶಗಳು
1 ಕಾರ್ಗಿಲ್ ಯುದ್ಧ ಎರಡು ತಿಂಗಳು,
3 ವಾರ, 2 ದಿನಗಳ ಕಾಲ ನಡೆಯಿತು.
2 ಮೇ 3ರಂದು ಸ್ಥಳೀಯ ಕೆಲವು ಕುರಿಗಾಹಿಗಳು ಕಾರ್ಗಿಲ್‌ನ ಪರ್ವತ ಪ್ರದೇಶದಲ್ಲಿ ಅಸಹಜ ಚಟುವಟಿಕೆಗಳನ್ನು ಗಮನಿಸಿದರು. ಅದನ್ನು ತತ್‌ಕ್ಷಣ ಭಾರತೀಯ ಸೇನೆಯ
ಗಮನಕ್ಕೆ ತಂದರು.
3 ಮೇ 5ಕ್ಕೆ ಭಾರತೀಯ ಸೇನೆ ಸ್ಥಳಕ್ಕೆ ಪ್ರವೇಶಿಸಿತು. ಆಗ ಐವರು ಭಾರತೀಯ ಯೋಧರನ್ನು ವಶಕ್ಕೆ ತೆಗೆದುಕೊಂಡ ಪಾಕ್ ಸೈನಿಕರು, ಅವರನ್ನು ಕೊಂದರು.
4 ಮೇ 9ಕ್ಕೆ ಪಾಕ್ ಸೇನೆಯಿಂದ ಕಾರ್ಗಿಲ್ ವಲಯದಲ್ಲಿ ಭಾರೀ ಶೆಲ್ ದಾಳಿ ನಡೆಯಿತು. ಗಡಿ ನಿಯಂತ್ರಣ ರೇಖೆಯಲ್ಲಿ ಬರುವ ದ್ರಾಸ್, ಕಕ್ಸರ್, ಮುಶೊRàಹ್‌ನಲ್ಲಿ ಒಳನುಸುಳುಕೋರರು ಪತ್ತೆಯಾದರು.
5 ಮೇ 26ಕ್ಕೆ ಭಾರತೀಯ ವಾಯುಸೇನೆ ದಾಳಿಯನ್ನು ತೀವ್ರಗೊಳಿಸಿತು. ಪಾಕ್ ನುಸುಳುಕೋರರ ನಾಶ ಆರಂಭ.
6 ಜೂ. 6ರಂದು ಭಾರತೀಯ ಸೇನೆ ಬಟಾಲಿಕ್ ವಲಯದಲ್ಲಿದ್ದ ಎರಡು ಮುಖ್ಯ ಪ್ರದೇಶಗಳನ್ನು ವಶಪಡಿಸಿಕೊಂಡಿತು. ಜೂ.13ಕ್ಕೆ ತೊಲೊಲಿಂಗ್ ವಶವಾಯಿತು.
7 ಜು. 4ರಂದು ಭಾರತದ ಮೂರು ಸೇನಾಪಡೆಗಳಾದ ಸಿಖ್, ಗ್ರೆನೇಡಿಯರ್ಸ್, ನಾಗಾಗಳು ಸತತ 12 ಗಂಟೆಗಳ ಕಾಲ ಹೋರಾಟ ನಡೆಸಿ, ಟೈಗರ್ ಹಿಲ್ ಅನ್ನು ವಶಪಡಿಸಿಕೊಂಡವು. ಈ ಹೋರಾಟದಲ್ಲಿ ಪಾಕ್‌ನ 10 ಹತ್ತು ಸೈನಿಕರು ಸಾವನ್ನಪ್ಪಿದರು. ಭಾರತದ ಐವರು ಹುತಾತ್ಮರಾದರು.
8 ಜು. 5ರಂದು ಪಾಕಿಸ್ಥಾನ ಪ್ರಧಾನಿ ನವಾಜ್ ಷರೀಫ್ ತಮ್ಮ ಸೇನೆಗೆ ಹಿಂತಿರುಗಿ ಬರಲು ಆದೇಶ ನೀಡಿದರು. ಭಾರತ ಗಡಿ ನಿಯಂತ್ರಣ ರೇಖೆಯನ್ನು ಪೂರ್ಣವಾಗಿ ಮರುವಶ ಮಾಡಿಕೊಳ್ಳುವ ಯತ್ನಕ್ಕೆ ಚಾಲನೆ ನೀಡಿತು.
9 ಜು. 26ಕ್ಕೆ ಕಾರ್ಗಿಲ್ ಯುದ್ಧ ಅಧಿಕೃತವಾಗಿ ಮುಗಿಯಿತು. ಭಾರತ ವಿಜಯೋತ್ಸವ ಆಚರಿಸಿತು. ಪಾಕಿಸ್ಥಾನಕ್ಕೆ ಮುಖಭಂಗ.
10 ಯುದ್ಧದಲ್ಲಿ ಭಾರತೀಯ ಯೋಧರು, ಸೇನಾಧಿಕಾರಿ ಗಳು ಸೇರಿ ಒಟ್ಟು 450ಕ್ಕೂ ಅಧಿಕ ಮಂದಿ ಹುತಾತ್ಮ ರಾದರು. ಒಟ್ಟಾರೆ 13,000 ಮಂದಿಗೆ ತೀವ್ರ ಗಾಯಗಳಾದವು.
11 ಪಾಕಿಸ್ಥಾನದ 5,000 ಸೈನಿಕರು ಕಾರ್ಗಿಲ್‌ನ ವಿವಿಧ ಭಾಗಗಳಿಗೆ ಪ್ರವೇಶಿಸಿದ್ದರು ಎನ್ನಲಾಗಿದೆ. ಅಂದಾಜು 696 ಪಾಕ್ ಸೈನಿಕರು ಜೀವ ಕಳೆದುಕೊಂಡರು.
Related Articles
ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ಭಾರತೀಯ ಯೋಧರೆಲ್ಲರೂ ಅಸಾಮಾನ್ಯ ತ್ಯಾಗಿಗಳೇ. ಈ ಪೈಕಿ ಐವರು ವೀರರ ಸ್ಮರಣೆಯನ್ನು ಇಲ್ಲಿ ಮಾಡಿಕೊಳ್ಳಲಾಗಿದೆ.
Advertisement
ಕ್ಯಾ| ವಿಕ್ರಮ್ ಬಾತ್ರಾ, 13 ಜಮ್ಮುಕಾಶ್ಮೀರ ರೈಫಲ್ಸ್ಕ್ಯಾ| ವಿಕ್ರಮ್ ಬಾತ್ರಾ ಹುತಾತ್ಮರಾದಾಗ ಅವರ ವಯಸ್ಸು ಕೇವಲ 24! ದ್ರಾಸ್ ಉಪವಲಯ ದಲ್ಲಿ ಬರುವ ಎತ್ತರದ ಪರ್ವತ ಪ್ರದೇಶ ಪಾಯಿಂಟ್ 4875 ಅನ್ನು ಪಾಕ್ ಸೇನೆಯ ನಿಯಂತ್ರಣದಿಂದ ಬಿಡಿಸಲು ಅವರು ತಮ್ಮ ತಂಡವನ್ನು ಒಯ್ದಿದ್ದರು. ಆ ವೇಳೆ ಅವರಿಗೆ ವಿಪರೀತ ಜ್ವರ. ಇಂತಹ ಹೊತ್ತಿನಲ್ಲಿ ಅವರು ಮೇಲೇರಿ ಶತ್ರುಗಳ ಮಷಿನ್ ಗನ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಅವರು ತಮ್ಮ ಸಹ ಅಧಿ ಕಾರಿಯೊಬ್ಬರನ್ನು ರಕ್ಷಿಸಲು ಹೋಗಿ ಹುತಾತ್ಮರಾ ದರು. ಇವರಿಗೆ ಮರಣೋ ತ್ತರ ಪರಮವೀರ ಚಕ್ರ ನೀಡಲಾ ಗಿದೆ. ಸಿಯಾಚಿನ್ ಸಂಘರ್ಷವೇ ಕಾರಣ
ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಭಾರತೀಯ ವ್ಯಾಪ್ತಿಯಲ್ಲಿ ಬರುವ ಕಾಶ್ಮೀರದ ನಡುವೆ ಇರುವುದೇ ಗಡಿ ನಿಯಂತ್ರಣ ರೇಖೆ. ಈ ರೇಖೆಯ ಉತ್ತರ ಭಾಗದಲ್ಲಿರುವುದೇ ಸಿಯಾಚಿನ್ ನೀರ್ಗಲ್ಲು ಪ್ರದೇಶ. ದಕ್ಷಿಣ ಭಾಗದಲ್ಲಿ ಪಾಕ್ ವ್ಯಾಪ್ತಿ ಯಲ್ಲಿ ಬರುವ ಪಂಜಾಬ್ ಪ್ರಾಂತವಿದೆ. ಮೇಲ್ಭಾ ಗದಲ್ಲಿರುವ ಸಿಯಾಚಿನ್ ಅನ್ನು ನಿಯಂ ತ್ರಣಕ್ಕೆ ತೆಗೆದುಕೊಳ್ಳಲು ಪಾಕ್ ಮೊದ ಲಿಂದಲೂ ಹವಣಿಸುತ್ತಲೇ ಇತ್ತು. 1984ರಲ್ಲಿ ಭಾರತೀಯ ಸೇನೆ ಪಾಕ್‌ಗೆ ಮಾರಣಾಂತಿಕ ಹೊಡೆತ ನೀಡಿತು. ಅರ್ಥಾತ್ ಲಡಾಖ್‌ನ ಕಾರಕೋರಂ ಪರ್ವತಶ್ರೇಣಿಯಲ್ಲಿ ಬರುವ ಈ ಭಾಗವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಅಲ್ಲಿಂದಲೇ ಶುರುವಾಗಿದ್ದು ಈ ಸಂಘರ್ಷ. ಅದರ ಪರಿಣಾಮವೇ
ಕಾರ್ಗಿಲ್ ಯುದ್ಧ. ಲೆ| ಬಲ್ವಾನ್ ಸಿಂಗ್ (18 ಗ್ರೆನೇಡಿಯರ್ಸ್)
ಕಾರ್ಗಿಲ್ ಯುದ್ಧದಲ್ಲಿ ನಿರ್ಣಾಯಕವಾಗಿದ್ದು ಟೈಗರ್ ಹಿಲ್. ಅದನ್ನು ವಶಪಡಿಸಿಕೊಂಡಾಗಲೇ ಭಾರತದ ಗೆಲುವು ಅಧಿಕೃತ ವಾಗಿ ನಿರ್ಣಯವಾಗಿದ್ದು. ಇದಾದ ಮೇಲೆ ಪಾಕ್ ಸೇನೆ ಹಿಮ್ಮೆಟ್ಟಲಾರಂಭಿಸಿತ್ತು. ಇಂತಹ ಪಡೆಯನ್ನು ನಡೆಸಿದ್ದು ಲೆ| ಬಲ್ವಾನ್ ಸಿಂಗ್. ಅವರು ತಮ್ಮ “ಘಾತಕ್ ಪ್ಲಟೂನ್’ ತಂಡ ದೊಂದಿಗೆ ಸತತ 12 ಗಂಟೆ ನಡೆದು ಪರ್ವತದ ತುದಿಯನ್ನೇರಿ ದರು. ತಾವೇ 4 ಪಾಕ್ ಸೈನಿಕರನ್ನು ಕೊಂದರು. ಹೋರಾಟದಲ್ಲಿ ಗಂಭೀರ ಗಾಯಗೊಂಡರೂ ಟೈಗರ್ ಹಿಲ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದರು. ಅವರಿಗೆ ಮಹಾವೀರ ಚಕ್ರ ನೀಡಲಾಯಿತು. ಯೋಗೇಂದ್ರ ಸಿಂಗ್ ಯಾದವ್ (18 ಗ್ರೆನೇಡಿಯರ್ಸ್)
ಆಗ ಯೋಗೇಂದ್ರ ಸಿಂಗ್‌ಗೆ ಕೇವಲ 19 ವರ್ಷ. ಜು.4, 1999ರಂದು ಟೈಗರ್ ಹಿಲ್ ವಶಪಡಿಸಿಕೊಳ್ಳುವ ಹಂತದಲ್ಲಿ 15 ಗುಂಡೇಟು ತಗು ಲಿಯೂ ಬದುಕುಳಿದರು! ತಾವೊಬ್ಬರೇ 4 ಶತ್ರು ಸೈನಿಕರನ್ನು ನಾಶ ಮಾಡಿದರು. ಈ ವೇಳೆ ಅವರ ಎಡಗೈ ಸಂಪೂರ್ಣ ನಿಷ್ಕ್ರಿಯವಾಗಿತ್ತು. ಆಗ ತಮ್ಮ ಕೈಗೆ ಬೆಲ್ಟ್ ಕಟ್ಟಿಕೊಂಡು ದಾಳಿ ಮುಂದುವರಿಸಿದರು. ಪರಿಣಾಮ ಪಾಕ್ ಸೈನಿಕರು ಪರಾರಿಯಾದರು. ಚಿಕ್ಕ ವಯಸ್ಸಲ್ಲಿ ಪರಮವೀರ ಚಕ್ರ ಪಡೆದ ವ್ಯಕ್ತಿ ಎಂಬ ದಾಖಲೆ ಬರೆದರು. ಮೇ| ರಾಜೇಶ್ ಅಧಿಕಾರಿ (18 ಗ್ರೆನೇಡಿಯರ್ಸ್)
ಮೇಜರ್ ರಾಜೇಶ್ ಅಧಿಕಾರಿ ಯೋಧರ ಪಡೆಯೊಂದನ್ನು ಕಟ್ಟಿಕೊಂಡು 16,000 ಅಡಿ ಎತ್ತರದಲ್ಲಿ ತೊಲೊಲಿಂಗ್‌ನಲ್ಲಿದ್ದ ಬಂಕರ್ ಒಂದನ್ನು ವಶಕ್ಕೆ ಪಡೆಯಬೇಕಿತ್ತು. ಆಗವರು ಪಾಕ್ ಸೈನಿಕರೊಂದಿಗೆ ನೇರಾನೇರ ಕದನಕ್ಕಿಳಿದರು. ಗಂಭೀರ ಗಾಯ ಗೊಂಡ ಅವರು ಮೇ 15ರಂದು ಮರಣವನ್ನಪ್ಪಿದರು. ಮೃತ ದೇಹ ಸಿಕ್ಕಿದ್ದು 13 ದಿನಗಳ ಅನಂತರ! ಅವರಿಗೆ ಮರಣೋತ್ತರ ಮಹಾವೀರ ಚಕ್ರ ಪ್ರಶಸ್ತಿ ನೀಡಲಾಯಿತು. ಮೇಜರ್ ವಿವೇಕ್ ಗುಪ್ತಾ (2 ಆರ್‌ಆರ್)
ಮೇ| ವಿವೇಕ್ ಗುಪ್ತಾ ಮುಂದೆ ದ್ರಾಸ್‌ನಲ್ಲಿದ್ದ ಪಾಕ್ ಸೈನಿಕರನ್ನು ಹೊಡೆದೋಡಿಸುವ ಸವಾಲಿತ್ತು. ಈ ಹೋರಾಟದಲ್ಲಿ 2 ಬಂಕರ್‌ಗಳನ್ನು ಪಾಕ್ ಹಿಡಿತದಿಂದ ಪಾರು ಮಾಡಿದರು. ಆಗ ಗುಂಡುಗಳು ಅವರ ಹೊಟ್ಟೆಯೊಳಗಿನಿಂದ ತೂರಿ ಹೋದವು. ಅವರ ಶರೀರ ಸತತ 2 ದಿನ ಹಾಗೇ ಬಿದ್ದುಕೊಂಡಿತ್ತು. ಇವರಿಗೆ ಮರಣೋತ್ತರ ಮಹಾವೀರ ಚಕ್ರ ಪ್ರಶಸ್ತಿ ನೀಡಲಾಯಿತು.