ಹತ್ತೂಂಬತ್ತನೇ ಶತಮಾನದಲ್ಲಿ ಪಶ್ಚಿಮ ಘಟ್ಟದ ದಟ್ಟವಾದ ಕಾಡುಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಶ್ರೀಗಂಧ ಮರಗಳ ಕಳ್ಳಸಾಗಾಣಿಕೆಯ ಕಥಾ ಹಂದರ ಈಗ “ಕಾರ್ಗಲ್ ನೈಟ್ಸ್’ ಹೆಸರಿನಲ್ಲಿ ಸಿನಿಮಾ ರೂಪದಲ್ಲಿ ತೆರೆಮೇಲೆ ಬರುತ್ತಿದೆ.
ನಿರ್ದೇಶಕ ದೇವರಾಜ್ ಪೂಜಾರಿ ಮತ್ತು ತಂಡ ಇಂಥದ್ದೊಂದು ಕಥೆಯನ್ನು ಸಿನಿಮಾದ ಮೂಲಕ ಹೇಳುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾರ್ಗಲ್‌ನಲ್ಲಿ 90ರ ದಶಕದಲ್ಲಿ ನಿಗೂಢವಾಗಿ ನಡೆಯುತ್ತಿದ್ದ ಶ್ರೀಗಂಧದ ಮರಗಳ ಕಳ್ಳಸಾಗಾಣಿಕೆಯ ನೈಜ ಘಟನೆಗಳು ಮತ್ತು ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ದಾಖಲಿಸಿ ಚಿತ್ರದ ಕಥೆಯನ್ನು ಹೆಣೆಯಲಾಗಿದೆ.
“ಕಾರ್ಗಲ್ ನೈಟ್ಸ್’ ಚಿತ್ರದ ಮೂಲಕ ಹರ್ಶಿಲ್ ಕೌಶಿಕ್ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ರಾಗ್ ಯುಆರ್ ಎಸ್, ಕಿಶೋರ್, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರ್, ಹರೀಶ್ ಭಟ್ ನೀನಾಸಂ, ಸಂದೀಪ್ ಪರಶುರಾಮ್, ವರುಣ್ ಹೆಗ್ಡೆ, ಅಕ್ಷತಾ ಅಶೋಕ್, ಚಂದ್ರಕಾಂತ್, ರಾಜೇಶ್ ರಾಮಕೃಷ್ಣ, ಶಶಿಧರ್ ಗೌಡ, ಶ್ರೀಗಂಧ್ ನಾಗ್, ನರೇಂದ್ರ ಕಬ್ಬಿನಾಲೆ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:ಉದಯವಾಣಿ ಜೊತೆ ‘ಸಲಗ’ ಸಂಭ್ರಮ
ಚಿತ್ರಕ್ಕೆ ಅರುಣ್ ಎ.ಎನ್. ಆರ್ ಛಾಯಾಗ್ರಹಣ, ರೋಷನ್ ಲೋಕೇಶ್ ಸಂಕಲನವಿದೆ. ಚಿತ್ರಕ್ಕೆ ಹಾಡುಗಳಿಗೆ ಸುರೇಂದ್ರನಾಥ್ ಬಿ. ಆರ್ ಸಂಗೀತ ಸಂಯೋಜಿಸಿದ್ದಾರೆ. “ಓಂಕಾರ್ ಪ್ರೊಡಕ್ಷನ್’ ಮತ್ತು “ಕಾಳಿಕಾ ಪ್ರೊಡಕ್ಷನ್ಸ್’ ಬ್ಯಾನರ್ ನಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ.