Advertisement
ಸ್ಥಳ ಪುರಾಣ: ಶಕ್ತಿ ದೇವರಾದ ಮಾರಮ್ಮ, ಸಿಂಗಮ್ಮ, ಕೆಂಕೇರಮ್ಮ ಸೇರಿ ಐವರು ಸಹೋದರಿಯರು ಹೋಬಳಿಯ ವಿವಿಧ ಗ್ರಾಮಗಳಲ್ಲಿ ನೆಲೆಸಿದ್ದಾರೆ. ಹೋಬ ಳಿಯ ಗಡಿ ಕಾಯುವ ದೇವರಾಗಿ ದೇವಿ ನೆಲೆಸಿದ್ದು, ಜನ, ಜಾನು ವಾರು ರಕ್ಷಕಿಯಾಗಿ ನೆಲೆಸಿದ್ದಾಳೆ.
Related Articles
Advertisement
ಘಟನಾ ಸ್ಥಳದಲ್ಲಿ ಬಂಡೆ, ಕುರುಚಲು ಗಿಡ ಮಾತ್ರ ಇರುವುದನ್ನು ಕಂಡು ಮತ್ತಷ್ಟು ಭಯಗೊಂಡು ಗ್ರಾಮಕ್ಕೆ ವಾಪಸ್ಸಾಗುತ್ತಾನೆ. ಗ್ರಾಮಕ್ಕೆ ತೆರಳಿ ನಡೆದ ಘಟನೆಯನ್ನು ಊರಿನ ಪ್ರಮುಖರಿಗೆ ತಿಳಿಸುತ್ತಾನೆ. ಗ್ರಾಮದ ಜನ ಒಟ್ಟಿಗೆ ಸೇರಿ ಕಾರೆಮೆಳೆ ಸ್ಥಳಕ್ಕೆ ಆಗಮಿಸುತ್ತಾರೆ. ಹುಲಿ, ಕಿರುಬ ತಿಂದಿರಬಹುದು ಎಂದು ಗೋಪಾಲಕನಿಗೆ ತಿಳಿಸಿ ಗ್ರಾಮಕ್ಕೆ ವಾಪಸ್ಸಾಗುತ್ತಾರೆ. ಗ್ರಾಮದ ಓರ್ವ ಹಿರಿಕರಿಗೆ ಕನಸಿನಲ್ಲಿ ದೇವಿ ಪ್ರತ್ಯಕ್ಷವಾಗಿ ನಡೆದ ಘಟನೆಯನ್ನು ತಿಳಿಸುತ್ತಾಳೆ. ಗೋವು ಅದೃಶ್ಯವಾದ ಸ್ಥಳದಲ್ಲಿ ತಾನು ಗುಮಚಿ ಆಕೃತಿಯಲ್ಲಿ(ಕಲ್ಲಿನ) ನೆಲೆಸಿರುವುದಾಗಿ ತಿಳಿಸಿ, ಸ್ಥಳದಲ್ಲಿ ಗುಡಿ ನಿರ್ಮಿಸಿ, ಪೂಜಿಸಿ. ಗ್ರಾಮದ, ಜಾನುವಾರುಗಳ ರಕ್ಷಕಿಯಾಗಿ ನೆಲೆಸುವುದಾಗಿ ನುಡಿಯುತ್ತಾಳೆ.
ಗ್ರಾಮದ ಹಿರಿಯರು ನಡೆದ ಘಟನೆ ಬಗ್ಗೆ ಚರ್ಚಿಸಿ, ಗ್ರಾಮದ ಬೋರೆ ಸ್ಥಳಕ್ಕೆ ತೆರಳಿ ದೇವಿ ತಿಳಿಸಿದ ಸ್ಥಳಕ್ಕೆ ಹುಡುಕಾಟ ನಡೆಸುತ್ತಾರೆ. ಬಂಡೆಯಂತಿರುವ ಜಾಗದಲ್ಲಿ ಗುಮಚಿ ಆಕಾರವಾಗಿ ಕಲ್ಲಿನಲ್ಲಿ ಮೂಡಿರುವುದನ್ನು ಕಂಡು ದೇವಿಯಲ್ಲಿ ಪ್ರಾರ್ಥಿಸಿಕೊಂಡು ಸ್ಥಳವನ್ನು ಖಚಿತಪಡಿಸಿಕೊಳ್ಳುತ್ತಾರೆ.
ದೇವಿ ತಿಳಿಸಿದಂತೆ ಕಲ್ಲಿನಲ್ಲಿ ಗುಡಿ ಕಟ್ಟಲು ಆರಂಭಿಸಿ ಪೂರ್ವಕ್ಕೆ ಬಾಗಿಲು ನಿರ್ಮಿಸಲು ಮುಂದಾಗುತ್ತಾರೆ. ವರ್ಷಕ್ಕೆ ಒಮ್ಮೆ ಗ್ರಾಮಸ್ಥರು ಸೇರಿ ದೇವಿಗೆ ಬಲಿ ಅರ್ಪಿಸಿ ಶಾಂತಿಗೊಳಿಸುವುದು. ಜಾನುವಾರು, ಕುರಿ ಮಂದೆಯನ್ನು ಶ್ರದ್ಧಾಭಕ್ತಿಯಿಂದ ತಂದು ಗುಡಿ ಸುತ್ತ ಪ್ರದಕ್ಷಿಣೆ ಹಾಕಿಸುವುದು, ದೇವಿ ಶಾಂತಿಗಾಗಿ ಹೋಮ ಹವನಾದಿ, ಪೂಜೆ, ನೈವೇದ್ಯ ಅರ್ಪಿಸುವುದಾಗಿ ಗುಡಿ ಬಳಿ ದೇವಿಗೆ ವಾಗ್ದಾನ ಮಾಡುತ್ತಾರೆ. ಅಂದಿನಿಂದ ಗ್ರಾಮದಲ್ಲಿ ಹಸು ಕರು ಹಾಕಿದಾಗ ಮೊದಲ ಹಾಲನ್ನು ಗಿಣ್ಣಿನಂತೆ ನೈವೇದ್ಯ ಮಾಡಿಕೊಂಡು ಗುಡಿಗೆ ರೈತರು ತಂದು, ಮೊಸರಿನ ತಳಿಗೆ ಮಾಡಿಕೊಂಡು ದೇವಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಇದರಿಂದ ಹಸು ಕರು ರೋಗರುಜಿನ ಬಾರದಂತೆ ಬದುಕಲಿವೆ ಎಂಬ ಮಹಿಮೆ ಇದೆ. ಕುರಿಗಾಹಿಗಳು ತಮ್ಮ ಕುರಿ, ರೈತರು ತಮ್ಮ ಜಾನುವಾರುಗಳಿಗೆ ಕೋಡಬಳೆ, ಚಕ್ಕುಲಿ ಹಾರ ಹಾಕಿಸಿಕೊಂಡು ದೇವಿ ಗುಡಿಗೆ ತಂದು ತೀರ್ಥ ಪ್ರೋಕ್ಷಣೆ ಮಾಡಿಸಿದರೆ ರೋಗ ತಗುಲಲಾರದು ಎಂಬ ನಂಬಿಕೆ ಇದೆ.
ಬಸ್ ಮಾರ್ಗಸೂಚಿ: ಕಿಕ್ಕೇರಿ ಹೋಬಳಿ ಗಡಿಯಂಚಿನ ಗ್ರಾಮಕ್ಕೆ ಖಾಸಗಿ ವಾಹನ ಸೌಲಭ್ಯವೂ ಉಂಟು. ಕಿಕ್ಕೇರಿ ಯಿಂದ ಚನ್ನರಾಯಪಟ್ಟಣ ಮಾರ್ಗ ಮಧ್ಯೆ ಮಾದಾ ಪುರ ತಿರುವು ಬಳಿ ಸಾಗಬೇಕು. ಕಿಕ್ಕೇರಿಗೆ 8 ಕಿ.ಮೀ. ಅಂತರವಿದೆ. ಶ್ರವಣಬೆಳಗೊಳ ಮಾರ್ಗವಾಗಿ ಕಾಂತರಾಜಪುರದ ಅಡ್ಡದಾರಿ ಯಿಂದ, ಹೊಳೆನರಸೀಪುರ ಮಾರ್ಗವಾಗಿ ಮಾದಾಪುರ ಗ್ರಾಮದಿಂದ ಬರಬಹುದಾಗಿದೆ.
ಪ್ರತಿ ವರ್ಷ ಜಾತ್ರೋತ್ಸವ: ವಿಜಯ ರಾಮೇಗೌಡ: ತಾಲೂಕಿನಲ್ಲಿನ ಗವಿರಂಗನಾಥನ ಗುಡಿಯಂತೆ ಇಲ್ಲಿರುವ ಸಿಂಗಮ್ಮ ದೇವಿ ಗುಡಿಗೆ ಇತಿಹಾಸವಿದೆ. ನಂಬಿ ಬಂದವರಿಗೆ ಶಕ್ತಿ, ನೆಮ್ಮದಿ ನೀಡುವ ದೇವಿಯಾಗಿದ್ದಾಳೆ. ನಮ್ಮ ಅಜ್ಜಂದಿರು, ಪೂರ್ವಿಕರೂ ಈ ಗುಡಿಗೆ ಹಸು ಕರು ಹಾಕಿದಾಗ ಮೊದಲ ಗಿಣ್ಣ ಹಾಲನ್ನು ಅರ್ಪಿಸುತ್ತಿದ್ದರು. ದೇವಿ ಮಹಿಮೆಯ ಸಾಕ್ಷಿಯಾಗಿ ಪ್ರತಿ ವರ್ಷ ಕಾರ್ತಿಕ ಮಾಸದ ಕೊನೇ ಸೋಮವಾರದ ಮರುದಿನ ಮಂಗಳವಾರ ಅದ್ದೂರಿ ಜಾತ್ರೋತ್ಸವ ನಡೆಯಲಿದ್ದು ಸಾವಿರಾರು ಮಂದಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹಾಗೂ ಮಿತ್ರ ಫೌಂಡೇಷನ್ ಅಧ್ಯಕ್ಷರಾದ ಬೂಕನಕೆರೆ ವಿಜಯ ರಾಮೇಗೌಡ ತಿಳಿಸಿದರು.
ಇಂದು ವಾರ್ಷಿಕ ವಿಶೇಷ ಪೂಜೆ: ಗ್ರಾಮದಲ್ಲಿ ಮಗು ಜನನ, ಶುಭ ಕಾರ್ಯ ನಡೆಯಲು ಮೊದಲು ದೇವಿ ಗುಡಿಗೆ ಆಗಮಿಸಿ, ಪೂಜಿಸುವುದು. ಅಪ್ಪಣೆ ಪಡೆ ಯು ವುದು ಪ್ರತೀತಿ. ಗ್ರಾಮ- ಸುತ್ತಮುತ್ತಲಿನ ಜನತೆ ಹೊರ ಪಯಣ ಬೆಳೆಸುವಾಗ ತಪ್ಪದೇ ದೇವಿ ಗುಡಿಗೆ ತೆರಳಿ ಪೂಜಿಸು ವುದು ವಾಡಿಕೆ. ಅಲ್ಲದೇ, ತಮ್ಮ ಕಷ್ಟಕಾರ್ಪ ಣ್ಯಗಳಿದ್ದಲ್ಲಿ ದೇವಿಗೆ ಒಪ್ಪಿಸಿದರೆ ಯಶಸ್ಸು ಸಾಧ್ಯ ಎನ್ನುವುದು ದೇವಿಯ ಸ್ಥಳ ಪುರಾಣ ವಾಗಿದೆ. ಮಂಗಳವಾರ ವಾರ್ಷಿಕ ಪೂಜೆ ಜಾತ್ರೆ ವಿಜೃಂಭಣೆಯಿಂದ ನಡೆಯಲಿದ್ದು ಹತ್ತೂರ ಜನ ಭಾಗವಹಿಸಲಿದ್ದಾರೆ.
-ತ್ರಿವೇಣಿ