Advertisement

ಕರೀನಾ ಮೊಬೈಲ್‌ ನಂಬರ್‌ಗಾಗಿ ಐಟಿ ಖಾತೆಯನ್ನೇ ಹ್ಯಾಕ್‌ ಮಾಡಿದ!

04:24 PM Jan 03, 2017 | |

ಮುಂಬಯಿ: ಶಾರುಖ್ ಖಾನ್  ಅಭಿನಯದ ‘ಫ್ಯಾನ್‌’ ಚಿತ್ರ ನಿಜವಾಗಿಯೂ ಕಟ್ಟಾ ಅಭಿಮಾನಿಯೊಬ್ಬ ಕೆಲವೊಮ್ಮೆ ಹೇಗೆ  ಅಪಾಯಕಾರಿಯಾಗಬಲ್ಲ ಎನ್ನುವುದನ್ನು  ತೋರಿಸಿಕೊಟ್ಟಿದೆ. ಅಂತಹದ್ದೇ ಘಟನೆಯೊಂದು  ಕಳೆದ ತಿಂಗಳು ಗಂಡು ಮಗುವಿಗೆ ತಾಯಿಯಾದ ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌ ಅವರ ಪಾಲಿಗೆ ಅನುಭವಕ್ಕೆ ಬಂದಿದೆ. 

Advertisement

ಕಳೆದ ತಿಂಗಳಿನಲ್ಲಿ ಕರೀನಾ ಅವರ ಆದಾಯ ತೆರಿಗೆ ಖಾತೆಯನ್ನು ಅವರ ಕಟ್ಟಾ ಅಭಿಮಾನಿಯೊಬ್ಬ ಹ್ಯಾಕ್‌ ಮಾಡಿ ದಾಖಲೆಗಳನ್ನು ಪಡೆಯಲು ಯತ್ನಿಸಿದ್ದಾನೆ. ಅಚ್ಚರಿಯೆಂದರೆ ಆರೋಪಿ ಪ್ಯಾರಾಮಿಲಿಟರಿ ಪಡೆಗೆ ಸೇರಿದವನಾಗಿದ್ದು, ಆತನನನ್ನು ಮುಂಬಯಿಯ ಸೈಬರ್‌ ಸೆಲ್‌ ಪೊಲೀಸರು ಬಂಧಿಸಿದ್ದಾರೆ. 

ಕರೀನಾ ಅವರ ಸಿಎ ನೀಡಿದ ದೂರಿನಂತೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪು ಒಪ್ಪಿಕೊಂಡಿದ್ದು, ನಾನು ಕರೀನಾ ಅವರ  ಕಟ್ಟಾ ಅಭಿಮಾನಿ ಅವರ ಮೊಬೈಲ್‌ ನಂಬರ್‌ ಪಡೆಯುವುದಕ್ಕಾಗಿಯೇ ಐಟಿ ಖಾತೆಯನ್ನು ಹ್ಯಾಕ್‌ ಮಾಡಿದೆ. ಅವರಲ್ಲಿ ಒಂದು ಬಾರಿಯಾದರೂ ಮಾತನಾಡಬೇಕೆಂಬ ಮಹದಾಸೆ ನನ್ನದಾಗಿತ್ತು ಎಂದಿದ್ದಾನೆ. ಆತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next