Advertisement

ಅಣ್ಣನಾಗಲಿದ್ದಾನೆ ತೈಮೂರ್: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸೈಫ್- ಕರೀನಾ ದಂಪತಿ

12:00 PM Aug 13, 2020 | keerthan |

ಮುಂಬೈ: ಬಾಲಿವುಡ್ ನ ಸೆಲೆಬ್ರೆಟಿ ಕಪಲ್ ಸೈಫ್ ಆಲಿ ಖಾನ್ ಮತ್ತು ಕರೀನಾ ಕಪೂರ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಮ್ಮ ಕುಟುಂಬಕ್ಕೆ ಇನ್ನೊಬ್ಬರ ನಿರೀಕ್ಷೆಯಲ್ಲಿದ್ದೇವೆ ಎಂದು ದಂಪತಿ ಹೇಳಿಕೊಂಡಿದ್ದಾರೆ.

Advertisement

2012ರಲ್ಲಿ ವಿವಾಹವಾಗಿದ್ದ ಸೈಫ್ ಆಲಿ ಖಾನ್ ಮತ್ತು ಕರೀನಾಗೆ 2016ರ ಡಿಸೆಂಬರ್ 20ರಂದು ಮೊದಲ ಮಗುವಾಗಿತ್ತು. ತಾರಾ ದಂಪತಿಯ ಪುತ್ರ ತೈಮೂರ್ ತನ್ನ ತುಂಟಾಟಗಳಿಂದ ಹಲವರ ಫೇವರೇಟ್ ಆಗಿದ್ದ.

ಬುಧವಾರ ಈ ಸ್ಟಾರ್ ದಂಪತಿ ಮುಂದಿನ ಮಗುವಿನ ಬಗ್ಗೆ ಹೇಳಿಕೊಂಡಿದ್ದು, ನಾವು ನಮ್ಮ ಕುಟುಂಬಕ್ಕೆ ಮತ್ತೊಬ್ಬರ ಸೇರ್ಪಡೆ ಕುರಿತು ನಿರೀಕ್ಷಿಸುತ್ತಿದ್ದೇವೆ. ಈ ವಿಚಾರ ಘೋಷಿಸಲು ತುಂಬಾ ಸಂತೋಷವಾಗುತ್ತಿದೆ ಎಂದರು. ಪ್ರೀತಿ ಬೆಂಬಲಕ್ಕಾಗಿ ನಮ್ಮ ಎಲ್ಲ ಹಿತೈಶಿಗಳಿಗೆ ಧನ್ಯವಾದಗಳು ಎಂದು ಸೈಫ್ ಅಲಿ ಖಾನ್ ಮತ್ತು ಕರೀನಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next