Advertisement

ಯತ್ನಾಳ್ ಮಕ್ಕಳು ನಾಡಗೀತೆ ಹಾಡಿದರೆ ಅವರ ಮನೆಕಸ ಗುಡಿಸುವೆ: ಕರವೇ ಎಂ.ಸಿ.ಮುಲ್ಲಾ ಸವಾಲು

12:15 PM Dec 03, 2020 | keerthan |

ವಿಜಯಪುರ: ನಾಡಗೀತೆ ನನ್ನ ಮಕ್ಕಳಿಂದ ಬಾಯಿಪಾಠದಲ್ಲಿ ಹಾಡಿಸುತ್ತೇನೆ. ಬಸನಗೌಡ ಯತ್ನಾಳ್ ತಮ್ಮ ಮಕ್ಕಳಿಂದ ನಾಡಗೀತೆಯನ್ನು ಬಾಯಿಪಾಠದಿಂದ ಹಾಡಿಸಲಿ. ಯತ್ನಾಳ ಅವರ ಮಕ್ಕಳು ನಾಡಗೀತೆಯನ್ನು ಹಾಡಿದರೆ ನಾನು ಅವರ ಮನೆಯ ಕಸ ಹೊಡೆಯುತ್ತೇನೆ ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ ಹೇಳಿದರು.

Advertisement

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಪರ ಸಂಘಟನೆಗಳ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಇಷ್ಟೊಂದು ಭಯ ಯಾಕೆ? ಈ ಹಿಂದೆ ಎಷ್ಟೆಲ್ಲಾ ಬಂದ್ ಆಗಿವೆ. ನಿಮ್ಮ ಬಂದ್ ಗೆ ಸ್ವಯಂಪ್ರೇರಿತ ಬೆಂಬಲ ನೀಡುವ ಆಸಕ್ತಿ ಹೊಂದಿದ್ದಾರೆ. ಆದರೆ ವ್ಯಾಪಾರಿಗಳು ಬಂದ್ ಗೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ ಎಂದರು.

ಯತ್ನಾಳ ಅವರಿಗೆ ಕರವೇ ಭಯ ಕಾಡುತ್ತಿದೆ. ಈ ಅಂಜಿಕೆ ಇರುವುದರಿಂದಲೇ ವ್ಯಾಪಾರಿಗಳು ಇತರ ಮುಖಂಡರ ಸಭೆ ಕರೆದು ಬಂದ್ ವಿಫಲಗೊಳಿಸಲು ಮನವಿ ಮಾಡಿದ್ದಾರೆ. ಈವರೆಗೆ ಯಾವ ಬಂದ್ ಸಂದರ್ಭದಲ್ಲೂ ಅವರು ಇಷ್ಡೊಂದು ಭಯಪಟ್ಟಿರಲಿಲ್ಲ ಎಂದು ಕುಟುಕಿದರು.

ಇದನ್ನೂ ಓದಿ:ಮಂಗಳೂರು ವಿವಾದಾತ್ಮಕ ಗೋಡೆ ಬರಹ ಪ್ರಕರಣ: ಓರ್ವ ಆರೋಪಿಯ ಬಂಧನ

ವಿವಾದಾತ್ಮಕ ಹೇಳಿಕೆಯಿಂದ ಹೆಸರು ಮಾಡುವ ಕೀಳು ರಾಜಕೀಯ‌ ಮಾಡುತ್ತಿದ್ದಾರೆ. ತಮ್ಮ ವಿರುದ್ಧ ಟೀಕೆ ಮಾಡಿದವರ ವಿರುದ್ಧ ಸದನದಲ್ಲಿ ಶಾಸಕರು ಹಕ್ಕುಚ್ಯುತಿ ಮಂಡಿಸುವುದಾಗಿ ಹೇಳಿದ್ದಾರೆ. ಕನ್ನಡಿಗರು, ಕನ್ನಡ ಪರ ಸಂಘಟನೆಗಳ ನಾಯಕರ ಬಗ್ಗೆ ಮಾತನಾಡುವ ಅಧಿಕಾರ ನೀಡಿದ್ದು ಯಾರು ಎಂದು ಪ್ರಶ್ನಿಸಿದರು.

Advertisement

ಕರ್ನಾಟಕ ರಾಜ್ಯದಲ್ಲಿ ಇರುವ ಕನ್ನಡಿಗರು, ಮರಾಠಾ ಸಮುದಾಯಗಳ ಮಧ್ಯೆ ಒಡಕು ಉಂಟು ಮಾಡುವ ಕೃತ್ಯ ಬಿಡಬೇಕು. ಕೇವಲ ಮರಾಠಿಗರ ಮತಗಳಿಂದ ನೀವು ಗೆದ್ದಿಲ್ಲ, ಎಲ್ಲ ಕನ್ನಡಿಗರ ಮತಗಳಿಂದ ಗೆದ್ದಿದ್ದೀರಿ. ಯಳ್ಳೂರು ಮಹಾರಾಷ್ಟ್ರ ಮರಾಠಿ ಪದ ಬಳಕೆ ಬೋರ್ಡ ಕಿತ್ತು ಹಾಕಿದ್ದೇ ಕರವೇ ವಿಜಯಪುರ ಕಾರ್ಯಕರ್ತರು. ನಮ್ಮ ಹೋರಾಟವನ್ನು ಅಪಮಾನಿಸಬೇಡಿ ಎಂದರು.

ಬೊಗಳುವ ಪ್ರಾಣಿಯನ್ನು ಯಾರೂ ಹುಲಿ ಎನ್ನಲಾಗದು, ಹಿಂದೂ ಹುಲಿ ಎಂದು ಕರೆದುಕೊಳ್ಳುವ ಅವರ ವರ್ತನೆ ಹುಲಿಯಂತಿಲ್ಲ, ಬೊಗಳುವ ಪ್ರಾಣಿಯಂತಿದೆ. ಮರಾಠಾ ಸಮುದಾಯದ ವಿರುದ್ಧ ನಮ್ಮ ಹೋರಾಟವಲ್ಲ, ನಮ್ಮ ವಿರೋಧವೂ ಇಲ್ಲ. ಚುನಾವಣೆ ತಂತ್ರಗಾರಿಕೆ ಮಾಡಲು ಚುನಾವಣೆ ಮತ ಕಬಳಿಸುವ ಗಿಮಿಕ್ ಮಾಡಲು ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ. ಎಂಇಎಸ್ ಬಲಪಡಿಸಲು ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ಸಿದ್ಧೇಶ್ವರ ದೇವಸ್ಥಾನದಿಂದ ಮೆರವಣಿಗೆ, ಹೋರಾಟ ಮಾಡಲು ಪೊಲೀಸರು ನಿರ್ಬಂಧ ಹೇರಿದ್ದಾರೆ. ಡಾ.ಅಂಬೇಡ್ಕರ ವೃತ್ತದಿಂದ ಮೆರವಣಿಗೆಗೆ ಮಾಡಲು ತಾಕೀತು ಮಾಡಿದೆ. ವ್ಯಾಪಾರಿಗಳ ಸಭೆ ಕರೆದು ಭಯ ಹುಟ್ಟಿಸುತ್ತಿದ್ದಾರೆ. ಕರವೇ ಕಳ್ಳರ ಸಂಘ ಎಂದಿದ್ದಾರೆ. ಯತ್ನಾಳ ಅವರಂಥ ಕೋಮುವಾದಿ, ಕನ್ನಡ, ನಾಡುನುಡಿ ವಿರೋಧಿಗಳು, ಎಂಇಎಸ್ ಏಜೆಂಟ್, ಭ್ರಷ್ಟ, ಕಳ್ಳ ರಾಜಕೀಯ ನಾಯಕರ ಪಾಲಿಗೆ ನಮ್ಮ ಸಂಘಟನೆ ನಿರಂತರ ಹೋರಾಟ ಮಾಡುತ್ತದೆ ಎಂದರು.

ಮಹಾದೇವ ರಾವಜಿ, ಪ್ರಕಾಶ ಕುಂಬಾರ, ಅಶೋಕ ಹಾರಿವಾಳ, ಫಯಾಜ ಕಲಾದಗಿ, ಆರ್.ಬಸವರಾಜ, ದಸ್ತಗೀರ ಸಾಲೋಟಗಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next