Advertisement

ಕೋವಿಡ್ ತಡೆಗೆ ನಗರದಲ್ಲಿ ವಾರ್ಡ್‌ ಕಾರ್ಯಪಡೆ ರಚನೆ

03:43 PM May 04, 2020 | Naveen |

ಕಾರವಾರ: ಕೋವಿಡ್‌ -19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡದಂತೆ ತಡೆಯಲು ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂ ಹಾಗೂ ಗ್ರಾಮ ಪಡೆಗಳನ್ನು ರಾಜ್ಯ ಸರಕಾರದ ನಿರ್ದೇಶನದಂತೆ ರಚಿಸಲಾಗಿದೆ. ಅದೇ ಮಾದರಿಯಲ್ಲಿ ನಗರಗಳಲ್ಲಿ ಕಾರ್ಯಪಡೆ ರಚಿಸಿದರೆ ಯಶಸ್ಸು ಕಾಣಬಹುದು ಎಂದು ಉತ್ತರ ಕನ್ನಡ ಜಿಲ್ಲಾಡಳಿತ ತೀರ್ಮಾನಿಸಿದ್ದು, ಜಿಲ್ಲೆಯ ಎಲ್ಲ ನಗರಗಳಲ್ಲಿ ವಾರ್ಡ್‌ ಮಟ್ಟದ ಕಾರ್ಯಪಡೆ ರಚಿಸಿ ಮಾರ್ಗಸೂಚಿ ನೀಡಿದೆ.

Advertisement

ನಗರಗಳ ವಾರ್ಡ್‌ ಮಟ್ಟದ ಕಾರ್ಯಪಡೆ ಸಮಿತಿಯಲ್ಲಿ, ಆಯಾ ವಾರ್ಡ್‌ ಸದಸ್ಯರು ಅಧ್ಯಕ್ಷರಾಗಿದ್ದರೆ, ಸ್ಥಳೀಯ ಸಂಸ್ಥೆ ಮುಖ್ಯಸ್ಥರಿಂದ ನಾಮ ನಿರ್ದೇಶಿತ ಸಿಬ್ಬಂದಿ ಸಂಯೋಜಕರಾಗಿರುತ್ತಾರೆ. ಉಳಿದಂತೆ ವೈದ್ಯಾಧಿಕಾರಿಗಳ ಓರ್ವ ಪ್ರತಿನಿಧಿ, ಸಂಬಂಧಿಸಿದ ಗ್ರಾಮ ಲೆಕ್ಕಿಗ, ವಾಟರ್‌ ಮನ್‌, ಆ ವಾರ್ಡ್‌ನ ಎಲ್ಲಾ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಎಲ್ಲಾ ಕೋವಿಡ್ ವಾರಿಯರ್ಸ್
ಕಾರ್ಯಪಡೆ ಸದಸ್ಯರಾಗಿರುತ್ತಾರೆ.

ವಾರ್ಡ್‌ನಲ್ಲಿ 5 ಕ್ಕಿಂತ ಹೆಚ್ಚು ಜನರು ಸೇರದಂತೆ ನೋಡಿಕೊಳ್ಳುವುದು, ಮದುವೆ, ಜಾತ್ರೆ, ಮೆರವಣಿಗೆ ಸಂತೆ ಹಾಗೂ ಧಾರ್ಮಿಕ ಅಥವಾ ಇತರೆ ಗುಂಪು ಸೇರುವ ಚಟುವಟಿಕೆಗಳನ್ನು ನಿಯಂತ್ರಿಸುವುದು, ಆ ವಾರ್ಡ್‌ ವ್ಯಾಪ್ತಿಯಲ್ಲಿ ಇತ್ತೀಚೆಗೆ ಬೇರೆ ಪ್ರದೇಶಗಳಿಂದ ಬಂದಿರುವ ವ್ಯಕ್ತಿಗಳನ್ನು ಗುರುತಿಸಿ ಅಂತಹ ಮನೆಗಳ ಮೇಲೆ ನಿಗಾ ಇಡುವುದು ಹಾಗೂ ಯಾವುದಾದರೂ ಅನಾರೋಗ್ಯದ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯಾಧಿಕಾರಿಗಳಿಗೆ ತಿಳಿಸುವುದು ಹಾಗೂ ಹೋಮ್‌ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿ, ಕೂಡಲೇ ನಗರ ಸ್ಥಳೀಯ ಸಂಸ್ಥೆ ಮುಖ್ಯಸ್ಥರ ಗಮನಕ್ಕೆ ತರುವುದು, ಆ ವಾರ್ಡ್‌ ವ್ಯಾಪ್ತಿಯ ಎಲ್ಲಾ ಅಂಗನವಾಡಿಗಳಲ್ಲಿ ನೋಂದಾಯಿತ ಮಕ್ಕಳು, ಮಹಿಳೆಯರಿಗೆ, ಬಾಣಂತಿಯರಿಗೆ, ಇತರೆ ಫಲಾನುಭವಿಗಳಿಗೆ ಪಡಿತರ ಸಾಮಗ್ರಿಗಳನ್ನು ಅವರವರ ಮನೆಗಳಿಗೆ ತಲುಪಿಸುವಂತೆ ಅಂಗನವಾಡಿ ಕಾರ್ಯಕರ್ತೆಯರು ನಿರ್ವಹಿಸಬೇಕೆಂಬ 23 ಜವಾಬ್ದಾರಿಯುತ ಕಾರ್ಯಚಟುವಟಿಕೆಗಳನ್ನು ಸೂಚಿಸಿ ಜಿಲ್ಲಾಧಿಕಾರಿ ಡಾ| ಹರೀಶಕುಮಾರ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next