Advertisement

ಮಹತ್ವದ ಪಾತ್ರ ನಿರ್ವಹಿಸಲಿದೆ ನೌಕಾನೆಲೆ

06:30 PM Dec 05, 2019 | Naveen |

ಕಾರವಾರ: ಭಾರತದ ಸುರಕ್ಷತೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಕಾರವಾರದ ನೌಕಾನೆಲೆ ಮುಂದಿನ ದಿನಗಳಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಕರ್ನಾಟಕ ನೌಕಾದಳದ ಫ್ಲ್ಯಾಗ್ಆ ಫೀಸರ್‌ ಮಹೇಶ ಸಿಂಗ್‌ ಹೇಳಿದರು.

Advertisement

ಅವರು ಇಲ್ಲಿನ ಕದಂಬ ನೌಕಾನೆಲೆಯೊಳಗೆ ಏರ್ಪಡಿಸಿದ್ದ ನೇವಿ ಡೇ ಕಾರ್ಯಕ್ರಮದಲ್ಲಿ ಮಾತನಾಡಿದರು. 2022ರ ವೇಳೆಗೆ ಕದಂಬ ನೌಕಾನೆಲೆ ಎರಡನೇ ಹಂತದ ಕಾಮಗಾರಿ ಮುಗಿಯಲಿದೆ. ಕದಂಬ ನೌಕಾನೆಲೆ ಭಾರತೀಯ ನೌಕಾಪಡೆಗೆ ಶಕ್ತಿ ತುಂಬಲಿದೆ. ನೌಕಾನೆಲೆ ನಿರ್ಮಾಣ ಪೂರ್ಣವಾದಾಗ ಸಮುದ್ರಯಾನ, ವ್ಯಾಪಾರ ವಹಿವಾಟಿಗೆ ಮತ್ತಷ್ಟು ಭದ್ರತೆ ಮತ್ತು ಸುರಕ್ಷತೆ ದೊರಕಲಿದೆ. ದೇಶದ ಕರಾವಳಿ ಸುರಕ್ಷತೆಗೆ ಹೆಚ್ಚಿನ ಮಹತ್ವ ಬಂದಿದ್ದು ಇದನ್ನು ಭಾರತೀಯ ನೌಕಾಪಡೆ ನಿಭಾಯಿಸುತ್ತಾ ಬಂದಿದೆ ಎಂದರು.

1971ರ ಕರಾಚಿ ಬಂದರಿನ ಮೇಲೆ ಭಾರತೀಯ ನೌಕಾಪಡೆ ವಿಜಯ ಸಾಧಿಸಿದ ನೆನಪಿಗಾಗಿ ಈ ನೇವಿ ಡೇ ಆಚರಿಸುತ್ತಾ ಬರಲಾಗುತ್ತಿದ್ದು, ಭಾರತೀಯ ನೌಕಾಪಡೆಗೆ ಇದು ಹೆಮ್ಮೆಯ ದಿನ ಎಂದೂ ಹೇಳಿದರು. ಭಾರತದ ನೌಕಾಪಡೆ ಏಷ್ಯಾದಲ್ಲಿ ಮಹತ್ವದ ನೆಲೆಯಾಗಿದ್ದು, ಅದರಲ್ಲಿ ಐಎನ್‌ ಎಸ್‌ ಕದಂಬಕ್ಕೆ ಮಹತ್ವ ಪಾತ್ರವಿದೆ. ನೌಕಾನೆಲೆ ಎರಡನೇ ಹಂತದ ಕಾಮಗಾರಿ ವೇಗವಾಗಿ ನಡೆದಿದೆ. ಎರಡನೇ ಹಂತದ ಕಾಮಗಾರಿ ಮುಗಿದಾಗ ನೌಕಾನೆಲೆಯಲ್ಲಿ ಅನೇಕ ಯುದ್ಧ ನೌಕೆಗಳು ನೆಲೆ ನಿಲ್ಲಲಿವೆ.

ದೇಶದ ಸಾಗರ ಮಾಲಾ ಯೋಜನೆಗೆ ನೌಕಾಪಡೆ ಸುರಕ್ಷತೆ ಒದಗಿಸಲಿದೆ. ಅಲ್ಲದೇ ಏರ್‌ಬೇಸ್‌ ನಿರ್ಮಾಣ ಸಹ ಪೂರ್ಣಗೊಂಡಾಗ ಐಎನ್‌ಎಸ್‌ ಕದಂಬ ಜೊತೆಗೆ ಇಡೀ ಕಾರವಾರ ಹಾಗೂ ಕರಾವಳಿ ಅತ್ಯಂತ ಸುರಕ್ಷಿತ ಪ್ರದೇಶವಾಗಲಿದೆ ಎಂದು ಸಿಂಗ್‌ ಅಭಿಪ್ರಾಯಪಟ್ಟರು.

ಅದ್ದೂರಿ ನೇವಿ ಬ್ಯಾಂಡ್‌ ಪ್ರದರ್ಶನ: ಸೀಬರ್ಡ್‌ ನೌಕಾನೆಲೆಯಲ್ಲಿ ನೌಕಾ ದಿನಾಚರಣೆ ಅಂಗವಾಗಿ ನೇವಿ ಬ್ಯಾಂಡ್‌ ಪ್ರದರ್ಶನ ಹಾಗೂ ನೌಕಾ ಧ್ವಜ ವಂದನೆ ಕಾರ್ಯಕ್ರಮ ನಡೆಯಿತು.

Advertisement

ಕರ್ನಾಟಕ ನೌಕಾ ವಲಯದ ಫ್ಲ್ಯಾಗ್ ಆಫೀಸರ್‌ ರಿಯರ್‌ ಅಡ್ಮಿರಲ್‌ ಮಹೇಶ್‌ ಸಿಂಗ್‌ ಸೂರ್ಯಾಸ್ತದ ಸಮಯದಲ್ಲಿ ರಾಷ್ಟ್ರ
ಧ್ವಜ ಹಾಗೂ ನೌಕಾ ಧ್ವಜವನ್ನು ಅವರೋಹಣ ಮಾಡಿದರು. ಕಡಲಿನಲ್ಲಿ ನಿಂತಿದ್ದ ಐಎನ್‌ ಎಸ್‌ ಮಕರ, ಐಎನ್‌ಎಸ್‌ ತಿಲ್ಲಾಂಚಾಂಗ್‌ ಹಾಗೂ ಐಎನ್‌ಎಸ್‌ ಕೊಸ್ವಾರಿಯಲ್ಲಿ ಸಿಡಿಮದ್ದುಗಳನ್ನು ಸಿಡಿಸಲಾಯಿತು. ಶಾಸಕಿ ರೂಪಾಲಿ ನಾಯ್ಕ, ಫ್ಲಾಗ್‌ ಆಫೀಸರ್‌ ಪತ್ನಿ ಮನಿತಾ ಸಿಂಗ್‌, ನೌಕಾ ಅಧಿಕಾರಿಗಳಾದ ಪಿ.ಗೋಪಾಲಕೃಷ್ಣ, ಶ್ರೀಧರ ರಾಮಸ್ವಾಮಿ, ಇಫೆ¤ಕಾರ್‌ ಅಲಮ್‌, ಕಿರಣ ರೆಡ್ಡಿ, ಎಸ್‌.ಕುಮಾರ್‌, ಸಂಗೀತಾ ಕುಮಾರ್‌, ಸಂಗ್ರಾಮ್‌ ಕೆ., ಸುಜಾತಾ, ದೇವಕಿ ಮದ್ದುಲಾ, ಶ್ರೀನಿವಾಸ ಮದ್ದುಲಾ, ಆರ್‌.ಕೆ. ದಹಿಯಾ, ಜಿಲ್ಲಾ ನ್ಯಾಯಾಧೀಶೆ ವಿಪುಲಾ ಎಂ.ಬಿ. ಪೂಜಾರಿ, ಕೈಗಾ ಸ್ಥಳ ನಿರ್ದೇಶಕ ಸತ್ಯನಾರಾಯಣ, ಪ್ರಮುಖರಾದ ಎ.ಶಿಗ್ಗಾವಿ, ವೀಣಾ ಶಿಗ್ಗಾವಿ, ಶ್ರೇಯಾ ಸುರೇಂದ್ರ, ಆರ್‌. ರವಿ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next