Advertisement
ದ.ಕ. ಜಿಲ್ಲಾಡಳಿತದ ನೇತೃತ್ವದಲ್ಲಿ ಡಿ.30ರ ವರೆಗೆ ಮಂಗಳೂರಿನಲ್ಲಿ ಆಯೋಜಿಸಲಾಗಿರುವ “ದ.ಕ. ಜಿಲ್ಲಾ ಕರಾವಳಿ ಉತ್ಸವ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಉತ್ಸವದ ಮೆರವಣಿಗೆಯಲ್ಲಿಯೇ ಕರ್ನಾಟಕದ ದರ್ಶನವಾಗಿದೆ. ಹಬ್ಬದ ವಾತಾವರಣ ನಗರದಲ್ಲಿ ಮೂಡಿದ್ದು, ತುಳುನಾಡಿನ ವೈಭವ ನಮ್ಮೆಲ್ಲರಿಗೆ ದಾರಿದೀಪ ಎಂದವರು ಹೇಳಿದರು.
Related Articles
ಉದ್ಘಾಟನೆಗೂ ಮುನ್ನ ನೆಹರೂ ಮೈದಾನದಿಂದ ಕರಾವಳಿ ಉತ್ಸವ ಮೈದಾನದವರೆಗೆ ಸಾಂಸ್ಕೃತಿಕ ಮೆರ
ವಣಿಗೆ ಸಾಗಿಬಂತು. 40ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು. ಕರಾವಳಿ ಉತ್ಸವ ಜತೆಗೆ ಪಣಂಬೂರು ಬೀಚ್‌ನಲ್ಲಿ ಬೀಚ್ ವಾಲಿಬಾಲ್, ಗಾಳಿಪಟ ತಯಾರಿ ಪ್ರಾತ್ಯಕ್ಷಿಕೆ, ಮರಳಿನಿಂದ ಶಿಲ್ಪ ರಚನೆ, ಆಹಾರೋತ್ಸವ, ಡ್ರಮ್ ಜಾಮ್, ಸಂಜೆ ಸಂಗೀತ ವೈವಿಧ್ಯ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಕರಾವಳಿ ಮೈದಾನದಲ್ಲಿ ಡಿ.28ರಂದು ಹ್ಯಾಂಡ್‌ಬಾಲ್ ಪಂದ್ಯಾಟ, ವಿಕಲಚೇತನರಿಗೆ ಪಂದ್ಯಾವಳಿ, ಮುಕ್ತ ಲಗೋರಿ ಸ್ಪರ್ಧೆ ಹಾಗೂ 29ರಂದು ಡಾನ್‌ಬಾಸ್ಕೋದಲ್ಲಿ ವೇಟ್ ಲಿಫ್ಟಿಂಗ್ ಸ್ಪರ್ಧೆ ನಡೆಯಲಿದೆ. ಅಲ್ಲದೆ ಕರಾವಳಿ ಉತ್ಸವ ಮೈದಾನ ಹಾಗೂ ಕದ್ರಿ ಉದ್ಯಾನವನದಲ್ಲಿ ಪ್ರತೀ ದಿನವೂ ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ.
Advertisement
ಉದ್ಘಾಟನೆ ವೇದಿಕೆಯಲ್ಲಿಯೇ ಪ್ರತಿಭಟನೆ!ಉದ್ಘಾಟನ ಕಾರ್ಯಕ್ರಮದಲ್ಲಿ ಮೇಯರ್ ಭಾಸ್ಕರ್ ಭಾಷಣ ಮಾಡುತ್ತಿರುವಾಗ ವೇದಿಕೆ ಮುಂಭಾಗಕ್ಕೆ ಏಕಾಏಕಿ ಆಗಮಿಸಿದ ವಿದ್ಯಾ ದಿನಕರ್ ನೇತೃತ್ವದ ಎಂಆರ್‌ಪಿಎಲ್ ಹೋರಾಟಗಾರರ ತಂಡ, “ಕರಾವಳಿ ಉಳಿಸಿ ಎಂಆರ್‌ಪಿಎಲ್ ವಿಸ್ತರಣೆ ನಿಲ್ಲಿಸಿ’ ಎಂಬ ಬರಹದ ಪೋಸ್ಟರ್ ಪ್ರದರ್ಶಿಸಿದರು. ಈ ವೇಳೆ ಸಚಿವ ಖಾದರ್ ಪ್ರತಿಭಟನ ನಿರತರನ್ನು ಸಮಾಧಾನಿಸಿ, ವೇದಿಕೆಯಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು. ಬಳಿಕ, ಸಚಿವ ಖಾದರ್ ಸಭೆಯನ್ನುದ್ದೇಶಿಸಿ ಮಾತನಾಡಿ, ಕರಾವಳಿ ಉತ್ಸವಕ್ಕೆ ಹೋರಾಟಗಾರರ ಮೂಲಕ ಚೆಲುವು ಬಂದಿದೆ. ಅವರಿಗೆ ಧನ್ಯವಾದ. ಎಂಆರ್‌ಪಿಎಲ್‌ನ ಕೆಲವು ವಿಚಾರ ನ್ಯಾಯಾಲಯದಲ್ಲಿವೆ. ಮುಖ್ಯಮಂತ್ರಿಯಾದಿಯಾಗಿ ಸಚಿವರು, ಅಧಿಕಾರಿಗಳ ಜತೆಗೆ ಮಾತನಾಡಲಾಗಿದೆ. ಮುಂದೆ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಇದಕ್ಕೆ ಸಮಾಧಾನಗೊಳ್ಳದ ಪ್ರತಿಭಟನನಿರತರು ಧಿಕ್ಕಾರ ಕೂಗಿದರು. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಹೋರಾಟಗಾರರನ್ನು ಕರೆದೊಯ್ದರು.