Advertisement
ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಮಹಾನಗರ ಪಾಲಿಕೆ ಸಹಯೋಗದಲ್ಲಿ ಜ.19ರ ವರೆಗೆ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿರುವ ವಸ್ತು ಪ್ರದರ್ಶನ, ಎರಡು ದಿನಗಳ ಸಾಂಸ್ಕೃತಿಕ ದರ್ಶನ, ತಣ್ಣೀರುಬಾವಿ ಯಲ್ಲಿ ನಡೆಯುವ ಬೀಚ್ ಉತ್ಸವ, ಗಾಳಿ ಪಟ ಉತ್ಸವ ಸಹಿತ ಕರಾವಳಿ ಸಂಸ್ಕೃತಿಯ ಅನಾವರಣದ “ಕರಾವಳಿ ಉತ್ಸವ’ಕ್ಕೆ ಶನಿವಾರ ಚಾಲನೆ ನೀಡಿ ಸಚಿವರು ಮಾತನಾಡಿದರು.
ಮೇಯರ್ ಮನೋಜ್ ಕುಮಾರ್ ಮಾತನಾಡಿ, ತುಳುನಾಡಿನ ಆಚಾರ-ವಿಚಾರ, ಸಂಸ್ಕೃತಿ – ಪರಂಪರೆಗೆ ಉತ್ಸವದ ರೂಪವನ್ನು ಕರಾವಳಿ ಉತ್ಸವದ ಮೂಲಕ ನೀಡಲಾಗಿದೆ. ನಮ್ಮಲ್ಲಿ ಹಲವು ಭಿನ್ನತೆಗಳಿದ್ದರೂ, ಏಕತೆಯ ಮೂಲಕ ಸಾಗಿ ಜಿಲ್ಲೆಯನ್ನು ಮುಂಚೂಣಿಗೆ ತಂದಿದ್ದೇವೆ. ಮುಂದಿನ ವರ್ಷದಿಂದ “ಕರಾವಳಿ ಉತ್ಸವ’ಕ್ಕೆ “ತುಳುನಾಡ ಉತ್ಸವ’ ಎಂದು ಹೆಸರಿಡುವ ಮೂಲಕ ಇನ್ನಷ್ಟು ವಿಜೃಂಭಣೆ ಯಿಂದ ಆಚರಿಸುವಂತಾಗಲಿ ಎಂದರು.
Related Articles
Advertisement
ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕೆ., ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಮನಪಾ ವಿಪಕ್ಷ ನಾಯಕ ಅನಿಲ್ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಜಿಪಂ ಸಿಇಒ ಡಾ| ಆನಂದ್ ಕೆ., ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಎಸ್ಪಿ ಯತೀಶ್ ಎನ್., ಮನಪಾ ಆಯುಕ್ತ ಆನಂದ್ ಸಿ.ಎಲ್.,
ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ, ಕರ್ಣಾಟಕ ಬ್ಯಾಂಕ್ ಜಿಎಂ ಜಯನಾಗರಾಜ ಎಸ್.ರಾವ್., ಎಂಆರ್ಪಿಎಲ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಡೈರೆಕ್ಟರ್ ಫೈನಾನ್ಸ್ ಎಂ. ಶ್ಯಾಮ್ ಪ್ರಸಾದ್ ಕಾಮತ್, ಕೆಸಿಸಿಐ ಅಧ್ಯಕ್ಷ ಆನಂದ್ ಜಿ.ಪೈ, ಕ್ರೆಡಾೖನ ವಿನೋದ್ ಪಿಂಟೋ, ರೋಹನ್ ಕಾರ್ಪೊರೇಶನ್ನ ರೋಹನ್ ಮೊಂತೇರೊ ಉಪಸ್ಥಿತರಿದ್ದರು. ಉಪ ವಿಭಾಗಾಧಿಕಾರಿ ಹರ್ಷವರ್ಧನ್ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು.