Advertisement

ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಔಷಧ ಕೊರತೆಯಿಲ್ಲ: ಸಚಿವ ದಿನೇಶ್‌ ಗುಂಡೂರಾವ್‌

12:27 AM Dec 10, 2024 | Team Udayavani |

ಬೆಳಗಾವಿ: ರಾಜ್ಯದ ಪ್ರಾಥಮಿಕ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಔಷಧಗಳ ಕೊರತೆಯಿಲ್ಲ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ಪರಿಷತ್ತಿನಲ್ಲಿ ಬಿಜೆಪಿಯ ಎಚ್‌.ಎಸ್‌. ಗೋಪಿನಾಥ್‌ ಕೇಳಿದ ಪ್ರಶ್ನೆಗೆ ಉತ್ತರಿಸಿ, ರಾಜ್ಯದ ಯಾವುದೇ ಆರೋಗ್ಯ ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ. ಆದರೆ, ಆರೋಗ್ಯ ಕೇಂದ್ರದಲ್ಲಿ ಇಲ್ಲದ ಔಷಧಗಳನ್ನು ಖರೀ ದಿ ಸ ಲು ಕೆಲವು ಸಲ ಬೇರೆ ಬೇರೆ ಆಸ್ಪತ್ರೆಗಳಿಗೆ ಔಷಧ ಚೀಟಿ ಬರೆದು ಕೊಟ್ಟಿರಬಹುದು ಅಷ್ಟೇ ಎಂದರು. ಇನ್ನು ಆಯುಷ್‌ ಔಷಧಗಳು ಕೊರತೆಯಿರುವ ಬಗ್ಗೆ ಯಾವುದೇ ದೂರುಗಳು ಸರಕಾರದ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದರು. 2023 -24ನೇ ಸಾಲಿನ ವಿವಿಧ ಹಂತದ ಆರೋಗ್ಯ ಸಂಸ್ಥೆಗಳ ಬೇಡಿಕೆಯ 732 ಔಷಧಿಗಳನ್ನು ಸರಬರಾಜು ಮಾಡಲು ಟೆಂಡರ್‌ಗಳನ್ನು ಕೆಎಸ್‌ಎಂಎಸ್‌ಸಿಎಲ್‌ ವತಿಯಿಂದ ಆಹ್ವಾನಿಸಲಾಗಿರುತ್ತದೆ. ಟೆಂಡರ್‌ ಪ್ರಕ್ರಿಯೆ ಅಂತಿಮಗೊಳಿಸಿ ಈಗಾಗಲೇ 475 ಔಷಧಗಳನ್ನು ಸರಬರಾಜಿಗಾಗಿ ಖರೀದಿ ಆದೇಶ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next