Advertisement

ಕರಾಟೆ, ಯೋಗ ಪಂದ್ಯಾವಳಿ: ಕಲ್ಲುಮಠ ಶಾಲೆಗೆ ಹಲವು ಪ್ರಶಸ್ತಿ

01:00 AM Mar 01, 2019 | Team Udayavani |

ಶನಿವಾರಸಂತೆ: ನ್ಯಾಶನಲ್‌ ಇನ್‌ಸ್ಟೂಟ್‌ ಆಫ್ ಮಾರ್ಷಿಯಲ್‌ ಆರ್ಟ್ಸ್ ಮತ್ತು ಯೋಗ ಸಂಸ್ಥೆ ವತಿಯಿಂದ ಮೈಸೂರಿನ ಶಿಕ್ಷಕರ ಸದನದಲ್ಲಿ ನಡೆದ 8ನೇ ರಾಜ್ಯಮಟ್ಟದ ಕರಾಟೆ ಮತ್ತು ಯೋಗ ಪಂದ್ಯಾವಳಿಯಲ್ಲಿ ಕೊಡ್ಲಿಪೇಟೆ ಕಲ್ಲುಮಠದ ಎಸ್‌.ಕೆ.ಎಸ್‌ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಹಾಗೂ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶಾಲಾ ವಿದ್ಯಾರ್ಥಿ ಪಟುಗಳಾದ ಕುನಾಲ್‌, ಹರ್ಷಿತ್‌, ಮಂಜುನಾಥ್‌, ಜೀಸು, ಶ್ರೇಯಸ್‌ ದೀಪ್‌, ಮೂಬುರ್‌ಹನ್‌, ಶಾಶ್ವತ್‌ ದೀಪ್‌, ತರುಣ್‌, ಶಮಂತ್‌, ಧನುಷ್‌, ಕೃತಿಕಾ, ಜಾಯÌನ್‌ ಪ್ರಾಟ್ರಿಕ್‌, ಪಂಚಾಕ್ಷರಿ, ಕಲಂದರ್‌, ವಂಶಿತ್‌ಗೌಡ, ಭುವನ್‌, ಕೀರ್ತನ, ಜಗತಿ, ಜಾನು, ಯಶನ್‌ ಇವರುಗಳು ವಿವಿಧ ವಿಭಾಗದಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳೊಂದಿಗೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Advertisement

ತರಬೇತುದಾರ ಎನ್‌.ಎಸ್‌.ಅರುಣ್‌ ಕಾರ್ಯನಿರ್ವಹಿಸಿದ್ದರು. ವಿದ್ಯಾರ್ಥಿಗಳ ಸಾಧನೆಯನ್ನು ಕಲ್ಲುಮಠದ ಮಠಾದೀಶ ಮಹಾಂತಸ್ವಾಮೀಜಿ, ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಂ.ಎಸ್‌.ಉಲ್ಲಾಸ್‌, ಶಾಲಾ ಮುಖ್ಯ ಶಿಕ್ಷಕ ಎಚ್‌.ಎಂ.ಅಭಿಲಾಷ್‌, ದೈಹಿಕ ಶಿಕ್ಷಣ ಶಿಕ್ಷಕಿ ಟಿ.ಎಸ್‌.ಶಾಲಿನಿ ಮತ್ತು ಹಿರಿಯ ಶಿಕ್ಷಕ ತಿಮ್ಮಯ್ಯ ಶ್ಲಾ ಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next