Advertisement

ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ

02:20 PM Nov 10, 2017 | Team Udayavani |

ಸುರತ್ಕಲ್‌: ಕರಾವಳಿಯಲ್ಲಿ ಶಾಲಾ ವಿದ್ಯಾರ್ಥಿನಿಯರಿಗೆ ಸ್ವ ರಕ್ಷಣೆಗಾಗಿ ಕರಾಟೆ ಕಲಿಸುವ ಯೋಜನೆಯನ್ನು ಸರಕಾರ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಹೆಣ್ಮಕ್ಕಳಿಗಾಗಿ ಇದನ್ನು ಆರಂಭಿಸಿದ್ದು, ಒಟ್ಟು 18 ಗಂಟೆಗಳ ತರಬೇತಿಯನ್ನು 8, 9 ಹಾಗೂ 10ನೇ ತರಗತಿಯವರಿಗೆ ನೀಡಲಾಗುವುದು. ಇದರಲ್ಲಿ ಸ್ವರಕ್ಷಣೆಗೆ ಅಗತ್ಯವಿರುವ ಮುಖ್ಯ ಅಂಶಗಳನ್ನು ಕಲಿಸಲಾಗುತ್ತಿದೆ.

Advertisement

ಪಠ್ಯೇತರ ಚಟುವಟಿಕೆಗಳ ಪೈಕಿ ಕರಾಟೆ ಕಲಿಕೆಯನ್ನು ಸೇರಿಸಿರುವುದು ಶಾಲಾ ಬಾಲಕಿಯರಲ್ಲಿ ಹೊಸ ಹುಮ್ಮಸ್ಸುಮೂಡಿಸಿದೆ. ಸ್ವರಕ್ಷಣೆ, ಏಕಾಗ್ರತೆ ಹೆಚ್ಚಲು ಹಾಗೂ ನಾಯಕತ್ವ ಗುಣವನ್ನು ಬೆಳೆಸಲು ಕೂಡ ಕರಾಟೆ ಸಹಕಾರಿಯಾಗಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

ಕರಾಟೆ ಕಲಿಕೆಗೆ ಪೂರ್ವ ತಯಾರಿ ಬೇಕಿಲ್ಲ. 14 ವರ್ಷದೊಳಗಿನ ವಿದ್ಯಾರ್ಥಿನಿಯರನ್ನು ಕೇಂದ್ರೀಕರಿಸಿ ಕರಾಟೆ ಕಲಿಸಲಾಗುತ್ತಿದೆ. ಶಾಲಾ ಅವಧಿಯ ಅನುಕೂಲಕರವಾದ ಯಾವುದೇ ಸಮಯದಲ್ಲಿ ತರಗತಿ ನಡೆಸಬಹುದಾಗಿದ್ದು, ಒಂದೆರಡು ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಗೆ ಸರಿಯಾಗಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಕನಿಷ್ಠ ವಾರದ ಎರಡು ತರಗತಿಗೆ ವಿದ್ಯಾರ್ಥಿನಿಯರು ಹಾಜರಾಗಬೇಕಿದೆ.

ಪ್ರತಿ ವಿದ್ಯಾರ್ಥಿನಿಗೆ 200 ಖರ್ಚು
ಸ್ವ ರಕ್ಷಣಾತ್ಮಕ ಶಿಕ್ಷಣಕ್ಕಾಗಿ ಪ್ರತಿ ವಿದ್ಯಾರ್ಥಿನಿಗೆ ಸರಕಾರ 200 ರೂ. ವ್ಯಯಿಸುತ್ತಿದೆ. ಸರಕಾರೇತರ ಸಂಸ್ಥೆಗಳ ಮೂಲಕ ಕರಾಟೆ ಶಿಕ್ಷರನ್ನು ನೇಮಿಸಲಾಗುತ್ತದೆ. ಕೃಷ್ಣಾಪುರ ಹೈಸ್ಕೂ ಲೊಂದರಲ್ಲೇ 50ಕ್ಕೂ ಮಿಕ್ಕಿ ವಿದ್ಯಾರ್ಥಿನಿಯರು ಕರಾಟೆ ತರಬೇತಿ ಪಡೆಯುತ್ತಿದ್ದಾರೆ.

‌ಕಲಿಕೆಗೆ ಪೂರಕ
ಕರಾಟೆ ತರಬೇತಿ ವಿದ್ಯಾರ್ಜನೆಗೆ ಪೂರಕ. ಸ್ವ ರಕ್ಷಣೆಯ ಜತೆಗೆ ಏಕಾಗ್ರತೆ, ಹುಮ್ಮಸ್ಸು ಅವಶ್ಯವಾಗಿದ್ದು, ಇದನ್ನು ಕರಾಟೆಯಿಂದ ಪಡೆಯಬಹುದು. ಸರಕಾರ 18 ಗಂಟೆಯ ಅವಧಿಯ ಬೇಸಿಕ್‌ ಶಿಕ್ಷಣ ಮಾತ್ರ ನೀಡುತ್ತಿದ್ದು, ವಿದ್ಯಾರ್ಥಿನಿಯರು ಇಚ್ಛಿಸಿದಲ್ಲಿ ಉಚಿತವಾಗಿ ಹೆಚ್ಚುವರಿ ತರಬೇತಿ ನೀಡಲು ಸಿದ್ದ.
– ಭರತ್‌ ರಾಜ್‌ಧನ್‌,
  ಕರಾಟೆ ಶಿಕ್ಷಕರು 

Advertisement
Advertisement

Udayavani is now on Telegram. Click here to join our channel and stay updated with the latest news.

Next