Advertisement

ಆತ್ಮರಕ್ಷಣೆಗೆ ಕರಾಟೆ ಅವಶ್ಯ

10:47 AM Jan 26, 2019 | |

ಕುದೂರು: ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಮತ್ತು ಆತ್ಮರಕ್ಷಣೆಗಾಗಿ ಪ್ರತಿಯೊಬ್ಬರು ಕರಾಟೆ ಕಲಿಯಲು ಮುಂದಾಗಬೇಕು ಎಂದು ಶ್ರೀಮಹಾಂತೇಶ್ವರ ಶಾಲೆ ಮುಖ್ಯ ಶಿಕ್ಷಕ ಕಾಂತರಾಜು ಹೇಳಿದರು.

Advertisement

ಗ್ರಾಮದ ಶ್ರೀಮಹಾಂತೇಶ್ವರ ವಿದ್ಯಾಸಂಸ್ಥೆಯ ಅವರಣದಲ್ಲಿ ಭಗತ್‌ಸಿಂಗ್‌ ಅಕಾಡೆಮಿ ಆಫ್‌ ಕರಾಟೆ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಮತ್ತೂಬ್ಬರಿಗೆ ತೊಂದರೆ ನೀಡದೇ ತಮ್ಮ ಆತ್ಮರಕ್ಷಣೆಗಾಗಿ ಪ್ರತಿಯೊಬ್ಬರು ಕರಾಟೆ ಕಲಿಯಬೇಕು ಎಂದು ಕವಿಮಾತು ಹೇಳಿದರು.

ಕೇವಲ ಪಾಠ್ಯಕ್ಕೆ ಸೀಮಿತ ಬೇಡ: ಸಮಾಜ ಸೇವಕ ದೇವೇಂದ್ರ ಕುಮಾರ್‌ ಮಾತನಾಡಿ, ಮಕ್ಕಳನ್ನು ಕೇವಲ ಪಾಠ್ಯಕ್ಕೆ ಸೀಮಿತವಾಗಬಾರದು. ಪೋಷಕರು ಕ್ರೀಡಾ ಚಟುವಟಿಕೆಯಿಂದ ದೂರ ಮಾಡುತ್ತಿರುವುದು ಮುಂದಿನ ದಿನಗಳಲ್ಲಿ ಅವರ ದೈಹಿಕ ಸಾಮರ್ಥ್ಯಕ್ಕೆ ಧಕ್ಕೆ ಬರುವಂತಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಾ ಕೇಂದ್ರದ ಅಧ್ಯಕ್ಷ ಪ್ಯಾನಂ ನಟರಾಜು ಮಾತನಾಡಿ. ಗ್ರಾಮೀಣ ಪ್ರದೇಶಗಳಲ್ಲಿ ಕರಾಟೆ ತರಗತಿಗಳು ನಡೆಯುತ್ತಿರುವುದು ಸಂತಸದ ವಿಷಯ. ದುರ್ಬಲ ಜನರನ್ನು ಹೊಂದಿದ ದೇಶಕ್ಕೆ ಉಜ್ವಲ ಭವಿಷ್ಯ ಇರುವುದಿಲ್ಲ. ದೇಹ ಗಟ್ಟಿಯಾಗಬೇಕು, ಮನಸ್ಸು ಮಗುವಾಗಬೇಕು. ಆಗ ದುಷ್ಟ ವ್ಯಕ್ತಿಗಳು ರೂಪುಗೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.

ಸಾಧಿಸುವ ಛಲವಿರಲಿ: ಭಗತ್‌ಸಿಂಗ್‌ ಅಕಾಡೆಮಿ ಆಫ್‌ ಕರಾಟೆ ಸಂಸ್ಥೆಯ ಶಿಕ್ಷಕ ರಮೇಶ್‌ ಮಾತನಾಡಿ, ಸಾಧಿಸುವ ಛಲವಿರಬೇಕು. ಅಂತಹ ಧೈರ್ಯ ಮನಸ್ಥಿತಿಯನ್ನು ಕರಾಟೆ ತರಬೇತಿ ನೀಡುತ್ತದೆ. ಒಮ್ಮೆ ಇದರ ರುಚಿ ಕಂಡವರು ಬದುಕಿನಲ್ಲಿ ಸೋಮಾರಿಯಾಗಿರಲು ಸಾಧ್ಯವಿಲ್ಲ ಎಂದರು.

Advertisement

ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ: ಕರಾಟೆ ವಿದ್ಯಾರ್ಥಿಗಳು ತಮ್ಮ ಹೊಟ್ಟೆಯ ಮೇಲೆ ಕಲ್ಲುಗಳನ್ನು ಇಟ್ಟುಕೊಂಡು ಸುತ್ತಿಗೆಯಲ್ಲಿ ಹೊಡೆದು ಪುಡಿ ಮಾಡುವುದು. ಕೈ ಮತ್ತು ಕಾಲುಗಳಿಂದ ಹಂಚು ಹೊಡೆಯುವ ಸಾಹಸ ಪ್ರದರ್ಶನವನ್ನು ಮಾಡಿದರು. ಡಾಬಸ್‌ಪೇಟೆ, ನೆಲಮಂಗಲ, ಮಾಗಡಿ, ಕುದೂರು ಗ್ರಾಮದ ವಿದ್ಯಾರ್ಥಿಗಳಿಗೆ ಬ್ಲಾಕ್‌ಬೆಲ್ಟ್ ವಿತರಿಸಲಾಯಿತು. ವಿಎಸ್‌ಎಸ್‌ಎನ್‌ ಅಧ್ಯಕ್ಷ ಜೆಸಿಬಿ ನಟರಾಜು, ಕಲಾವಿದ ರಾಜಶೇಖರಯ್ಯ, ಶಿಕ್ಷಕ ಪದ್ಮನಾಭ, ಕುಮಾರಸ್ವಾಮಿ, ಅರುಣ್‌ ಕುಮಾರ್‌, ಮಂಜುನಾಥ್‌, ಮಹಾಬಲೇಶ್‌, ಪುರುಷೋತ್ತಮ್‌, ವೀವೇಕಾನಂದ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next