Advertisement
ಪುತ್ತೂರು ಬಾಲವನದಲ್ಲಿ ಡಾ| ಶಿವರಾಮ ಕಾರಂತರ 115ನೇ ಜನ್ಮದಿನೋತ್ಸವ, ಪುನಶ್ಚೇತನಗೊಂಡ ಕಾರಂತರ ಮನೆ ಹಾಗೂ ಹಾಗೂ ಗ್ರಂಥ ಕೊಠಡಿ ಲೋಕಾರ್ಪಣೆ ನೆರವೇರಿಸಿ, ಕಾರಂತ ಪ್ರಶಸ್ತಿ ವಿತರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಅಪಾರ. ಇಂದಿನ ಯುವ ಸಾಹಿತಿಗಳಿಗೆ ಕಾರಂತರು ಸ್ಪೂರ್ತಿ. ವೈಚಾರಿಕ ಪ್ರಜ್ಞೆಯನ್ನು ಉಳಿಸಿಕೊಂಡು ಬರೆದ ಕಾರಂತರು ನಾಸ್ತಿಕವಾದಿ, ಮೂಲ ಭೂತವಾದಿಯೂ ಅಲ್ಲ. ಅವರ ಕಾದಂಬರಿ ಗಳ ಮೇಲೆ ಪಾಶ್ಚಿಮಾತ್ಯ ದೇಶಗಳ ನೆರಳು ಬೀಳುವುದೇ ಇಲ್ಲ. ಅಂತಹ ಅದ್ಭುತ ಸಾಹಿತ್ಯ ಋಷಿ ಅವರಾಗಿದ್ದರು ಎಂದು ಬಣ್ಣಿಸಿದರು.
Related Articles
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಬಾಲವನವನ್ನು ಜನಾಕರ್ಷಣೆಯ ಕೇಂದ್ರವನ್ನಾಗಿಸಲು ಈಗಾಗಲೇ ಹಲವಾರು ಕಾಮಗಾರಿ ನಡೆಸಲಾಗಿದೆ. ಕಾರಂತರು ಬದುಕಿ ಬಾಳಿದ ಈ ಬಾಲವನವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಕೆಲಸ ಮಾಡಲಿದೆ. ಇದಕ್ಕೆ ಸಾರ್ವಜನಿಕ ವಲಯದಿಂದಲೂ ಸಹಕಾರವೂ ದೊರೆಯಬೇಕು ಎಂದರು.
Advertisement
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯಕ್ಷಗಾನ ಡಿಪ್ಲೊಮಾ ಕೋರ್ಸ್ ಆರಂಭಿಸುವ ಚಿಂತನೆಯಿದ್ದು, ಇದನ್ನು ಆರಂಭಿಸಿದಲ್ಲಿ ಪುತ್ತೂರಿನ ಕಾರಂತರ ಬಾಲವನಕ್ಕೆ ಮೊದಲ ಆದ್ಯತೆ ನೀಡಬೇಕು. ರಾಜ್ಯದಲ್ಲೇ ಪಡುಮಲೆ, ಬಾಲವನ ಅಭಿವೃದ್ಧಿಯೊಂದಿಗೆ ಪುತ್ತೂರು ತಾಲೂಕು ಅಧ್ಯಯನ ಕೇಂದ್ರ ಯೋಗ್ಯವಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನುನಡೆಸಲಿದ್ದೇವೆ ಎಂದರು. ತಾ. ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು, ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ನಗರಸಭೆ ಸದಸ್ಯೆ ಜೆಸಿಂತಾ ಮಸ್ಕರೇನಸ್, ಬಾಲವನ ಈಜುಕೊಳ ಸಮಿತಿ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ, ಬಾಲವನ ಸಮಿತಿಯ ಭವಾನಿಶಂಕರ್, ಎಸ್.ಕೆ. ಆನಂದ್, ಮಂಜುಳಾ ಭಾಸ್ಕರ್, ವಾರ್ತಾಧಿಕಾರಿ ಖಾದರ್ ಶಾ ಉಪಸ್ಥಿತರಿದ್ದರು. ವೈದೇಹಿರಿಗೆ ಬಾಲವನ ಪ್ರಶಸ್ತಿ
ಸಭಾ ಕಾರ್ಯಕ್ರಮ ಆರಂಭದಲ್ಲಿ ಪುನಶ್ಚೇತನಗೊಂಡಿರುವ ಕಾರಂತರ ನಿವಾಸ ಲೋಕಾರ್ಪಣೆ ಮತ್ತು ಕಾರಂತರ
ವಸ್ತು ಸಂಗ್ರಹಾಲಯ ಉದ್ಘಾಟನೆ ನಡೆಯಿತು. ಅಪರಾಹ್ನ ವಿದ್ಯಾರ್ಥಿಗಳಿಂದ ವಿಚಾರಗೋಷ್ಠಿ, ಖ್ಯಾತ ಲೇಖಕಿ ವೈದೇಹಿ ಅವರಿಗೆ ಬಾಲವನ ಪ್ರಶಸ್ತಿ ಪ್ರದಾನ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರಂತರ ಕನಸು
ಕಾರಂತರ ಪುತ್ರಿ, ಒಡಿಸ್ಸಿ ನೃತ್ಯ ಕಲಾವಿದೆ ಕ್ಷಮಾ ರಾವ್ ಮಾತನಾಡಿ, ಕಾರಂತರ ಮೂಲ ದೃಷ್ಟಿಕೋನವನ್ನು ಇಟ್ಟುಕೊಂಡು ಅಭಿವೃದ್ಧಿ ಕೆಲಸ ನಡೆಯಬೇಕು. ಬಾಲವನದಲ್ಲಿ ಪ್ರಕೃತಿಯೊಂದಿನ ಪಾಠದ ಶಾಲೆ ಕಾರಂತರ ಕನಸಾಗಿತ್ತು. ಇಲ್ಲಿನ ಪ್ರಕೃತಿಯನ್ನು ಕಾರಂತ ಜೈವಿಕ ವನವಾಗಿ ನಿರ್ಮಿಸಿಬೇಕು. ಕಾರಂತರ ವಿವಿಧ ಚಿತ್ರಗಳ ಗ್ಯಾಲರಿ ನಿರ್ಮಿಸಿ ಅದಕ್ಕೆ ‘ಹುಚ್ಚು ಮನಸ್ಸಿನ ಹತ್ತು ಮುಖ’ಎಂಬ ಹೆಸರಿಡಬೇಕು ಎಂದರು.