ಕಾರಟಗಿ: ರಾಜ್ಯದ ಭತ್ತದ ಬಟ್ಟಲು ಖ್ಯಾತಿಯ ವಾಣಿಜ್ಯ ಪಟ್ಟಣ ಕಾರಟಗಿ ತಾಲೂಕು ಕೇಂದ್ರವಾಗಿದೆ. ಈಹಿಂದೆ ಗಂಗಾವತಿ ತಾಲೂಕು ಕೇಂದ್ರವಾಗಿದ್ದಾಗ ಕಾರಟಗಿ ವ್ಯಾಪ್ತಿಯಲ್ಲಿ 10 ತಾಪಂಗಳು, 2 ಜಿಪಂಗಳಿದ್ದವು. ಇದೀಗ ನೂತನವಾಗಿತಲಾ ಒಂದು ತಾಪಂ ಮತ್ತು ಜಿಪಂ ಕ್ಷೇತ್ರ ಹೆಚ್ಚಿಸಲಾಗಿದೆ.
ರಾಜ್ಯ ಚುನಾವಣಾ ಆಯೋಗ ಜಿಪಂ ಹಾಗೂ ತಾಪಂ ಕ್ಷೇತ್ರಗಳಮರುವಿಂಗಡಣೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ವ್ಯಾಪ್ತಿಯಮರ್ಲಾನಹಳ್ಳಿ ಗ್ರಾಮ ನೂತನವಾಗಿ ತಾಪಂಹಾಗೂ ಜಿಪಂ ಕ್ಷೇತ್ರವಾಗಿ ಗುರುತಿಸಿಕೊಂಡ ಮಾಹಿತಿ ಹರಿದಾಡುತ್ತಿದೆ. ಈ ಕುರಿತು ಪ್ರಸ್ತಾವನೆಯನ್ನುಸಲ್ಲಿಸಲಾಗಿದೆ. ಕೊನೆಗಳಿಗೆಯಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ತಾಲೂಕಿನಮತ್ತೂಂದು ಬಹುದೊಡ್ಡ ಗ್ರಾಮ ಪಂಚಾಯತ್ ಕೇಂದ್ರವಾದ ಚಳ್ಳೂರಚಿನ್ನೇ ತಾಪಂ ಕ್ಷೇತ್ರ ಹಾಗೂ ಜಿಪಂ ಕ್ಷೇತ್ರವನ್ನಾಗಿ ಮಾಡಬೇಕೆಂಬ ಬೇಡಿಕೆ ವ್ಯಾಪಕವಾಗಿದೆ.
ಇತ್ತ ಮರ್ಲಾನಹಳ್ಳಿ ಗ್ರಾಮತಾಪಂ, ಜಿಪಂ ಕ್ಷೇತ್ರವಾಗಿ ಮೇಲ್ದರ್ಜೆಗೇರಿದೆ ಎಂದು ಗ್ರಾಮಸ್ಥರು ಸಂತಸ ಗೊಂಡಿದ್ದಾರೆ. ಸಿದ್ದಾಪುರ ಜಿಪಂಕ್ಷೇತ್ರದ ಕೆಲ ಗ್ರಾಮಗಳು ಯರಡೋಣಾ ಜಿಪಂ,ತಾಪಂ ಕ್ಷೇತ್ರಕ್ಕೆ ಒಳಪಟ್ಟ ಹಿನ್ನೆಲೆಯಲ್ಲಿ ಸಿದ್ದಾಪುರಜಿಪಂ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳು ಆಗುವ ಸಾಧ್ಯತೆಗಳಿವೆ. ಬಹುತೇಕ ಸಿದ್ದಾಪುರ ಜಿಪಂವ್ಯಾಪ್ತಿಯ ನದಿ ಪಾತ್ರದ ಗ್ರಾಮಗಳಾದ ಉಳೆನೂರ,ಬೆನ್ನೂರ ಗ್ರಾಮಗಳು ತಾಲೂಕಿನ ಯರಡೋಣಾ ಜಿಪಂ ವ್ಯಾಪ್ತಿಗೆ ಸೇರ್ಪಡೆಗೊಳ್ಳುವುದರಿಂದ ಅಲ್ಲಿನಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜಿಪಂ,ತಾಪಂ ಸದಸ್ಯ ರಾಗುವ ಕನಸು ಕಟ್ಟಿಕೊಂಡಿದ್ದ ಈ ಭಾಗದ ಮುಖಂಡರು ಬದಲಾದ ವ್ಯವಸ್ಥೆಯಿಂದ ಕಂಗಾಲಾಗಿದ್ದಾರೆ.
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕನಕಗಿರಿ ಹಾಗೂ ಕಾರಟಗಿ ಎರಡು ದೊಡ್ಡ ಪಟ್ಟಣಗಳಾಗಿದ್ದು, ಈ ಮೊದಲು ಗಂಗಾವತಿ ತಾಲೂಕು ವ್ಯಾಪ್ತಿಗೆಒಳಪಡುತ್ತಿದ್ದವು. ನೂತನ ತಾಲೂಕುರಚನೆಯಾದಾಗಿನಿಂದ ಕ್ಷೇತ್ರದಲ್ಲಿ ಕಾರಟಗಿ ಮತ್ತುಕನಕಗಿರಿ ಎರಡು ತಾಲೂಕುಗಳಾಗಿವೆ. ಮರ್ಲಾನಹಳ್ಳಿನೂತನ ತಾಪಂ ಕ್ಷೇತ್ರವಾಗುತ್ತಿರುವ ಹಿನ್ನೆಲೆಯಲ್ಲಿ ತಾಪಂ ಚುನಾವಣೆಗೆ ಸ್ಪರ್ಧಿಸಲು ಈಗಾಗಲೇ ಸಾಕಷ್ಟು ಆಕಾಂಕ್ಷಿ ಗಳಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಕೆಲವರು ಈಗಾಗಲೇ ತಾಲೂಕಿನ ಜಿಪಂ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಯ ಮೂಲಕ ಪ್ರಚಾರಕ್ಕಿಳಿದಿದ್ದು,ಚುನಾವಣಾ ತಯಾರಿ ಬಿರುಸಿನಿಂದ ನಡೆದಿದೆ.ಈ ಬಾರಿಯ ತಾಪಂ, ಜಿಪಂ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ.
ಕಾರಟಗಿ ತಾಲೂಕು ವ್ಯಾಪ್ತಿಯಲ್ಲಿ ಇದೀಗ 11ತಾಪಂ ಕ್ಷೇತ್ರಗಳು, 3 ಜಿಪಂ ಕ್ಷೇತ್ರಗಳು ರಚನೆಯಾಗಿವೆ.ನೂತನ ತಾಪಂ ಕ್ಷೇತ್ರಗಳನ್ನು ಆಯಾ ಗ್ರಾಮಗಳಜನಸಂಖ್ಯೆಗೆ ಅನುಗುಣವಾಗಿ ಹಾಗೂ ಆ ಕ್ಷೇತ್ರದವ್ಯಾಪ್ತಿಯ ಗ್ರಾಪಂಗಳ ಅನುಗುಣವಾಗಿ ಸರಕಾರದ ಆದೇಶದನ್ವಯ ನೂತನ ರಚಿಸಲಾಗುತ್ತದೆ.
ತಾಲೂಕು ವ್ಯಾಪ್ತಿಯಲ್ಲಿ ಒಂದು ಜಿಪಂಹಾಗೂ ಒಂದು ತಾಪಂ ಕ್ಷೇತ್ರಗಳನ್ನುಹೊಸದಾಗಿ ಸೃಷ್ಠಿಸಲಾಗಿದೆ. ಒಟ್ಟು 11 ತಾಪಂ,3 ಜಿಪಂ ಕ್ಷೇತ್ರಗಳಾಗಿದ್ದು ನನಗೆ ತುಂಬಾ ಸಂಸ ತಂದಿದೆ. ಇನ್ನು ಕೆಲವು ದಿನಗಳಲ್ಲಿ ಸದಸ್ಯರ ಅವಧಿ ಪೂರ್ಣಗೊಳ್ಳಲಿದ್ದು, ಕೆಲವೇ ದಿನಗಳಲ್ಲಿಜಿಪಂ, ತಾಪಂ ಚುನಾಚಣೆ ಘೋಷಣೆಯಾಗಿ ಕ್ಷೇತ್ರವಾರು ಮೀಸಲಾತಿ ನಿಗದಿಪಡಿಸುತ್ತಾರೆ.ಚುನಾವಣೆ ನಡೆಯುತ್ತದೆ. –
ಬಸವರಾಜ ದಢೇಸುಗೂರು, ಶಾಸಕ
ಕಾರಟಗಿ ತಾಪಂ ಕ್ಷೇತ್ರದ ಪುನರ್‌ವಿಂಗಡಣೆಯ ವರದಿ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಕ್ಷೇತ್ರ ವಿಂಗಡಣೆ ಪಟ್ಟಿ ಅಂತಿಮಗೊಳ್ಳಲಿದೆ.
– ಶಿವಶರಣಪ್ಪ ಕಟ್ಟೊಳ್ಳಿ, ತಹಶೀಲ್ದಾರ್ ಕಾರಟಗಿ
–ದಿಗಂಬರ ಎನ್. ಕುರ್ಡೆಕರ