Advertisement
ರಾಜ್ಯದಲ್ಲಿ 2 ಮತ್ತು 3 ನೇ ಹಂತದಲ್ಲಿ ಎಪ್ರಿಲ್ 18 ಮತ್ತು 23 ರಂದು ತಲಾ 14 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 23 ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ. ದೇಶದಲ್ಲಿ ಒಟ್ಟು 7 ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಇಂದಿನಿಂದಲೆ ಚುನಾವಣಾ ನೀತಿ ಸಂಹಿತೆ ಅನ್ವಯವಾಗಲಿದೆ.
ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ , ಚಾಮರಾಜನಗರ, ಮೈಸೂರು-ಕೊಡಗು, ಹಾಸನ, ತುಮಕೂರು, ಚಿತ್ರದುರ್ಗ, ದಕ್ಷಿಣ ಕನ್ನಡ , ಉಡುಪಿ -ಚಿಕ್ಕಮಗಳೂರು ಎಪ್ರಿಲ್ 23 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳು
Related Articles
Advertisement
ರಾಜ್ಯದಲ್ಲಿ ಒಟ್ಟು 5ಕೋಟಿ 34 ಲಕ್ಷದ 6 ಸಾವಿರದ 721 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಸಿ ವಿಜಿಲ್ ಆ್ಯಪ್ ಮೂಲಕ ಅಕ್ರಮಗಳ ಕುರಿತಾಗಿ ಸಾರ್ವಜನಿಕರು ದೂರನ್ನು ಸಲ್ಲಿಸಬಹುದಾಗಿದೆ.
ಓರ್ವ ಅಭ್ಯರ್ಥಿಗೆ 70 ಲಕ್ಷ ರೂಪಾಯಿ ಮಾತ್ರ ಚುನಾವಣ ವೆಚ್ಚ ದ ಮಿತಿ ಇಡಲಾಗಿದೆ.
ಪೇಯ್ಡ ನ್ಯೂಸ್ ಮತ್ತು ಫೇಕ್ ನ್ಯೂಸ್ ತಡೆಯುವಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.