ಮುಂಬಯಿ : ಬಾಲಿವುಡ್ ನ ಯುವ ನಟರಲ್ಲಿ ಹೆಚ್ಚುತ್ತಿರುವ “ಸಂಭಾವನೆ ಹೆಚ್ಚಳ ಟ್ರೆಂಡ್ ʼʼ ಬಗ್ಗೆ ನಿರ್ಮಾಪಕ ಕರಣ್ ಜೋಹರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಭಾವನೆ ಹೆಚ್ಚಳದ ಪ್ರಮಾಣ ಶೇ.10 ರಿಂದ 20ರಷ್ಟಲ್ಲ, ಕೆಲವರು ಶೇ.100 ಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 477 ಅಂಕ ಏರಿಕೆ, 17ಸಾವಿರ ಗಡಿದಾಟಿದ ನಿಫ್ಟಿ
ಇತ್ತೀಚಿನ ಸಂದರ್ಶನದಲ್ಲಿ ಈ ವಿಚಾರ ತಿಳಿಸಿರುವ ಅವರು, ಕೋವಿಡ್ ಸೋಂಕಿನಿಂದಾಗಿ ಚಿತ್ರೋದ್ಯಮ ನಷ್ಟದಲ್ಲಿದೆ. ವಿತರಕರು ಹಾಗೂ ನಿರ್ಮಾಪಕರು ನಷ್ಟ ಅನುಭವಿಸುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ನಾವು ನೂರಾರು ಕೋಟಿ ಹೂಡಿಕೆ ಮಾಡಿದ ಮೇಲೂ ಈ ಹೆಚ್ಚಳ ಏಕೆ ? ಎಂದು ಪ್ರಶ್ನಿಸಿದ್ದಾರೆ.
ನಾನು ಈ ಪ್ರವೃತ್ತಿಯಿಂದ ರೋಸಿ ಹೋಗಿದ್ದೇನೆ (ಫೆಡ್ ಅಪ್ ). ಯುವ ನಟರು ಶೇ.100 ರಷ್ಟು ಸಂಭಾವನೆ ಹೆಚ್ಚು ಕೇಳುತ್ತಿದ್ದಾರೆ. ಸ್ಟಾರ್ ನಟರು ಹಾಗೂ ಮೊದಲ ದರ್ಜೆಯ ಕಲಾವಿದರ ಮೇಲೆ ಹೂಡಿಕೆ ಮಾಡುವುದಕ್ಕೆ ನಿರ್ಮಾಪಕರು ಒಪ್ಪುತ್ತಾರೆ. ಏಕೆಂದರೆ ಅವರಿಂದ ಹೂಡಿಕೆ ಮಾಡಿದ ಹಣ ವಾಪಾಸ್ ಬರುತ್ತದೆ. ಆದರೆ ಒಂದೆರಡು ಸಿನಿಮಾದಲ್ಲಿ ಅಭಿನಯಿಸಿದ ಹೊಸ ಕಲಾವಿದರು ಈ ರೀತಿ ,ಮಾಡುತ್ತಿದ್ದರೆ ಎಂದು ನಿರ್ಮಾಪಕರ ವಲಯದಲ್ಲಿ ಅಲವತ್ತುಕೊಂಡಿದ್ದಾರೆ.