Advertisement

ಮುನಿಸು ಮರೆತ ಕಾಜೋಲ್‌ ಮತ್ತು ಕರಣ್‌ ಜೋಹರ್‌ 

12:25 PM Aug 30, 2017 | Team Udayavani |

ಮುಂಬಯಿ: ಇದು ಬಾಲಿವುಡ್‌ ನಟಿ ಕಾಜೋಲ್‌ ಮತ್ತು ನಟ,ನಿರ್ದೇಶಕ ಕರಣ್‌ ಜೋಹರ್‌ ಅಭಿಮಾನಿಗಳಿಗೆ ಶುಭ ಸುದ್ದಿ. ಇಬ್ಬರೂ  ತಮ್ಮ ಹಳೆಯ ಮುನಿಸು ಮರೆತು ಮತ್ತೆ ಸ್ನೇಹಿತರಾಗಿದ್ದಾರೆ. 

Advertisement

ಕಳೆದ ವರ್ಷ ‘ಶಿವಾಯ್‌’ ಮತ್ತು ‘ಯೇ ದಿಲ್‌ ಹೇ ಮುಷ್ಕಿಲ್‌’ ಚಿತ್ರಗಳ ಬಿಡುಗಡೆಯ ವೇಳೆ ಇಬ್ಬರ ನಡುವೆ ಜಟಾಪಟಿ ನಡೆದು ಪರಸ್ಪರ ಸಂಬಂಧ ಹಳಸಿ ಹೋಗಿತ್ತು. 

ವರ್ಷದ ಬಳಿಕ ಇದೀಗ  ಇನ್‌ಸ್ಟಾಗ್ರಾಂನಲ್ಲಿ ಕರಣ್‌ ಜೋಹರ್‌ರ ಇಬ್ಬರು ಅವಳಿ ಮಕ್ಕಳ ಚಿತ್ರಕ್ಕೆ ಕಾಜೋಲ್‌ ಲೈಕ್‌ ನೀಡಿದ್ದಾರೆ. ಆ ಬಳಿಕ ಕರಣ್‌ ಅವರೂ ಕಾಜೋಲ್‌ ಅವರ ಮನೀಷ್‌ ಮಲ್‌ಹೋತ್ರಾ ಅವರೊಂದಿಗಿನ ಚಿತ್ರಕ್ಕೆ ಲೈಕ್‌ ನೀಡಿದ್ದಾರೆ. 

ಕಾಜೋಲ್‌ ಪತಿ ಅಜಯ್‌ ದೇವ್‌ಗನ್‌ ಅವರ ಅಭಿನಯದ ಶಿವಾಯ್‌ ಚಿತ್ರದ ಎದುರು ಯೇ ದಿಲ್‌ ಹೇ ಮುಷ್ಕಿಲ್‌ ಚಿತ್ರ ಬಿಡುಗಡೆ ಮಾಡಿ, ಶಿವಾಯ್‌ ಸೋಲಿಸಲು ಕರಣ್‌ ಲಂಚ ನೀಡಿ ಅಪಪ್ರಚಾರ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಇದು ಇಬ್ಬರ ನಡುವೆ ಕಂದಕ ಸೃಷ್ಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next