Advertisement

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

12:17 AM May 18, 2024 | Team Udayavani |

ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್‌ ವೆಲ್ಫೆàರ್‌ ಕೋ-ಆಪರೇಟಿವ್‌ ಸೊಸೈಟಿಯಿಂದ 4.76 ಕೋಟಿ ರೂ. ವಂಚಿಸಿದ ಪ್ರಕರಣದ ಹಿಂದೆ ಕಣ್ಣೂರು ಕೇಂದ್ರೀಕರಿಸಿರುವ ಭಾರೀ ಶಕ್ತಿಗಳು ಅಡಗಿವೆಯೆಂದು ಸೂಚನೆ ಲಭಿಸಿದೆ.

Advertisement

ವಂಚನೆ ಬಹಿರಂಗಗೊಂಡ ತತ್‌ಕ್ಷಣದಿಂದ ತಲೆಮರೆಸಿಕೊಂಡಿರುವ ಸೊಸೈಟಿ ಕಾರ್ಯದರ್ಶಿ ಕೆ.ರತೀಶ್‌ ಮತ್ತು ಕಣ್ಣೂರು ನಿವಾಸಿಯಾದ ಸೂತ್ರಧಾರ ಜಬ್ಟಾರ್‌ ಶಿವಮೊಗ್ಗದಲ್ಲಿ ತಲೆಮರೆಸಿಕೊಂಡಿದ್ದಾರೆಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ಇವರ ಬಂಧನಕ್ಕೆ ಮೇಲ್ಪರಂಬ ಎಸ್‌.ಐ. ಹಾಗು ತಂಡ ಶಿವಮೊಗ್ಗಕ್ಕೆ ತೆರಳಿದೆ.

ಬಂಧಿತ ಆರೋಪಿಗಳಾದ ಪಳ್ಳಿಕೆರೆ ಪಂಚಾಯತ್‌ ಸದಸ್ಯನೂ, ಪ್ರಾದೇಶಿಕ ಮುಸ್ಲಿಂ ಲೀಗ್‌ ನೇತಾರನಾದ ಬೇಕಲ ಹದ್ದಾದ್‌ ನಗರದ ಕೆ.ಅಹಮ್ಮದ್‌ ಬಷೀರ್‌(60), ಈತನ ಚಾಲಕ ಅಂಬಲತ್ತರ ಪರಕ್ಕಳಾಯಿ ಏಳನೇ ಮೈಲಿನ ಎ.ಅಬ್ದುಲ್‌ ಗಫೂರ್‌(26) ಮತ್ತು ಕಾಂಞಂಗಾಡ್‌ನ‌ ನೆಲ್ಲಿಕ್ಕಾಡ್‌ ನಿವಾಸಿಯೂ, ಜಿಮ್ನೆಶಿಯಂ ಸಂಸ್ಥೆಯ ಮಾಲಕ ಎ.ಅನಿಲ್‌ ಕುಮಾರ್‌(55) ನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next