Advertisement

ಶಿಥಿಲಾವಸ್ಥೆಗೆ ತಲುಪುತ್ತಿದೆ ಕರಬಲ ಮಾರುಕಟ್ಟೆ

06:16 PM Jan 21, 2020 | Suhan S |

ಚನ್ನಪಟ್ಟಣ: ರಸ್ತೆಬದಿ ವ್ಯಾಪಾರಿಗಳನ್ನು ಒಂದೆಡೆ ಸ್ಥಳಾಂತರಿಸುವ ಉದ್ದೇಶದಿಂದ ಲಕ್ಷಾಂತರ ರೂ. ವ್ಯಯಿಸಿ ನಿರ್ಮಾಣ ಮಾಡಿರುವ ತರಕಾರಿ ಮಾರುಕಟ್ಟೆಯಲ್ಲಿ ಸಮರ್ಪಕ ನಿರ್ವ ಹಣೆ ಮರೀಚಿಕೆಯಾಗಿದ್ದು, ಕುಡುಕರ ಅಡ್ಡೆ ಯಾಗಿ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗುತ್ತಿದೆ.

Advertisement

ಕರಬಲ ಮೈದಾನದಲ್ಲಿ ಸುಮಾರು 150ಕ್ಕೂ ಹೆಚ್ಚು ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದ್ದು, ಅರ್ಧದಷ್ಟು ಅಂಗಡಿಗಳು ಟೆಂಡರ್‌ ಆಗದೆ ಶಿಥಿ ಲಾವಸ್ತೆಗೆ ತಲುಪುತ್ತಿವೆ. ಮೈದಾನದಲ್ಲಿ ಶೌಚಾಲಯ ನಿರ್ಮಾಣವಾಗಿದೆ. ಆದರೆ ನಿರ್ವಹಣೆಗೆ ಯಾರನ್ನೂ ನೇಮಿಸದ ಕಾರಣ ಬಾಗಿಲು ಬಂದ್‌ ಆಗಿದೆ. ಹಾಗಾಗಿ ಆವರಣದಲ್ಲೇ ಬಯಲೇ ಶೌಚಾಲಯವಾಗಿ ಬದಲಾಗಿದೆ. ಮಾರುಕಟ್ಟೆಗೆ ಬರುವವರು, ಸ್ಥಳೀಯರು ಕಸದ ರಾಶಿ ಬಳಿಯೇ ಮಲ, ಮೂತ್ರ ವಿಸರ್ಜನೆ ಮಾಡುವುದರಿಂದ ಇಡೀ ಜಾಗ ಗಬ್ಬೆದ್ದು ನಾರುತ್ತಿದೆ.

ಕಸದ ರಾಶಿ: ಮಾರುಕಟ್ಟೆ ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಲಾಗುತ್ತಿದೆ. ಕಸದ ತೊಟ್ಟಿ ತುಂಬಿಕೊಂಡಿದ್ದು, ಹಂದಿ, ನಾಯಿಗಳು ಕಸವನ್ನು ಇನ್ನಷ್ಟು ಹರಡುವಂತೆ ಮಾಡಿವೆ. ಕುಡಿಯುವ ನೀರಿನ ಘಟಕ ನಿರ್ಮಾಣ ಹಂತದಲ್ಲೇ ಇರುವುದರಿಂದ ಕುಡಿಯುವ ನೀರಿಗೆ ಸಮಸ್ಯೆ ಇದ್ದು, ಸಮರ್ಪಕವಾಗಿರಬೇಕಾದ ತರಕಾರಿ ಮಾರುಕಟ್ಟೆ ನಗರಸಭೆ ಆಡಳಿತದ ನಿಷ್ಕ್ರಿಯತೆಯಿಂದಾಗಿ ಹಾಳುಕೊಂಪೆಯಾಗಿದೆ.

ಭದ್ರತೆ ಇಲ್ಲ: ರಾತ್ರಿವೇಳೆ ಇಲ್ಲಿ ಕುಡುಕರ ಅನಾಯಾಸವಾಗಿ ಮದ್ಯಪಾನ ಮಾಡುತ್ತಿದ್ದು, ಸೆಕ್ಯುರಿಟಿ ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳೂ ಸಹ ನೆರವೇರುತ್ತಿವೆ. ಎಂಬುದು ಸ್ಥಳೀಯರ ಆರೋಪವಾಗಿದೆ. ಮದ್ಯದ ಬಾಟಲಿಗಳನ್ನು ಅಲ್ಲಿಯೇ ಬಿಸಾಡುವ ಜತೆಗೆ ಒಡೆದು ಹಾಕುತ್ತಿರುವುದರಿಂದ ಓಡಾಡಲು ಸಹ ತೊಂದರೆಯಾಗಿದೆ. ನಗರಸಭೆ ಅಧಿಕಾರಿಗಳಂತೂ ಇದನ್ನು ಕೇಳುವ ಗೋಜಿಗೆ ಹೋಗಿಲ್ಲ.

ಸಾರ್ವಜನಿಕರ ಹಣ ವ್ಯರ್ಥ: ಕರಬಲ ಮೈದಾನದಲ್ಲಿ ಮೊದಲ ಹಂತದಲ್ಲಿ ನಿರ್ಮಾಣವಾಗಿರುವ 129 ಅಂಗಡಿ ಮಳಿಗೆಗಳು ಹರಾಜಾಗದಿದ್ದರೂ, ಅದೇ ಸ್ಥಳದಲ್ಲಿ ಇನ್ನೂ ಎರಡು ಕಾಂಪ್ಲೆಕ್ಸ್‌ಗಳನ್ನು ನಿರ್ಮಿಸಿಅಲ್ಲಿಯೂ ಹತ್ತಾರು ಮಳಿಗೆಗಳನ್ನು ನಿರ್ಮಿಸಲಾಗಿದೆ. ರಸ್ತೆಬದಿ ವ್ಯಾಪಾರಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡುವುದಾಗಿ ಈ ಹಿಂದೆಯೇ ನಗರಸಭೆ ಸಾಮಾನ್ಯ ಸಭೆ ಗಳಲ್ಲಿ ನಿರ್ಣಯಿಸಲಾಗಿತ್ತಾದರೂ, ಅಲ್ಲಿಗೆ ಬರಲು ವ್ಯಾಪಾರಿಗಳು ಒಪ್ಪುತ್ತಿಲ್ಲ.ಹಾಗಾಗಿ ವ್ಯರ್ಥ ವಾಗಿ ಸಾರ್ವಜನಿಕರ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಿದ್ದರೂ, ಅವುಗಳ ಬಳಕೆಯಾಗುತ್ತಿಲ್ಲ. ಇನ್ನು ಸ್ವತ್ಛವಾಗಿರಬೇಕಿದ್ದ ಮಾರುಕಟ್ಟೆಯ ಸ್ಥಿತಿ ಅಧೋಗತಿಗೆ ಇಳಿದಿದೆ. ಇನ್ನಾದರೂ ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಮಾರುಕಟ್ಟೆಯಲ್ಲಿನ ಅವ್ಯವಸ್ಥೆ ಸರಿಪಡಿಸಬೇಕಿದೆ.

Advertisement

ಅಂಗಡಿಗಳನ್ನು ಸುಸ್ಥಿತಿಗೆ ತಂದು ಹರಾಜು ಮೂಲಕ ವಿಲೇವಾರಿ ಮಾಡಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾಗಬೇಕಿದೆ.

ಕರಬಲ ಮಾರುಕಟ್ಟೆಯಲ್ಲಿ ಮಳಿಗೆ ಗಳನ್ನು ಪಡೆಯಲು ವ್ಯಾಪಾರಿ ಗಳು ಮುಂದೆ ಬಾರದ ಕಾರಣ ಮಳಿಗೆ ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಕಸ ವಿಲೇವಾರಿ ಸಮಸ್ಯೆ ಸರಿಪಡಿಸಿ, ಕುಡು ಕರನ್ನು ಹಾವಳಿ ತಡೆಗಟ್ಟಲು ಮಾರುಕಟ್ಟೆಗೆ ಸೆಕ್ಯುರಿಟಿ ನೇಮಿಸಲು ಕ್ರಮ ಕೈಗೊಳ್ಳ ಲಾಗುವುದು. ಪುಟ್ಟಸ್ವಾಮಿ, ಪೌರಾಯುಕ್ತ

 

ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next