ಅದು ಮಳೆಗಾಲದ ಸಮಯ. ಆಗಾಗ್ಗೆ ಮಳೆ ಬಂದು ಅಲ್ಲಲ್ಲಿ ತಗ್ಗುಗಳಲ್ಲಿ ನೀರು ನಿಂತಿತ್ತು. ಹೀಗೆ ನೀರು ನಿಂತ ತಗ್ಗಿನ ಹತ್ತಿರದಲ್ಲಿಯೇ ಒಂದು ರಸ್ತೆ ಇತ್ತು. ಅದರ ಪಕ್ಕ ಮರದ ಕೆಳಗೆ ಹುತ್ತವೊಂದಿತ್ತು. ಅದರÇÉೊಂದು ಹಾವು ವಾಸವಾಗಿತ್ತು. ಆ ನಿಂತ ನೀರಿನಲ್ಲಿ ತಂಗಿದ್ದ ಕಪ್ಪೆಗಳನ್ನು ದಿನಾಲು ಒಂದೊಂದೇ ಹೊಂಚು ಹಾಕಿ ತಿಂದು ಹಾವು ಕೊಬ್ಬಿತ್ತು. ದಿನೇದಿನೇ ತಮ್ಮ ಸಮೂಹದ ಸಂಖ್ಯೆ ಕಡಿಮೆ ಆಗುತ್ತಿರುವುದನ್ನು ಗಮನಿಸಿದ ಹಿರಿಯ ಕಪ್ಪೆ ತನ್ನ ಬಳಗವನ್ನು ಕರೆದು, ಚರ್ಚಿಸಿತು.
“ಎಲ್ಲರೂ ಸೇರಿ ಹಾವಿನ ಉಪಟಳವನ್ನು ನಿಯಂತ್ರಿಸದಿದ್ದರೆ, ನಮ್ಮ ವಂಶ ನಿರ್ವಂಶವಾಗುವುದರಲ್ಲಿ ಸಂಶಯವಿಲ್ಲ’ ಎಂದು ಸಲಹೆ ನೀಡಿದವು. ಯಾರಿಗೂ ಉಪಾಯ ಹೊಳೆಯಲಿಲ್ಲ. ಯೋಚಿಸಲು ನಾಳೆಯವರೆಗೂ ಸಮಯ ತೆಗೆದುಕೊಂಡು ತಮ್ಮ ತಮ್ಮ ಜಾಗಗಳಿಗೆ ಹಿಂತಿರುಗಿದವು.
ಮರುದಿನ ಬೆಳಗ್ಗೆ ಮತ್ತೆ ಸಭೆ ಸೇರಿ ತಮ್ಮ ಅಭಿಪ್ರಾಯ ಹಂಚಿಕೊಂಡವು. ಒಂದು ಕಪ್ಪೆ ಹಿಂದಿನ ಕಾಲದಲ್ಲಿ ಕಾಗೆಯೊಂದು ತನ್ನ ಮೊಟ್ಟೆ ತಿನ್ನುತ್ತಿದ್ದ ಹಾವನ್ನು ಸುಟ್ಟು ಸಾಯಿಸಿದ ಘಟನೆ ನೆನಪಿಸಿ, “ನಾವೂ ಹಾಗೇ ಮಾಡೋಣ’ ಎಂದಿತು. ಹೆಣ್ಣು ಕಪ್ಪೆಯೊಂದು, “ಹೌದು ಹಾಗೇ ಮಾಡೋಣ’ ಎಂದಿತು. “ಛೇ ಛೇ… ಇದು ಆಗದ ಮಾತು, ಇÇÉೇ ಸಮೀಪದಲ್ಲಿ ನೀರು ಇದೆ. ಇಲ್ಲಿ ಬೆಂಕಿಯ ಉಪಾಯ ಫಲಿಸದು’ ಎಂದು ವಟರುಗಪ್ಪೆ ನುಡಿಯಿತು.
“ಇತ್ತೀಚೆಗೆ ನಮ್ಮ ಕುಲದ ಕೆಲ ಸಾಹಸಿ ಕಪ್ಪೆಗಳು ನಮ್ಮ ವೈರಿಗಳಾದ ಹಾವನ್ನೇ ನುಂಗಿ ಜಗತ್ತಿಗೆ ಸುದ್ದಿಯಾಗಿವೆ. ಅಂತಹ ಸಾಹಸವನ್ನು ನಾವು ಏಕೆ ಮಾಡಬಾರದು?’ ಎಂದು ಬಲಿಷ್ಠ ಕಪ್ಪೆಯೊಂದು ಗುಟುರಿತು. ಅಷ್ಟರಲ್ಲಿ ಮರಿಕಪ್ಪೆಯೊಂದು, “ನನಗೆ ಅಪ್ಪಣೆ ಕೊಟ್ಟರೆ ನಾನು ಪ್ರಯತ್ನಿಸುತ್ತೇನೆ’ ಎಂದಾಗ ಎಲ್ಲವೂ ನಕ್ಕು ಸುಮ್ಮನಾದವು.
ಒಂದು ಸರಿಯಾದ ದಿನ ಮತ್ತು ಸೂಕ್ತ ಸಮಯ ಸಾಧಿಸಿ ಅದರ ಸಂಹಾರದ ಜವಾಬ್ದಾರಿಯನ್ನು ತಾನು ಹೊರುತ್ತೇನೆಂದು ಬಲಿಷ್ಠ ಕಪ್ಪೆ ಒಪ್ಪಿಕೊಂಡಿತು. ಈ ಕಾರ್ಯಕ್ಕೆ ಬೇಕಾದ ಸಕಲ ಸಹಕಾರ ನಮ್ಮ ಬಳಗದಿಂದ ಸಿಗಲಿದೆ, ಹಿಡಿದ ಕೆಲಸದಲ್ಲಿ ಜಯವಾಗುತ್ತದೆ ಎಂದು ಎಲ್ಲ ಕಪ್ಪೆಗಳು ಸಭೆ ಮುಗಿಸಿದವು. ಒಂದು ದಿನ ಹಾವು ಮರಿಕಪ್ಪೆಯನ್ನು ಕಬಳಿಸಲು ಎಂದಿನಂತೆ ಹೊಂಚು ಹಾಕಿತ್ತು. ಇದನ್ನರಿತ ಮರಿಕಪ್ಪೆ ಮುಳ್ಳಿನ ಪೊದೆಯ ಮರೆಯಲ್ಲಿ ಬಿದ್ದಿದ್ದ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರಿನಲ್ಲಿ ಹೊಕ್ಕು ಅದಕ್ಕೆ ಬಿದ್ದಿದ್ದ ತೂತೊಂದರಲ್ಲಿ ಗೋಣು ಚಾಚಿ ಹಾವಿನತ್ತ ಕುಪ್ಪಳಿಸಿತು. ಪ್ಲಾಸ್ಟಿಕ್ ಕವರ್‌ನ ಕರ್ ಕರ್ ಸಪ್ಪಳ ಮತ್ತು ದೊಡ್ಡ ಗಾತ್ರವಾಗಿದ್ದನ್ನು ನೋಡಿದ ಹಾವು, ಇದಾವುದೋ ವಿಚಿತ್ರ ಜೀವಿ ಎಂದುಕೊಂಡು ಭಯದಿಂದ “ಯಾರು ನೀನು?’ ಎಂದು ಕೇಳಿತು. “ನಾನು ಕಪ್ಪೆಗಳ ದೇವರು… ಕರ್ ಕರ್ ಕಪ್ಪೆ ಕವರ್ ಕಪ್ಪೆ. ನನ್ನ ಭಕ್ತ ಸಮೂಹ ಸಂಕಷ್ಟದಲ್ಲಿ¨ªಾಗ ಅವರ ಶತ್ರುವನ್ನು ಸದೆಬಡೆದು ಅವರನ್ನು ಸಂರಕ್ಷಿಸಿ ಉದ್ಧರಿಸಲು ಬಂದಿದ್ದೇನೆ’ ಎಂದು ಮತ್ತೂಂದು ಹೆಜ್ಜೆ ಮುಂದೆ ಜಿಗಿಯಿತು. ಗಾಬರಿಗೊಂಡ ಹಾವು ಹಿಂದೆ ಸರಿದಂತೆಲ್ಲ ಕವರ್ ಕಪ್ಪೆ ಮುಂದೆ ಜಿಗಿಯಿತು. ಸ್ವಲ್ಪದೂರ ಹೀಗೆ ಹಿಮ್ಮೆಟ್ಟಿಸಿತು. ಹೆದರಿದ ಹಾವು ಎ¨ªೆನೋ, ಬಿ¨ªೆನೋ ಎಂದು ಜಾಗ ಖಾಲಿಮಾಡಿತು. ದೂರದಿಂದ ಎಲ್ಲವನ್ನೂ ಗಮನಿಸುತ್ತಿದ್ದ ಕಪ್ಪೆ$ಬಳಗ, ಮರಿಕಪ್ಪೆಯ ಜಾಣತನದಿಂದ ಯಾವುದೇ ಪ್ರಾಣಹಾನಿಯಾಗದೇ, ಸಮಸ್ಯೆಗೆ ಪರಿಹಾರ ಸಿಕ್ಕಿದ್ದಕ್ಕೆ ಖುಷಿಪಟ್ಟು ಮರಿಕಪ್ಪೆಯನ್ನು ಅಭಿನಂದಿಸಿದವು.
– ಅಶೋಕ ವಿ. ಬಳ್ಳಾ