Advertisement
ಉಡುಪಿ ಶ್ರೀ ಅನಂತೇಶ್ವರ ದೇವ ಸ್ಥಾನದ ಪ್ರಧಾನ ಅರ್ಚಕ ವೇ| ಮೂ| ವೇದವ್ಯಾಸ ಐತಾಳ ನುಡಿನಮನ ಸಲ್ಲಿಸಿ, ಮಗುವನ್ನೂ ಪ್ರೀತಿಯಿಂದ ಕರೆದು ಗೌರವದಿಂದ ಮಾತನಾಡಿಸುತ್ತಿದ್ದ ಲೀಲಾಧರ ಸರ್ವ ಜಾತಿ, ಮತ, ಧರ್ಮ ಪಂಥದವರಿಗೆ ಬೇಕಾದವರಾಗಿದ್ದರು. ಅವರ ಅಗಲುವಿಕೆಯನ್ನು ಅರಗಿಸಿ ಕೊಳ್ಳುವುದು ಕಷ್ಟ ಸಾಧ್ಯ, ನಾವೆಲ್ಲರೂ ಸೇರಿ ಅವರಿಗೆ ವಿಷ್ಣು ಸಾಯುಜ್ಯ ಪ್ರಾಪ್ತವಾಗಲಿ ಎಂದು ಪ್ರಾರ್ಥಿಸೋಣ ಎಂದು ಹೇಳಿದರು.
ಪೂರ್ಣಗೊಳಿಸೋಣ
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಮಾನವ ಜನ್ಮ ದೈವಚಿತ್ತದ ಕೊಡುಗೆಯಾಗಿದ್ದು ಇಲ್ಲಿ ಬದುಕಿದಷ್ಟು ದಿನ ಉತ್ತಮರಾಗಿ ಬದುಕಿ, ಜನರಿಗಾಗಿ ತಮ್ಮ ಜೀವನವನ್ನು ತೇಯ್ದ ಲೀಲಣ್ಣ ಇಚ್ಛಾಮರಣಿಯಾಗಿ ನಮ್ಮನ್ನು ಅಗಲಿ ರುವುದು ಅರಗಿಸಿಕೊಳ್ಳಲಾಗದ ಸತ್ಯ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ ಅವರ ಕನಸುಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ಹೊತ್ತುಕೊಳ್ಳೋಣ ಎಂದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಲೀಲಾಧರ ಅವರ ಎಲ್ಲ ಸೇವಾ ಕಾರ್ಯಗಳನ್ನು ಸಮಾಜ ಸ್ವೀಕರಿಸಿತ್ತು. ಅವರನ್ನು ಮತ್ತು ಅವರು ಮಾಡಿದ ಸೇವಾ ಕಾರ್ಯಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.
Related Articles
Advertisement
ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಲೀಲಾಧರ ಹತ್ತಾರು ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ಮಂದಿಯ ಪ್ರೀತಿಗೆ ಪಾತ್ರರಾಗಿದ್ದರು. ಸಮಾಜ ದಲ್ಲಿ ನೊಂದವರ ಪಾಲಿನ ಭಾಗ್ಯ ದಾತರಾಗಿದ್ದರು ಎಂದರು.ಮಜೂರು ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರು ಅಬ್ದುಲ್ ರಶೀದ್ ಸಖಾಫಿ ಮಾತನಾಡಿ, ಸಂಘರ್ಷಮಯ ವಾತಾವರಣವನ್ನು ಶಾಂತಿಯ ಹೂದೋಟವನ್ನಾಗಿ ಪರಿ ವರ್ತಿಸುವಲ್ಲಿ ಲೀಲಣ್ಣನವರ ಕೊಡುಗೆ ಅಪಾರ ಎಂದರು. ಅನಾಥರ ಬೆಳಕು
ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಅಲ½ನ್ ರಾಡ್ರಿಗಸ್ ಮಾತನಾಡಿ, ಅನಾಥರ ಬದುಕಿಗೆ ಲೀಲಾಧರ ಶೆಟ್ಟಿ ಬೆಳಕಾ ಗಿದ್ದರು. ಅವರು ಹೆಸರಿಗಾಗಿ ಏನೂ ಮಾಡಿಲ್ಲ, ಮಾಡಿದ ಕೆಲಸಗಳೇ ಅವರಿಗೆ ಹೆಸರನ್ನು ತಂದುಕೊಟ್ಟವು. ಅವರ ಬದುಕು ಎಲ್ಲರಿಗೂ ಮಾದರಿ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಪು ಬಂಟರ ಸಂಘದ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ, ಮರ್ಯಾದಸ್ಥನಾಗಿ ಬದುಕಿ, ಸಮಾಜಕ್ಕೂ ಮರ್ಯಾದೆ ತಂದಿತ್ತ ಶ್ರೇಷ್ಠ ವ್ಯಕ್ತಿ ಅವರು. ಈಗ ಅವರಿಲ್ಲ, ಅದರೆ ವ್ಯಕ್ತಿತ್ವ ಮಾತ್ರ ಸದಾ ಪ್ರೇರಣದಾಯಿ ಎಂದರು. ಲೀಲಾಧರ ಶೆಟ್ಟಿ ಅವರ ಸಹೋದರಿ ಯರಾದ ನಿರ್ಮಲಾ ವಿಠಲ ಶೆಟ್ಟಿ, ಗಂಗಾ ಭುಜಂಗ ಶೆಟ್ಟಿ, ವಿಠಲ ಶೆಟ್ಟಿ, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಕುಟುಂಬಸ್ಥರು, ಸಂಘಟಕರು, ಸಾವಿ ರಾರು ಅಭಿಮಾನಿಗಳು, ಹಿತೈಷಿಗಳು, ಪಾಲ್ಗೊಂಡಿದ್ದರು. ಕರಂದಾಡಿ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ಶೆಟ್ಟಿ ಬಾಲಾಜಿ ವಂದಿಸಿದರು.