Advertisement

ಕಾಪು ತಾಲೂಕು ಮತ ಎಣಿಕೆ ಪೂರ್ಣ: ರಾತ್ರಿ 1.45ಕ್ಕೆ ಪೂರ್ಣಗೊಂಡ ಮತ ಎಣಿಕೆ

01:54 AM Dec 31, 2020 | Team Udayavani |

ಕಾಪು: ಕಾಪು ತಾಲೂಕಿನ 290 ಸ್ಥಾನಗಳ ಪೈಕಿ ಬಜೆಪಿ ಬೆಂಬಲಿತರು 151 ಕಾಂಗ್ರೆಸ್ ಬೆಂಬಲಿತರು 115, ಪಕ್ಷೇತರ 8, ಎಸ್.ಡಿ.ಪಿ.ಐ 8, ಬೆಳಪು ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಗ್ರಾಮಾಭಿವೃದ್ಧಿ ಸಮಿತಿಯು 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

Advertisement

16 ಗ್ರಾಮ‌ ಪಂಚಾಯತ್ ಗಳ 142 ಮತಗಟ್ಟೆಯಲ್ಲಿ, 100 ಸ್ಥಾನಗಳಲ್ಲಿ 290 ಅಭ್ಯರ್ಥಿಗಳ ಆಯ್ಕೆ ನಡೆಯಬೇಕಿದ್ದು, 650 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

290 ಸ್ಥಾನಗಳ ಪೈಕಿ 10 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 280 ಸ್ಥಾನಗಳಿಗೆ ಕಾಂಗ್ರೆಸ್, ಬಿಜೆಪಿ ಬೆಂಬಲಿತರ ಜೊತೆಗೆ ಎಸ್.ಡಿ.ಪಿ.ಐ ಮತ್ತು ಪಕ್ಷೇತರರೂ ತೀವ್ರ ಸ್ಪರ್ಧೆಯೊಡ್ಡಿದ್ದರು.

ಬಿಜೆಪಿ 10, ಕಾಂಗ್ರೆಸ್ 5 , ಗ್ರಾಮಾಭಿವೃದ್ಧಿ 1 ಗ್ರಾಮ ಪಂಚಾಯತ್ ನಲ್ಲಿ ಆಡಳಿತ : ಕಾಪು ತಾಲೂಕಿನ 16 ಗ್ರಾಮ‌ ಪಂಚಾಯತ್ ಗಳ ಪೈಕಿ ಎಲ್ಲೂರು, ಪಲಿಮಾರು, ಮುದರಂಗಡಿ, ಇನ್ನಂಜೆ, ಪಡುಬಿದ್ರಿ, ಬಡಾ, ಬೆಳ್ಳೆ, ಮಜೂರು, ಹೆಜಮಾಡಿ, ಕುತ್ಯಾರು ಗ್ರಾಮ ಪಂಚಾಯತ್ ಗಳಲ್ಲಿ ಬಿಜೆಪಿ ಬೆಂಬಲಿತ ಹಾಗೂ ತೆಂಕ, ಶಿರ್ವ, ಕೋಟೆ, ಕುರ್ಕಾಲು, ಕಟಪಾಡಿ ಗ್ರಾಮ ಪಂಚಾಯತ್ ಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಮತ್ತು ಬೆಳಪುವಿನಲ್ಲಿ ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಗ್ರಾಮಾಭಿವೃದ್ಧಿ ಸಮಿತಿಯು ಆಡಳಿತದ ಚುಕ್ಕಾಣಿ ಹಿಡಿಯಲಿದೆ.

ಪಲಿಮಾರಿನಲ್ಲಿ ಬಿಜೆಪಿ ಆಡಳಿತ : ಪಲಿಮಾರು 14 ಸ್ಥಾನಗಳಲ್ಲಿ 9 ಬಿಜೆಪಿ ಬೆಂಬಲಿತರು ಮತ್ತು 7 ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿದ್ದಾರೆ.

Advertisement

ಎಲ್ಲೂರಿನಲ್ಲಿ ಬಿಜೆಪಿಗೆ ಮತ್ತೆ ಆಡಳಿತ: ಎಲ್ಲೂರು ಗ್ರಾಮ‌ ಪಂಚಾಯತ್ 14 ಸ್ಥಾನಗಳಲ್ಲಿ 10 ಬಿಜೆಪಿ ಬೆಂಬಲಿತರು ಮತ್ತು‌ 4 ಕಾಂಗ್ರೆಸ್ ಬೆಂಬಲಿತರು ಜಯ ಗಳಿಸಿದ್ದಾರೆ.

ಬೆಳಪು ಮತ್ತೆ ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡ : ಬೆಳಪು ಗ್ರಾಮ ಪಂಚಾಯತ್ ನಲ್ಲಿ ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಗ್ರಾಮಾಭಿವೃದ್ಧಿ ಸಮಿತಿ 8, ಬಿಜೆಪಿ 1 ಮತ್ತು ಎಸ್.ಡಿ.ಪಿ.ಐ 2 ಸ್ಥಾನಗಳನ್ನು ಗೆದ್ದಿವೆ.

ಕುತ್ಯಾರಿನಲ್ಲಿ ಅರಳಿದ ಬಿಜೆಪಿ : ಕುತ್ಯಾರು ಗ್ರಾಮ ಪಂಚಾಯತ್ ನ 14 ಸ್ಥಾನಗಳ ಪೈಕಿ 10 ಬಿಜೆಪಿ ಬೆಂಬಲಿತರು ಮತ್ತು 4 ಮಂದಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ. ಇವರಲ್ಲಿ ಬಿಜೆಪಿ -2, ಕಾಂಗ್ರೆಸ್-2 ಅವಿರೋಧ ಆಯ್ಕೆ ನಡೆದಿತ್ತು.

ಹೆಜಮಾಡಿಯಲ್ಲಿ ಬಿಜೆಪಿ ಜಯ : ಹೆಜಮಾಡಿ ಗ್ರಾಮ ಪಂಚಾಯತ್ ನ 21 ಸ್ಥಾನಗಳ ಪೈಕಿ 16 ಬಿಜೆಪಿ ಬೆಂಬಲಿತ, 4 ಕಾಂಗ್ರೆಸ್ ಬೆಂಬಲಿತರು ಮತ್ತು 1 ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 1 ಸ್ಥಾನ ಕ್ಕೆ ಅವಿರೋಧ ಆಯ್ಕೆ ನಡೆದಿತ್ತು.

ಕೋಟೆಯಲ್ಲಿ ಕಾಂಗ್ರೆಸ್ ಗೆ ಜೈ : ಕೋಟೆ ಗ್ರಾಮ ಪಂಚಾಯತ್ ನ‌15 ಸ್ಥಾನಗಳ ಪೈಕಿ 8 ಕಾಂಗ್ರೆಸ್ ಬೆಂಲಿತರು ಮತ್ತು 7 ಮಂದಿ ಕಾಂಗ್ರೆಸ್ ಬೆಂಬಲಿತರು ಜಯ ಸಾಧಿಸಿದ್ದಾರೆ.

ಮಜೂರು ಮತ್ತೆ ಬಿಜೆಪಿಗೆ : ಮಜೂರು ಗ್ರಾಮ‌ ಪಂಚಾಯತ್ ನ 13 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು 8 ಮತ್ತು ಕಾಂಗ್ರೆಸ್ ಬೆಂಬಲಿತರು 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ‌

ಬೆಳ್ಳೆಯಲ್ಲಿ ಬಿಜೆಪಿ ಕಮಾಲ್ : ಬೆಳ್ಳೆ ಗ್ರಾಮ‌ ಪಂಚಾಯತ್ ನ 18 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು 16 ಮತ್ತು ಕಾಂಗ್ರೆಸ್ ಬೆಂಬಲಿತರು 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ‌

ಕುರ್ಕಾಲು ಕಾಂಗ್ರೆಸ್ ಪಾಲು : ಕುರ್ಕಾಲು ಗ್ರಾಮ‌ ಪಂಚಾಯತ್ ನ 14 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು 4 ಮತ್ತು ಕಾಂಗ್ರೆಸ್ ಬೆಂಬಲಿತರು 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ‌

ಇನ್ನಂಜೆಯಲ್ಲಿ ಬಿಜೆಪಿ ಜಯ : ಇನ್ನಂಜೆ ಗ್ರಾಮ‌ ಪಂಚಾಯತ್ ನ 13 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು 7 ಮತ್ತು ಕಾಂಗ್ರೆಸ್ ಬೆಂಬಲಿತರು 3 ಮತ್ತು ಪಕ್ಷೇತರರು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ‌

ಬಡಾ (ಉಚ್ಚಿಲ)ದಲ್ಲಿ ಬಿಜೆಪಿ : ಬಡಾ ಉಚ್ಚಿಲ ಗ್ರಾಮ‌ ಪಂಚಾಯತ್ ನ 21 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು 11 ಮತ್ತು ಕಾಂಗ್ರೆಸ್ ಬೆಂಬಲಿತರು 6 ಮತ್ತು ಎಸ್.ಡಿ.ಪಿ.ಐ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ‌

ಶಿರ್ವದಲ್ಲಿ ಕಾಂಗ್ರೆಸ್ ಗೆ ಜಯಮಾಲೆ : ಶಿರ್ವ ಗ್ರಾಮ‌ ಪಂಚಾಯತ್ ನ 34 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು 12 ಮತ್ತು ಕಾಂಗ್ರೆಸ್ ಬೆಂಬಲಿತರು 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ‌

ಮುದರಂಗಡಿಯಲ್ಲಿ ಬಿಜೆಪಿಗೆ ಅಧಿಕಾರ : ಮುದರಂಗಡಿ ಗ್ರಾಮ‌ ಪಂಚಾಯತ್ ನ 15 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು 10 ಮತ್ತು ಕಾಂಗ್ರೆಸ್ ಬೆಂಬಲಿತರು 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ‌

ತೆಂಕದಲ್ಲಿ ಕಾಂಗ್ರೆಸ್ : ತೆಂಕ ಗ್ರಾಮ‌ ಪಂಚಾಯತ್ ನ 11 ಸ್ಥಾನಗಳ ಪೈಕಿ 5 ಬಿಜೆಪಿ ಬೆಂಬಲಿತರು ಮತ್ತು ಕಾಂಗ್ರೆಸ್ ಬೆಂಬಲಿತರು 6 ಕ್ಷೇತ್ರಗಳಲ್ಲಿ, ಜಯ ಸಾಧಿಸಿದ್ದಾರೆ. ‌

ಪಡುಬಿದ್ರಿಯಲ್ಲಿ ಬಿಜೆಪಿಗೆ ಅವಕಾಶ : ಪಡುಬಿದ್ರಿ ಗ್ರಾಮ‌ ಪಂಚಾಯತ್ ನ 34 ಸ್ಥಾನಗಳ ಪೈಕಿ 16 ಬಿಜೆಪಿ ಬೆಂಬಲಿತರು ಮತ್ತು ಕಾಂಗ್ರೆಸ್ ಬೆಂಬಲಿತರು 12 ಕ್ಷೇತ್ರಗಳಲ್ಲಿ, ಎಸ್.ಡಿ.ಪಿ.ಐ 2, ಪಕ್ಷೇತರ 4 ಸಾಧಿಸಿದ್ದಾರೆ. ‌

ಕಟಪಾಡಿಯಲ್ಲಿ ಕಾಂಗ್ರೆಸ್ ಗೆ ಗೆಲುವು: ಕಟಪಾಡಿ ಗ್ರಾಮ‌ ಪಂಚಾಯತ್ ನ 26 ಸ್ಥಾನಗಳ ಪೈಕಿ 10 ಬಿಜೆಪಿ ಬೆಂಬಲಿತರು ಮತ್ತು ಕಾಂಗ್ರೆಸ್ ಬೆಂಬಲಿತರು 16 ಕ್ಷೇತ್ರಗಳಲ್ಲಿ, ಜಯ ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next