ಕಾಪು: ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಶ್ರಯದಲ್ಲಿ ಕೋಟೇಶ್ವರ ಯಾದವೇಂದ್ರ ಆಯುರ್ವೇದ ವೈದ್ಯ ಶಾಲೆ ಮತ್ತು ಶ್ರೀ ಭುವನೇಂದ್ರ ಪಂಚಕರ್ಮ ಸೆಂಟರ್ ಹಾಗೂ ಶ್ರೀ ಭುವನೇಂದ್ರ ತೀರ್ಥ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ರವಿವಾರ ಕಾಪು ಶ್ರೀ ಹಳೇ ಮಾರಿಯಮ್ಮ ಸಭಾಭವನದಲ್ಲಿ ಜರಗಿದ ಆರೋಗ್ಯ ಸೇವಾ ವಿಶೇಷ ಶಿಬಿರವನ್ನು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಮಾಜಕ್ಕೆ ಜಿಎಸ್‌ಬಿ ಸಮಾಜದ ಕೊಡುಗೆ ಅಪಾರವಾಗಿದೆ. ಸಮಾಜದ ಅಭ್ಯುದಯಕ್ಕಾಗಿ ವಿವಿಧ ಕೊಡುಗೆಗಳನ್ನು ನೀಡುತ್ತಾ ಬರುತ್ತಿರುವ ಜಿಎಸ್‌ಬಿ ಸಮಾಜವು ಇದೀಗ ಜನರ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಆಯುರ್ವೇದ ವ್ಯವಸ್ಥೆಯ ವೈದ್ಯಕೀಯ ಪದ್ಧತಿಯೊಂದಿಗೆ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು.
ಇದನ್ನೂ ಓದಿ:ಕೋಚಿಂಗ್ ಅವಧಿ ಅಂತ್ಯ: ಭಾವನಾತ್ಮಕ ಪೋಸ್ಟ್ ಮಾಡಿದ ರವಿ ಶಾಸ್ತ್ರಿ
ಕೋಟೇಶ್ವರ ಯಾದವೇಂದ್ರ ಆಯುರ್ವೇದ ವೈದ್ಯ ಶಾಲೆ ಮತ್ತು ಶ್ರೀ ಭುವನೇಂದ್ರ ಪಂಚಕರ್ಮ ಸೆಂಟರ್ ಹಾಗೂ ಶ್ರೀ ಭುವನೇಂದ್ರ ತೀರ್ಥ ಸ್ವಾಮಿ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ದಿನೇಶ್ ಕಾಮತ್, ಮಣಿಪಾಲ ಕೆಎಂಸಿ ಆಸ್ಪತ್ರೆಯ ಆಯುರ್ವೇದ ವಿಭಾಗದ ನಿವೃತ್ತ ಮುಖ್ಯಸ್ಥ ಡಾ| ಎ.ಎಸ್. ಕಾಮತ್, ಆರೋಗ್ಯ ಭಾರತಿ ಉಡುಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಪ್ರಭಾಕರ್ ಭಟ್, ಶಿವಾನಿ ಡಯಾಗ್ನೊಸ್ಟಿಕ್ ಸೆಂಟರ್‌ನ ಡಾ| ಶಿವಾನಂದ ನಾಯಕ್, ನವ್ಯ ಚೇತನ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ರಾಜಶಂಕರ್, ನೇತ್ರ ತಜ್ಞ ಡಾ| ಲಾವಣ್ಯ ರಾವ್, ಐ ನೀಡ್ ಆಪ್ಟಿಕಲ್ ಗ್ರೂಫ್‌ನ ಗಜಾನನ ನಾಯಕ್, ಪ್ರಾಯೋಜಕರಾದ ಗೋಕುಲ್ ದಾಸ್ ಶೆಣೈ, ಶ್ರೀಧರ ಶೆಣೈ, ಮರಲೀಧರ್ ಶೆಣೈ, ಗೀತಾ ಜಿ. ಶೆಣೈ, ದೇಗುಲದ ಆಡಳಿತ ಮಂಡಳಿಯ ಸದಸ್ಯರಾದ ಸದಾಶವಿ ಕಾಮತ್, ರಾಜೇಶ್ ಶೆಣೈ, ಸುರೇಶ್ ಪ್ರಭು ಮೊದಲಾದವರು ಉಪಸ್ಥಿತರಿದ್ದರು.
ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಹಳೇ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಜಿ. ಶೆಣೈ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು.