Advertisement

ಕಾಪು ಅಪಾರ್ಟ್‌ಮೆಂಟ್ ಕಂಪೌಂಡ್ ಕುಸಿತ : ರಿಕ್ಷಾ, ಬೈಕ್ ಗಳಿಗೆ ಹಾನಿ

11:37 AM Jun 18, 2023 | Team Udayavani |

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕಾಪು ಫೇಮಸ್ ಅಪಾರ್ಟ್ಮೆಂಟ್ ಬಳಿ ಕಂಪೌಂಡು ಕುಸಿದು ಮೂರು ಬೈಕ್ ಮತ್ತು ಒಂದು ರಿಕ್ಷಾ ಜಖಂಗೊಂಡಿದೆ.

Advertisement

ರವಿವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು ಎರಡು ಬೈಕ್, ಮತ್ತು ಸ್ಕೂಟಿ ಸಂಪೂರ್ಣ ಮಣ್ಣಿನಡಿ ಸಿಲುಕಿದ್ದು, ರಿಕ್ಷಾ ಕಂಪೌಂಡ್  ಕುಸಿತದ ರಭಸಕ್ಕೆ ಮುಂದೆ ಚಲಿಸಿ, ಹಾನಿಗೀಡಾಗಿದೆ.

ಫೇಮಸ್ ಅಪಾರ್ಟ್‌ಮೆಂಟ್ ನಿವಾಸಿಗಳಾದ ಅಬ್ದುಲ್ ಖಾದರ್, ಅಬ್ದುಲ್ ಕಬೀರ್ ಎಂಬವರ ಬೈಕ್ ಮತ್ತು ಶರೀಪ್ ಎಂಬವರ ರಿಕ್ಷಾ ಹಾನಿಗೊಳಗಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ.

ರಾ.ಹೆ. 66 ರ ಬದಿಯಲ್ಲಿ ಪೈಪ್ ಲೈನ್ ಕಾಮಗಾರಿ ನಡೆದಿದ್ದು ಈ ವೇಳೆ ಸಮರ್ಪಕ ರೀತಿಯಲ್ಲಿ ಫಿಲ್ಲಿಂಗ್ ನಡೆಯದಿರುವುದೇ ಘಟನೆ ಕಾರಣ ಎಂದು ಅಪಾರ್ಟ್ಮೆಂಟ್ ಮಾಲಕರು ಮತ್ತು ನಿವಾಸಿಗಳು ದೂರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next