Advertisement

ಕಪಿಲ್‌ ಹೊಸ ಚಿತ್ರ ಹಸಿವು ಮತ್ತು ಅರಿವು

11:02 AM Jun 19, 2018 | Team Udayavani |

“ಹಳ್ಳಿ ಸೊಗಡು’ ಚಿತ್ರ ನಿರ್ದೇಶಿಸಿರುವ ಕಪಿಲ್‌ ಈಗ ತಮ್ಮ ನಿರ್ದೇಶನದ ಎರಡನೇ ಚಿತ್ರವನ್ನು ಆರಂಭಿಸುತ್ತಿದ್ದಾರೆ. “ಹಸಿವು ಮತ್ತು ಅರಿವು’ ಎಂಬ ಹೆಸರಿನ ಈ ಚಿತ್ರದಲ್ಲಿ  ಪ್ರಪಂಚದಲ್ಲಿ ಹಸಿವು ಎನ್ನುವುದು ಎಷ್ಟು ಮಹತ್ತರವಾದುದು. ಬಡವರ ಜೀವನದಲ್ಲಿ ಹಸಿವು ಎಷ್ಟೆಲ್ಲ ಕೆಲಸಗಳನ್ನು  ಮಾಡಿಸುತ್ತದೆ. ಹಸಿವಿನ ಮಹತ್ವ ಹಾಗೂ ಅದರ ಅನ್ನದ ಪ್ರಾಮುಖ್ಯತೆ ಬಗ್ಗೆ ಅರಿವನ್ನು ಮೂಡಿಸುವ ಕಥಾಹಂದರ ಈ ಚಿತ್ರದಲ್ಲಿರುತ್ತದೆ.  

Advertisement

ಈ ಚಿತ್ರದ ಪರಿಕಲ್ಪನೆಯ ಜೊತೆಗೆ ನಿರ್ದೇಶನವನ್ನು ಕಪಿಲ್‌ ಅವರೇ ಮಾಡುತ್ತಿದ್ದಾರೆ. ಅಲ್ಲದೆ ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ಊಟ ಮಾಡುವಾಗ ಅನ್ನವನ್ನು ಅರ್ಧಕ್ಕೆ ಬಿಡಬೇಡಿ, ಅನ್ನವನ್ನು ಬಿಸಾಕಬೇಡಿ, ಅನ್ನಕ್ಕೆ ಬೆಲೆಕೊಡಿ ಎನ್ನುವ ಸಂದೇಶವನ್ನು ಸಾರುವಂಥ ಚಲನಚಿತ್ರ ಇದಾಗಿದೆ. ಮುಂದಿನವಾರ ಈ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ನಡೆಯಲಿದೆ. 

ಭಾನು ಪೃಥ್ವಿ 100 ಮಾರ್ಕ್‌ ಫಿಲಂಸ್‌ ಲಾಂಛನದಲ್ಲಿ ಶ್ರೀಮತಿ ಶೋಭಾವತಿ ಕಪಿಲ್‌ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಿ.ನಾರಾಯಣ್‌, ಶ್ರೀನಾಥ್‌ರಾವ್‌ ಅವರ ಸಂಗೀತ, ಭುವನೇಶ್ವರಿ ಬಲರಾಮ್‌ ಅವರ ಸಂಗೀತ, ಬಿ.ಆರ್‌. ನರಸಿಂಹ ಮೂರ್ತಿ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಉದಯಲೇಖಾ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ಗುಬ್ಬಿ ನಟರಾಜ್‌, ಕೃಷ್ಣಮೂರ್ತಿ ತಳಾಲು ಈ ಚಿತ್ರದ ಉಳಿದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next