Advertisement

ಒಡೆದು ಆಳುವುದಕ್ಕೆ ಯೋಗಿ ಬಯಸುತ್ತಿದ್ದಾರೆಯೇ.?ಸಿಎಂ ಅಬ್ಬಾ ಜಾನ್ ಹೇಳಿಕೆಗೆ ಸಿಬಲ್ ತಿರುಗೇಟು

11:24 AM Sep 13, 2021 | Team Udayavani |

ನವ ದೆಹಲಿ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ‘ಅಬ್ಬಾ ಜಾನ್’ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ತಿರುಗೇಟು ನೀಡಿದ್ದಾರೆ.

Advertisement

ಈ ಕುರಿತಾಗಿ ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಯೋಗಿ ವಿರುದ್ಧ ಹರಿಹಾಯ್ದ ಸಿಬಲ್, ನಮ್ಮ ಸರ್ಕಾರ, ಅಫ್ಗಾನಿಸ್ತಾನದಲ್ಲಿಯೂ ಕೂಡ ಐಕ್ಯತೆಯನ್ನು ಬಯಸುತ್ತದೆ. ಆದರೇ, ಉತ್ತರ ಪ್ರದೇಶದಲ್ಲಿ ಯಾಕೆ ಯೋಗಿ ಆದಿತ್ಯನಾಥ್ ಸರ್ಕಾರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತದೆ..? ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶವನ್ನು ಒಡೆದು ಆಳುವುದಕ್ಕೆ ಬಯಸುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ‘ಭಯೋತ್ಪಾದನೆಯ ತಾಯಿ’ | ರಾಮನನ್ನು ನಿಂದಿಸಿದ್ದಕ್ಕೆ ಫಲ ಅನುಭವಿಸಲೇಬೇಕು : ಯೋಗಿ

ಮುಂಬರುವ ವಿಧಾನ ಸಭೆ ಚುನಾವಣೆಯ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ, ಈ ಹಿಂದಿನ ಸರ್ಕಾರಗಳನ್ನು ಟೀಕಿಸಿದರು. 2017ರ ಮುಂಚೆ ಇಲ್ಲಿಯ ಪರಿಸ್ಥಿತಿ ತೀರಾ ಭಿನ್ನವಾಗಿತ್ತು. ಅಂದು ಎಲ್ಲರಿಗೂ ಪಡಿತರ ಧಾನ್ಯಗಳು ಸಿಗುತ್ತಿರಲಿಲ್ಲ. ಕೇವಲ ‘ಅಬ್ಬಾ ಜಾನ್’ ಎನ್ನುತ್ತಿದ್ದವರಿಗೆ ಮಾತ್ರ ರೇಷನ್ ದೊರೆಯುತ್ತಿತ್ತು. ಆದರೆ, ಅಂದು ಇದ್ಧ ಪರಿಸ್ಥಿತಿ ಇಂದು ತೊಲಗಿದೆ. ಅಂತಹ ತಾರತಮ್ಯದ ರಾಜಕಾರಣಕ್ಕೆ ಬಿಜೆಪಿ ಅಂತ್ಯ ಹಾಡಿದೆ ಎಂದಿದ್ದರು.

ನಾವು ಗುರುತಿನ (ಜಾತಿಗಳ) ಆಧಾರದ ಮೇಲೆ ಪಡಿತರ ವಿತರಿಸುತ್ತಿಲ್ಲ. 2017 ಕ್ಕಿಂತ ಮುಂಚೆ ನಿಮಗೆಲ್ಲರಿಗೂ ಪಡಿತರ ಸಿಗುತ್ತಿತ್ತೇ ? ಎಂದು ಪ್ರಶ್ನಿಸಿದ ಸಿಎಂ, ಪ್ರಸ್ತುತ ಎಲ್ಲವೂ ಬದಲಾಗಿದೆ. ಪಡಿತರ ವಿತರಣೆಯಲ್ಲಿ ಯಾರಾದರೂ ಭ್ರಷ್ಟಾಷಾರ ಎಸಗಿದರೆ ಅವರನ್ನು ಜೈಲಿಗೆ ಅಟ್ಟಲಾಗುತ್ತದೆ ಎಂದು ಗುಡುಗಿದ್ದರು.

Advertisement

ಇದೆ ವೇಳೆ ಕೇಂದ್ರ ಸರ್ಕಾರವನ್ನು ಹೊಗಳಿದ ಯೋಗಿ ಆದಿತ್ಯನಾಥ್, ದೇಶಕ್ಕೆ ಉತ್ತಮವಾದ ರಾಜಕೀಯ ಕಾರ್ಯಸೂಚಿಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ ಎಂದಿದ್ದಲ್ಲದೇ, ಮೊದಲು ನಮ್ಮ ದೇಶವು ಭಾಷೆ, ಜಾತಿ, ಜನಾಂಗೀಯತೆ ಮತ್ತು ಕುಟುಂಬದ ರಾಜಕೀಯದಲ್ಲಿ ನಿರತವಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಬಡವರು, ರೈತರು, ಗ್ರಾಮವಾಸಿಗಳು ಹಾಗೂ ಯುವಜನಾಂಗದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಪ್ರತಿಫಲವಾಗಿ ಇಂದು ದೇಶದ ಎಲ್ಲ ಜನರು ಸಮಾನವಾಗಿ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ನಮ್ಮ ಆಡಳಿತದಲ್ಲಿ ತಾರತಮ್ಯಕ್ಕೆ ಆಸ್ಪದ ನೀಡಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದರು.

ಇದನ್ನೂ ಓದಿ : ಭಾರತದಲ್ಲಿ 24ಗಂಟೆಯಲ್ಲಿ 27,254 ಕೋವಿಡ್ ಪ್ರಕರಣ , ಕೇರಳದಲ್ಲಿ 20 ಸಾವಿರ ಪ್ರಕರಣ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next