Advertisement

ಕಪ್ಪತ್ತಗುಡ್ಡ ರಕ್ಷಣೆಗೆ ಮುಂದಾಗಲಿ ಸರ್ಕಾರ

03:16 PM Jun 15, 2020 | Suhan S |

ಗದಗ: ಪಾರಂಪರಿಕ ಔಷಧ ಅಥವಾ ನಾಟಿ ಔಷಧಿಯನ್ನು ಉಪಯೋಗಿಸುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳಿಲ್ಲ ಎಂದು ಕಪ್ಪತ್ತಗುಡ್ಡ ಗಂಗಿಬಾವಿಮಠದ ಪಾರಂಪರಿಕ ವೈದ್ಯ ಸಿ.ಎಂ.ಗುರುಶಾಂತಯ್ಯಸ್ವಾಮಿ ಅಭಿಪ್ರಾಯಪಟ್ಟರು.

Advertisement

ಗದಗ-ಬೆಟಗೇರಿ ರೋಟರಿ ಕ್ಲಬ್‌ನ ಸದಸ್ಯರ ತಂಡ ಕೈಗೊಂಡಿದ್ದ “ಕಪ್ಪತ್ತಗುಡ್ಡ ಪರಿಸರ ಪ್ರಜ್ಞೆ’ ಹೊರ ಸಂಚಾರ ಯೋಜನಾ ಕಾರ್ಯಕ್ರಮದಡಿ ಕಪ್ಪತ್ತಗುಡ್ಡ ಗಂಗಿಬಾವಿಮಠಕ್ಕೆ ಭೇಟಿ ನೀಡಿದ ತಂಡದೊಂದಿಗೆ ಸಂವಾದ ನಡೆಸಿದ ಅವರು, ಪಾರಂಪರಿಕ ವೈದ್ಯರು ಬಳಸುವ ಔಷಧಿಯ ಸಸಿಗಳ ಬಗ್ಗೆ ಮತ್ತು ಅದರ ಉಪಯೋಗಗಳು, ಗಿಡಮೂಲಿಕೆಗಳಿಂದ ಇನ್ನೂ ಅನೇಕ ಔಷಧಗಳು ತಯಾರಾಗುತ್ತಿದ್ದರೂ, ಜನರಿಗೆ ಔಷಧಿಧೀಯ ಸಸ್ಯಗಳ ಸಂರಕ್ಷಣೆಯ ಮಹತ್ವ ಅರಿವಾಗುತ್ತಿಲ್ಲ. ಜೊತೆಗೆ ಇಂಗ್ಲಿಷ್‌ ಔಷಧ, ಚಿಕಿತ್ಸೆಯಿಂದ ಉಂಟಾಗುವ ಅಡ್ಡ ಪರಿಣಾಮಗಳಿಗೆ ಒಳಗಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಪಾರ ಖನಿಜ ಸಂಪತ್ತು, ಔಷಧೀಯ ಸಸ್ಯ ಸಂಪತ್ತು ಹೊಂದಿರುವ ಕಪ್ಪತ್ತಗುಡ್ಡವನ್ನು ಯಾವುದೇ ರೀತಿಯ ಗಣಿಗಾರಿಕೆಗೆ ಮುಕ್ತ ಮಾಡಬಾರದು. ಕಪ್ಪತ್ತಗಿರಿ ಸಂರಕ್ಷಣೆಗೆ ಸರಕಾರ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್‌ ಅಧ್ಯಕ್ಷ ಎಸ್‌.ಎಸ್‌.ಹೊಸಳ್ಳಿಮಠ, ಮಾಜಿ ಅಧ್ಯಕ್ಷ ಡಾ|ಗಚ್ಚಿನಮಠ, ರೋಟರಿ ವೇಲ್ಫೆರ್‌ ಸೊಸೈಟಿಯ ಕಾರ್ಯದರ್ಶಿ ಶ್ರೀಧರ ಸುಲ್ತಾನಪೂರ, ಸದಸ್ಯ ಡಾ|ಉಪ್ಪಿನ, ಹಾಲುಮತ ಮಹಾಸಭಾದ ರಾಜ್ಯ ಅಧ್ಯಕ್ಷ ರುದ್ರಣ್ಣ ಗುಳಗುಳಿ, ಸ್ವಕುಳಸಾಳಿ ಸಮಾಜದ ಅಧ್ಯಕ್ಷ ವಿಠuಲ ಸಫಾರೆ, ಸೋಮನಗೌಡ ಪಾಟೀಲ, ಹನಮರಡ್ಡಿ ಶಿಗ್ಗಾಂವಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next