Advertisement

ಕಪಾಲ ಬೆಟ್ಟ: ತಾರ್ಕಿಕ ಅಂತ್ಯದ ವರೆಗೂ ಹೋರಾಟ

01:57 PM Oct 21, 2020 | Suhan S |

ರಾಮನಗರ: ಜಿಲ್ಲೆಯ ಕನಕಪುರ ತಾಲೂಕು ಉಯ್ಯಂಬಳ್ಳಿ ಹೋಬಳಿ ನಲ್ಲಹಳ್ಳಿ ಗ್ರಾಮದ ಮುನೇಶ್ವರ ಬೆಟ್ಟದಲ್ಲಿ (ಕಪಾಲ ಬೆಟ್ಟ) ಏಸುಬೃಹತ್‌ ಪ್ರತಿಮೆ ಸ್ಥಾಪನೆಗೆ ಹೈಕೋರ್ಟ್‌ ತಡೆ  ಯಾಜ್ಞೆ ನೀಡಿರುವುದನ್ನು ಹಿಂದೂ ಜಾಗರಣವೇದಿ ಕೆ ಜಿಲ್ಲಾ ಘಟಕ ಸ್ವಾಗತಿಸಿದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ದೋ.ಕೇಶವ ಮೂರ್ತಿ ತಿಳಿಸಿದರು.

Advertisement

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುನೇಶ್ವರ ಬೆಟ್ಟದಲ್ಲಿ (ಕಪಾಲ ಬೆಟ್ಟ) ಅನುಮತಿ ಇಲ್ಲದೆ, ಯಾವುದೇ ಕಾಮಗಾರಿ ನಡಸೆದಂತೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಬೆಟ್ಟದಲ್ಲಿಎಲ್ಲಕಾನೂನುಗಳನ್ನು ಗಾಳಿಗೆ ತೂರಿ ಬೃಹತ್‌ ಏಸುಮೂರ್ತಿ ಸ್ಥಾಪನೆಗೆ ಟ್ರಸ್ಟ್‌ ಮುಂದಾಗಿತ್ತು. ಕಾಂಗ್ರೆಸ್‌ ವರಿಷ್ಠರಾದ ಸೋನಿಯಾರನ್ನು ಮೆಚ್ಚಿಸಿ ಅಧಿಕಾರ ಪಡೆಯುವ ಸಲುವಾಗಿ ಡಿಕೆ ಸಹೋದ ರರುಕಾನೂನು ಬಾಹೀರವಾಗಿ ಹಾರೋಬೆಲೆ ಕಪಾ ಲಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ ಜಾಗ ಮಂಜೂರು ಮಾಡಿಸಿದ್ದರು ಎಂದರು.

ಹುನ್ನಾರ!: ಯಾವುದೇ ಸರ್ಕಾರಿ ಜಾಗವನ್ನು ಯಾವುದೇ ಮತೀಯ ಸಂಘಟನೆಗಳಿಗೆ ನೀಡಬಾರದು ಎಂದು ಸುಪ್ರೀಂ ಕೋರ್ಟ್‌ನ ಆದೇಶವಿದೆ. ಕಪಾಲಬೆಟ್ಟ ಅಭಿವೃದ್ದಿ ಟ್ರಸ್ಟ್‌ ವಿಚಾರದಲ್ಲಿ ಈಆದೇಶ ಉಲ್ಲಂಘನೆಯಾಗಿದೆ. ಬೆಟ್ಟಕ್ಕೆ ರಸ್ತೆ, ವಿದ್ಯುತ್‌ ಸಂಪರ್ಕ, ನೀರಿನ ಸಂಪರ್ಕ ಎಲ್ಲವೂ ಅನಧಿಕೃತ. ಹಾರೋಹಳ್ಳಿಯ ಕ್ರೈಸ್ತ ಕುಟುಂಬಗಳಿಗಾಗಿ ಅಲ್ಲಿ ಚರ್ಚ್‌ ಇದೆ. ವಿಶ್ವಕ್ಕೆ ದೊಡ್ಡದಾದ ಏಸು ವಿಗ್ರಹ ನಿರ್ಮಾಣ ಬೇಕಾಗಿರಲಿಲ್ಲ ಎಂದರು.

ಅಂತ್ಯದವರೆಗೂ ಹೋರಾಟ: ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಗಜೇಂದ್ರ ಸಿಂಗ್‌ ಮಾತನಾಡಿ, ಡಿಕೆ ಸಹೋದರರು ರಾಜಕೀಯ ಮಾಡಲಿ ಅದಕ್ಕೆ ಅಭ್ಯಂತರವೇನಿಲ್ಲ. ಆದರೆ, ಮತೀಯ ವಿಚಾರಗಳಲ್ಲಿ ಕಾನೂನು, ನಿಯಮಗಳನ್ನು ಗಾಳಿಗೆ ತೂರುವುದು ಸರಿಯಲ್ಲ. ನಾನೇನು ಮಾಡಿದರೂ ನಡೆಯುತ್ತೆ ಎಂಬ ಧೋರಣೆಗೆ ನ್ಯಾಯಾಲಯದ ತಡೆಯಾಜ್ಞೆ ತಕ್ಕ ಪಾಠಕಲಿಸಿದೆ ಎಂದರು.

ರಾಜಕೀಯ ಲಾಭಕ್ಕಾಗಿ ಪ್ರತಿಮೆ ನಿರ್ಮಾಣದ ಅಗತ್ಯವಿಲ್ಲ. ಎಂದು ಕ್ರಿಶ್ಚಿಯನ್‌ ಸಮುದಾಯದವರೇ ಕೋರ್ಟ್‌ನ ಮೆಟ್ಟಿಲೇರಿದ್ದಾರೆ. ಹಿಂದೂ ಜಾಗರಣ ವೇದಿಕೆ ಹೋರಾಟಕ್ಕೆ ನೆರವಾಗಿದೆ. ಹಿಂದೂ ಜಾಗರಣ ವೇದಿಕೆ ಇಷ್ಟಕ್ಕೆ ಸುಮ್ಮನಾಗದೆ, ತಾರ್ಕಿಕ ಅಂತ್ಯದ ವರೆಗೂ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು.

Advertisement

ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಅಕ್ರಮ ಹಾಗೂ ಕಾನೂನು ಬಾಹೀರವಾಗಿ ರಾಜ ಕೀಯ ಉದ್ದೇಶದಿಂದ ಮಂಜೂರಾಗಿರುವ ಭೂಮಿ ವಾಪಸ್‌ ಪಡೆದು ಗೋಮಾ ಳವಾಗಿಯೇ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಧರ್ಮ ಉಳಿದರಷ್ಟೇ ಖಾವಿಗೆ ಬೆಲೆ!: ಧರ್ಮ ಉಳಿಸುವ ಹಾಗೂ ಜಾಗೃತಿ ಮೂಡಿಸುವ ಮಾತುಗಳನ್ನಾಡುವ ಸ್ವಾಮೀಜಿಗಳು ಕಪಾಲ ಬೆಟ್ಟ ವಿಚಾರದಲ್ಲಿ ಚಕಾರ ಎತ್ತಲಿಲ್ಲ. ಧರ್ಮ ಉಳಿದರಷ್ಟೇ ಖಾವಿಗೆ ಬೆಲೆ, ಮಠ ಉಳಿಯಲು ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌. ಸುರೇಶ್‌, ಜಿಲ್ಲಾ ಕಾರ್ಯದರ್ಶಿ ಅರುಣ್‌ ಕುಮಾರ್‌ ಸಿಂಗ್‌, ಜಿಲ್ಲಾ ಪ್ರಚಾರ ಪ್ರಮುಖ್‌ ಧನಂಜಯ್ಯ, ವೇದಿಕೆ ಮಾತೃ ಸುರಕ್ಷಾ ಜಿಲ್ಲಾಸಂಯೋಜಕ ಬಾಲು ವೆಂಕಟೇಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next