Advertisement

ಕನ್ಯಾಡಿ ಸ್ವಾಮೀಜಿ ಪಟ್ಟಾಭಿಷೇಕ ದಶಮಾನೋತ್ಸವ ಪೂರ್ವಭಾವಿ ಸಭೆ

03:59 PM Jun 18, 2018 | |

ಪುಣೆ: ಸನಾತನ ಹಿಂದೂ ಧರ್ಮದ ಮೂಲ ಉದ್ದೇಶದಂತೆ ಧರ್ಮವೇ ಶ್ರೇಷ್ಠವಾದುದು. ಧರ್ಮದ ಹಾದಿಯಲ್ಲಿ ನಮ್ಮ ಸಂಸ್ಕೃತಿಯನ್ನು ಅರಿತು ಬಾಳಿದರೆ ಬದುಕು ಹಸನಾಗಬಹುದು. ಧರ್ಮಕ್ಕೆ ಯಾವುದೇ ಜಾತಿ, ಮತ, ಪಂಥದ ತಾರತಮ್ಯವಿಲ್ಲ. ಬೆರೆತು ಬಾಳಿದರೆ ಶೃಂಗಾರ, ಅರಿತು ಬೆರೆತು ಬಾಳಿದರೆ ಜೀವನ ಸಾûಾತ್ಕಾರ ಎಂಬ ನುಡಿಯಂತೆ  ಸನಾತನ ಭಾರತೀಯ ಸಂಸ್ಕೃತಿಯಲ್ಲಿ ನಾವು ನಡೆಯಬೇಕಾಗಿದೆ. ಅಧುನಿಕ ಜೀವನ ಶೈಲಿಯಲ್ಲಿ ಆಧ್ಯಾತ್ಮದ,  ಧರ್ಮದ ಸ್ಪರ್ಶವಿರಬೇಕು. ನಾವು ಬ್ರಹ್ಮಶ್ರೀ  ನಾರಾಯಣ ಗುರುಗಳ ಚಿಂತನೆಗಳನ್ನೂ ನಮ್ಮ ಬಾಳಿನಲ್ಲಿ ಅಳವಡಿಸಿಕೊಂಡರೆ ಅದೇ ಧರ್ಮವಾಗಿ ಫಲಿತ ನೀಡಬಹುದು. ಧರ್ಮದ ನೆಲೆಯಲ್ಲಿ ನಾವೆಲ್ಲರೂ ಇಂದು ಸಾಗಬೇಕಾದ ಆವಶ್ಯಕತೆ ಇದೆ. ಧರ್ಮ ಸಂಸ್ಥಾಪನೆಯಾದಾಗ ಆದರ್ಶ ಸಮಾಜ ನಿರ್ಮಾಣವಾಗುತ್ತದೆ.  ಅದರ ಜೊತೆ ಜೊ‌ತೆಯಲ್ಲಿ ಸುಂದರ, ಸುಸಂಸ್ಕೃತ ರಾಷ್ಟ್ರ  ನಿರ್ಮಾಣವಾಗಬಹುದು ಎಂದು ಧರ್ಮಸ್ಥಳದ ಕನ್ಯಾಡಿ  ಶ್ರೀ ರಾಮ ಕ್ಷೇತ್ರ ಸಂಸ್ಥಾನದ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.

Advertisement

ಎೂ. 15 ರಂದು ಬೆಳಗ್ಗೆ ಪುಣೆಯ ಚಾಂದಿನಿ ಚೌಕ್‌ನಲ್ಲಿನ ಗಾರ್ಡನ್‌ ಕೋರ್ಟ್‌ ಹೊಟೇಲ್‌ ಸಭಾ ಭವವನದಲ್ಲಿ ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಆಯೋಜಿಸಿರುವ, ಸೆ.  3 ರಂದು ನಡೆಯಲಿರುವ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಸ್ವಾಮೀಜಿಯವರ ಪಟ್ಟಾಭಿಷೇಕ ದಶಮಾನೋತ್ಸವ ಸಂಭ್ರಮ ಮತ್ತು ಶ್ರೀ ರಾಮ ತಾರಕ ಮಂತ್ರ ಯಜ್ಞ ಹಾಗೂ ಧರ್ಮ ಸಂಸದ್‌ ಇದರ ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ  ಶ್ರೀಗಳು, ಜನತಾ ಸೇವೆಯಲ್ಲಿ ದೇವರನ್ನು ಕಾಣುವಂತಹ ಪ್ರವೃತ್ತಿ ನಮ್ಮದಾಗಿರಬೇಕು. ನಿಸ್ವಾರ್ಥ ಮನೋಭಾವನೆಯಿಂದ ಲೋಕ ಕಲ್ಯಾಣಕ್ಕಾಗಿ ಕಾಯಕವನ್ನು ಮಾಡಬೇಕಾಗಿದೆ. ಈ ದಿಶೆಯಲ್ಲಿ ನಾರಾಯಣ ಗುರುಗಳ  ವಿಶ್ವ ಸಂದೇಶವಾದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದಡಿ ಎಲ್ಲ ಜಾತಿ ಜನಾಂಗದವರನ್ನು ಸೇರಿಕೊಂಡು ಸತøಜೆಗಳನ್ನಾಗಿ ನಿರ್ಮಿಸುವಲ್ಲಿ ಗುರುಕುಲ ಮಾದರಿಯಲ್ಲಿ ಕಾರ್ಯಗಳು ನಡೆಯುತ್ತಿವೆ. ಆತ್ಮಾನಂದ ಸರಸ್ವತಿ ವಿದ್ಯಾಲಯದಲ್ಲಿ ನೂರಾರು ಮಕ್ಕಳು ಶಿಕ್ಷಣದೊಂದಿಗೆ ಯೋಗ, ಧ್ಯಾನ, ಭಜನೆ, ಸತ್ಸಂಗ, ಭಗವದ್ಗೀತೆ ಎಲ್ಲವನ್ನೂ ಶುಲ್ಕ ರಹಿತವಾಗಿ ಬೋಧಿಸುತ್ತಿದ್ದೇವೆ. ಸಮಾಜದ ಎÇÉಾ ವರ್ಗದ ಬಡ ಮಕ್ಕಳಿಗೆ ಇಲ್ಲಿ ಸೌಲಭ್ಯ ಕಲ್ಪಿಸಿದ್ದು ಇದರ ಖರ್ಚು ವೆಚ್ಚಗಳಿಗಾಗಿ ನಾವು ಪ್ರಯತ್ನಿಸುತ್ತಿದ್ದೇವೆ ಎಂದು ನುಡಿದು,  ಸೆ. 3ರಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ಜರಗಲಿರುವ ಈ ಸಮಾರಂಭದಲ್ಲಿ ಪುಣೆಯ ಎÇÉಾ ಸಮಾಜ ಭಾಂಧವರು ಭಾಗವಹಿಸುವಂತೆ ಕರೆ ನೀಡಿದರು.

ಪ್ರಾರಂಭದಲ್ಲಿ ಸ್ವಾಮೀಜಿಯವರನ್ನು ಹೂಹಾರ ಹಾಕಿ ಸ್ವಾಗತಿಸಲಾಯಿತು. ವೇದಿಕೆ ಯಲ್ಲಿ ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಶೇಖರ್‌ ಪೂಜಾರಿ, ಸ್ಥಾಪಕಾಧ್ಯಕ್ಷ ಸುಂದರ್‌  ಪೂಜಾರಿ, ಉಪಾಧ್ಯಕ್ಷರುಗಳಾದ ವಿಶ್ವನಾಥ್‌ ಪೂಜಾರಿ ಕಡ್ತಲ, ರಾಮ ಆರ್‌. ಪೂಜಾರಿ, ಕಾರ್ಯದರ್ಶಿ ಲೋಹಿತ್‌ ಪೂಜಾರಿ, ನಿಕಟಪೂರ್ವ  ಅಧ್ಯಕ್ಷ ಸದಾಶಿವ ಎಸ್‌. ಸಾಲ್ಯಾನ್‌, ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ, ಪಿಂಪ್ರಿ-ಬಿಲ್ಲವ ಸಂಘದ ಕಾರ್ಯದರ್ಶಿ ಶ್ಯಾಮ್‌ ಸುವರ್ಣ ಉಪಸ್ಥಿತರಿದ್ದರು.

ಕ್ಷೇತ್ರದ ಸಂಚಾಲಕ  ಕೃಷ್ಣಪ್ಪ ಅವರು ಕಾರ್ಯಕ್ರಮದ ತಯಾರಿಯ ಬಗ್ಗೆ  ಹಾಗೂ ಸ್ವಾಮೀಜಿಯವರ ಮುಖಾಂತರ ನಡೆಯುವ ಸಮಾಜ ಕಲ್ಯಾಣ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಸಂಬಂಧಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. 
ಸಂಘದ ಪರವಾಗಿ ಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಲಾಯಿತು.  ಕರುಣಾಕರ ಶಾಂತಿಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪುಣೆ ಬಿಲ್ಲವ ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗದ  ಸದಸ್ಯರು ಹಾಗು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಭಾಂದವರು ಉಪಸ್ಥಿತರಿದ್ದರು. 

ಇಂದಿನ ಕಾಲದಲ್ಲಿ ಲೋಕಕಲ್ಯಾಣಕ್ಕೆ ದೇವರು  ಸಾಧು- ಸಂತರನ್ನು ಈ ಭೂಮಿಗೆ ಕಳುಹಿಸಿ¨ªಾರೆ. ಅಂದು ಲೋಕ ಕಲ್ಯಾಣ ಕ್ಕಾಗಿ ಅವತಾರವೆತ್ತಿದ ನಾರಾಯಣ ಗುರು ಗಳು ಜಗತ್ತಿಗೆ ಒಳ್ಳೆಯ ಸಂದೇಶವನ್ನೇ ನೀಡಿ ಜಗದ್ಗುರುಗಳಾಗಿದ್ದಾರೆ. ಅವರು  ಅವತರಿಸಿದಂತೆ  ಇಂದು ಬ್ರಹ್ಮಾನಂದ ಸ್ವಾಮೀಜಿಯವರು ಲೋಕ  ಕಲ್ಯಾಣಕ್ಕಾಗಿ ಜನ್ಮವೆತ್ತಿ ಬಂದಿ¨ªಾರೆ. ಅವರ ಸಮಾಜ ಸೇವಾ ಕಾರ್ಯಗಳ ತುಡಿತ  ಇಡಿ ನಮ್ಮ ಭಾರತ ದೇಶದಲ್ಲಿ ಪಸರಿಸುವಂತೆ ಮಾಡುವ ಸಂಕಲ್ಪವನ್ನು ಮಾಡಿ¨ªಾರೆ. ಈಗಾಗಲೇ ಮಠದ ಶಾಖೆಗಳನ್ನು ಅಲ್ಲಲಿ ತೆರೆದು ಸಮಾಜದ ಬಡ ಮಕ್ಕಳ ಉಚಿತ ಶಿಕ್ಷಣಕ್ಕಾಗಿ ಕಾರ್ಯ ಯೋಜನೆಗಳನ್ನು ಹಾಕಿಕೊಂಡಿ¨ªಾರೆ.  ಬಾಕೂìರಿನ ನೆಲ್ಯಾಡಿ ಎಂಬಲ್ಲಿ 15 ಎಕರೆಯಷ್ಟು ಜಮೀನನ್ನು ಖರಿದಿಸಿ ಯಾವುದೇ ಸ್ವ ಅಭಿಲಾಷೆ ಇಲ್ಲದೆ, ವಿದ್ಯಾರ್ಜನೆಯೊಂದಿಗೆ ಸಮಾಜೋ¨ªಾರಕ್ಕಾಗಿ ಉಪಯೋಗಿಸು ವಂತಹ ಕಾರ್ಯವನ್ನು ಮಾಡಲಿ¨ªಾರೆ. ಅವರ ಈ ಎÇÉಾ ಕಾರ್ಯಗಳಿಗೆ ನಾವೆಲ್ಲರೂ ಸಹಕಾರ ನೀಡಬೇಕು. ಸೆ. 3 ರಂದು ನಡೆಯಲಿರುವ ಶ್ರೀಗಳ ಪಟ್ಟಾಭಿಷೇಕ, ಹಿಮಾಲಯದಿಂದ ಆಗಮಿಸುವ 2000 ಕ್ಕಿಂತ ಹೆಚ್ಚಿನ ಸಾಧು-ಸಂತರ  ಸಮಾವೇಶದಲ್ಲಿ  ನಾವೆಲ್ಲರೂ ಭಾಗಿಗಳಾಗೋಣ. 
-ವಿಶ್ವನಾಥ್‌ ಪೂಜಾರಿ ಕಡ್ತಲ, ಅಧ್ಯಕ್ಷರು, ಬೆಳ್ಳಿ ಮಹೋತ್ಸವ ಸಮಿತಿ ಬಿಲ್ಲವ  ಸಂಘ ಪುಣೆ

Advertisement

ಉತ್ತಮ ಸಂಸ್ಕಾರ, ಧಾರ್ಮಿ ಕತೆಯೊಂದಿಗೆ ಸಮಾಜದ  ಸೇವೆ ಮಾಡುವಂತಹ  ಅವಕಾಶವನ್ನು ಭಗವಂತ ನಮ್ಮೆಲ್ಲರಿಗೂ  ಕರುಣಿಸಿ¨ªಾನೆ.  ಲೋಕ ಕಲ್ಯಾಣಕ್ಕಾಗಿ ಕನ್ಯಾಡಿ ಸ್ವಾಮೀಜಿಯವರು ಕೈಗೊಂಡ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನಮಗೆ ಕಲ್ಪಿಸಿ¨ªಾರೆ. ಇದುವೇ ನಮ್ಮ ಭಾಗ್ಯ. ಸಮಾಜದ ಎÇÉಾ ಹಿಂದೂ ಭಾಂದವರು ಇಂತಹ ಕಾರ್ಯಗಳಲ್ಲಿ ಕೈಜೋಡಿಸಿದಾಗ ತಮ್ಮ  ಜೀವನದಲ್ಲಿ ಸಾರ್ಥಕತೆಯನ್ನು ಪಡೆದು ದೇವರ ಗುರುವರ್ಯರ ಅನುಗ್ರಹ ಪಡೆಯಲು ಸಾಧ್ಯ. ಈ ಕಾರ್ಯಕ್ರಮದಲ್ಲಿ ಪುಣೆಯಿಂದ ಆದಷ್ಟು ಹೆಚ್ಚಿನ ಸಂಖ್ಯೆಯ ಬಾಂಧವರು ಪಾಲ್ಗೊಳ್ಳಬೇಕು.
-ಶೇಖರ್‌ ಟಿ. ಪೂಜಾರಿ, ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ ಪುಣೆ

ಚಿತ್ರ-ವರದಿ : ಹರೀಶ್‌ ಮೂಡಬಿದ್ರೆ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next