Advertisement

Kantharaju Report ಒಕ್ಕಲಿಗ, ಲಿಂಗಾಯತ ಸಮಾಜಗಳಿಗೆ ಸ್ಪಷ್ಟನೆ ಬೇಕಿದೆ: ಪಂಚಮಸಾಲಿ ಶ್ರೀಗಳು

03:57 PM Nov 05, 2023 | Team Udayavani |

ಗಂಗಾವತಿ: ಕಾಂತರಾಜು ಆಯೋಗದ ವರದಿಯಲ್ಲಿ ಒಕ್ಕಲಿಗರು, ಲಿಂಗಾಯತ ಸಮಾಜಗಳ ಜನಸಂಖ್ಯೆ ಕಡಿಮೆ ತೋರಿಸುವ ಹುನ್ನಾರು ನಡೆಸಲಾಗಿದೆ ಎಂಬ ಅನುಮಾನವಿದ್ದು, ಸರಕಾರದ ವರದಿ ಅನುಷ್ಠಾನಕ್ಕೂ ಮೊದಲು ಸರಕಾರ ಸ್ಪಷ್ಟನೆ ನೀಡುವುದು ಅವಶ್ಯವಾಗಿದೆ ಎಂದು ಪಂಚಮಸಾಲಿ ಸಮಾಜದ ಜಗದ್ಗುರು ಬಸವಮೃತ್ಯುಂಜಯ ತಿಳಿಸಿದ್ದಾರೆ.

Advertisement

ಅವರು ನಗರದಲ್ಲಿ ಮಾಜಿ ಸಂಸದ ಎಚ್.ಜಿ. ರಾಮುಲು ನಿವಾಸದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ  ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂತರಾಜು ಆಯೋಗದ ಜಾತಿ ವರದಿ ವಿಚಾರದಲ್ಲಿ ಲಿಂಗಾಯತ ಮತ್ತು ಒಕ್ಕಲಿಗರಲ್ಲಿ ಅಸಮಾಧಾನ ಭುಗಿಲೆದ್ದಿದೆ. ವರದಿಯಲ್ಲಿ ಜನಾಂಗದ ಸಂಖ್ಯೆ ಕಡಿಮೆ ತೋರಿಸಿದ್ದಾರೆ. ಭವಿಷ್ಯದ ದಿನಗಳಲ್ಲಿ ಸಮಾಜಕ್ಕೆ ಪೆಟ್ಟು ಬಿಳಲಿದೆ ಎನ್ನುವ ಆತಂಕ ಇದೆ. ಆದ್ದರಿಂದ ಸಿಎಂ ಅವರು ಎಲ್ಲಾ ಲಿಂಗಾಯತ, ಒಕ್ಕಲಿಗ ಮುಖಂಡರನ್ನು ಕರೆಯಬೇಕು. ಸಭೆಯಲ್ಲಿ ಈ ಎರಡು ಸಮಾಜದ ಶಾಸಕರು, ಸಂಸದರನ್ನು ಕರೆಯಬೇಕು. ಈ ಬಗ್ಗೆ ಸಮಾಲೋಚನೆ ಮಾಡಬೇಕು ಎಂದು ಹೇಳಿದರು.

ಹಳ್ಳಿಗಳಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ತೋರಿಸುತ್ತಿದ್ದಾರೆ ಎನ್ನುವ ಅನುಮಾನ ಇದೆ. ಕಾಂತರಾಜು ವರದಿ ಜಾರಿಗೆ ತರುವ ಪೂರ್ವದಲ್ಲಿ ಸಭೆ ಕರೆಯಬೇಕು.ಕಾಂತರಾಜು ವರದಿಯಿಂದ ಯಾವುದೇ ಸಮಾಜಕ್ಕೂ ಅನ್ಯಾಯವಾಗದಂತೆ ಸಿಎಂ ಸ್ಪಷ್ಟೀಕರಣ ಕೊಡಬೇಕು ಎಂದರು.

ಇಲ್ಲವಾದಲ್ಲಿ ಪ್ರತಿಯೊಂದು ಹಳ್ಳಿಗಳಲ್ಲಿ ಅಶಾಂತಿ ಮೂಡಲು ಕಾರಣವಾಗುತ್ತದೆ. ಪಂಚಮಸಾಲಿ ಸಮಾಜಕ್ಕೆ ಮೀನು ನ್ಯಾಯ ಕೊಡದೆ ಹೋದ್ರೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುದೊಡ್ಡ ಸಮಸ್ಯೆ ಆಗುತ್ತದೆ. ಸಿಎಂ ಅವರು ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಹೇಳಿದರು.

Advertisement

ಸಮಾಜವು ಇಷ್ಟೊಂದು ಹೋರಾಟ ಮಾಡಿದ್ರೂ ಸಿದ್ದರಾಮಯ್ಯನವರು ನಿರ್ಲಕ್ಷ್ಯ ಮಾಡ್ತಿದ್ದಾರೆ. ಹೀಗೆ ಮಾಡಿದ್ರೆ ನಿಮಗೂ ದೊಡ್ಡ ಸಮಸ್ಯೆ ಆಗುತ್ತೆ ಎಂದು ಸರ್ಕಾರಕ್ಕೆ ಎಚ್ಚರಿಸಿದ ಸ್ವಾಮಿಜಿ ಪ್ರಧಾನಿ ಮೋದಿಯವರ ಮಧ್ಯಸ್ಥಿಕೆಯಲ್ಲಿ ಹಿಂದಿನ ಸರ್ಕಾರ 2 ಡಿ ಮೀಸಲಾತಿ ನೀಡಿತ್ತು. ಅದಕ್ಕೆ ನಾವು ಸ್ವಾಗತ ಮಾಡಿದ್ದೆವು. ಆದ್ರೆ ಚುನಾವಣೆ ನೀತಿ ಸಂಹಿತೆ ಜಾರಿ ಆಗಿ ಅದು ಅನುಷ್ಠಾನ ಆಗ್ಲಿಲ್ಲ ಎಂದರು.

ಆದ್ರೆ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಮೇಲೆ ಕರೆದು ಚರ್ಚೆ ಮಾಡ್ತಿನಿ ಅಂದಿದ್ರು. ಆದ್ರೆ ನಾಲ್ಕು ತಿಂಗಳಾಯ್ತು ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಕೊಡ್ತಾ ಇಲ್ಲ. ಎಲ್ಲೊ ಒಂದು ಕಡೇ ಸಮಾಜವನ್ನು ಸಿಎಂ ಸಿದ್ದರಾಮಯ್ಯನವರು ನಿರ್ಲಕ್ಷ್ಯ ಮಾಡ್ತಿದ್ದಾರೆ. ಸರ್ಕಾರದ ಬಗ್ಗೆ ನಮಗೇಲ್ಲ ಅಸಮಾಧಾನ ಇದೆ ಎಂದರು.

ಲೋಕಸಭಾ ಚುನಾವಣೆ ಒಳಗೆ ಸಮಾಜಕ್ಕೆ ನ್ಯಾಯ ಕೊಡಬೇಕು. ನ.10 ರಂದು ದಾವಣಗೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಲಿಂಗ ಪೂಜೆ ಸಲ್ಲಿಸುವ ಮೂಲಕ ಹೋರಾಟ ನಡೆಸಲಾಗುತ್ತದೆ ಎಂದರು.

ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ದಂಪತಿಗಳು,ಸುರೇಶ ಗೌರಪ್ಪ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next