Advertisement

Kantara: ಪ.ಬಂಗಾಳದಲ್ಲಿ ಕಾಂತಾರ ಶೈಲಿಯ ದುರ್ಗೆ!

07:59 PM Oct 21, 2023 | Pranav MS |

ಕೋಲ್ಕತ್ತಾ: ಕರ್ನಾಟಕದ ಕರಾವಳಿಯ ದೈವರಾಧನೆಯ ಕಥಾವಸ್ತುವಿನೊಂದಿಗೆ ವಿಶ್ವ ಮನ್ನಣೆ ಗಳಿಸಿದ ಸಿನಿಮಾ “ಕಾಂತಾರ”.! ಇದೀಗ ಈ ಸಿನಿಮಾದ ದೈವತ್ವ ಪಶ್ಚಮ ಬಂಗಾಳದ ನವರಾತ್ರಿಯಲ್ಲೂ ಪ್ರತಿಧ್ವನಿಸಿದ್ದು, ಕೋಲ್ಕತ್ತದಲ್ಲಿ ಕಾಂತಾರಾ ಶೈಲಿಯಲ್ಲೇ ದೇವಿ ದುರ್ಗೆಯನ್ನು ಪ್ರತಿಷ್ಠಾಪಿಸಲಾಗಿದೆ.

Advertisement

ಕೋಲ್ಕತ್ತಾದಲ್ಲಿ ನಡೆಯುವ ದುರ್ಗಾಪೂಜೆ ದೇಶದಲ್ಲೇ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ ಅಲ್ಲದೇ, ದೇವಿಯ ವಿವಿಧ ರೂಪಗಳನ್ನು ಪ್ರದರ್ಶಿಸುವ ಪಂಡಲ್‌ಗ‌ಳನ್ನು ಕಣ್ತುಂಬಿಕೊಳ್ಳಲೆಂದೇ ದೇಶ ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಾರೆ. ಅಂಥ ಪ್ರಸಿದ್ಧ ಪಂಡಲ್‌ಗ‌ಳ ಪೈಕಿ ಈ ಬಾರಿ ಕಾಂತಾರ ಶೈಲಿಯಲ್ಲಿ ಪಂಡಲ್‌ ಅಲಂಕರಿಸಿ ದೇವಿಯನ್ನು ಪ್ರತಿಷ್ಠಾಪಿಸಿರುವುದು ನೋಡುಗರ ಕಣ್ಮನ ಸೆಳೆದಿದೆ.ಇತ್ತೀಚೆಗಷ್ಟೇ ಗಣೇಶ ಹಬ್ಬದಲ್ಲಿಯೂ ಹಲವೆಡೆ ಕಾಂತಾರ ಶೈಲಿಯ ಗಣಪನನ್ನು ಪ್ರತಿಷ್ಠಾಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next