ಮಂಗಳೂರು: ಮೂಲತಃ ಕರಾವಳಿಯವರಾದ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ʼಕಾಂತಾರʼ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದರು. ಈಗ ಭೂತಕೋಲವನ್ನು ನೋಡಲು ಕರಾವಳಿಗೆ ಬಂದಿದ್ದಾರೆ.
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ ʼಕಾಂತಾರʼ ಸಿನಿಮಾವನ್ನು ಖ್ಯಾತ ಸ್ಟಾರ್ ಗಳು ಮೆಚ್ಚಿಕೊಂಡಿದ್ದರು. ಅನುಷ್ಕಾ ಶೆಟ್ಟಿ ಅವರು ಕೂಡ ಸಿನಿಮಾ ಅದ್ಭುತವಾಗಿದೆ ಎಂದು ಹೇಳಿ ಚಿತ್ರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು.
ಇತ್ತೀಚೆಗೆ ಯಾವ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳದ ನಟಿ, ಮಂಗಳೂರಿನಲ್ಲಿ ನಡೆದ ಕೋಲಕ್ಕೆ ಭೇಟಿ ಕೊಟ್ಟು ದೈವದ ಆಶೀರ್ವಾದವನ್ನು ಪಡೆದಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಅನುಷ್ಕಾ ಶೆಟ್ಟಿ ಫ್ಯಾನ್ಸ್ ಕ್ಲಬ್ ವಿಡಿಯೋ ಹಂಚಿಕೊಂಡಿದೆ.
ಈ ವಿಡಿಯೋದಲ್ಲಿ ಅನುಷ್ಕಾ ಜನರೊಂದಿಗೆ ನಿಂತು ಕೋಲನ್ನು ನೋಡುತ್ತಿದ್ದಾರೆ. ಅದರೊಂದಿಗೆ ಅದರ ಫೋಟೋ ವಿಡಿಯೋವನ್ನು ಮಾಡುತ್ತಿದ್ದಾರೆ. ಸಂಪ್ರದಾಯದಂತೆ ಸೀರೆ ಉಟ್ಟು ತುಳುನಾಡಿನ ಕೋಲವನ್ನು ವೀಕ್ಷಣೆ ಮಾಡುತ್ತಿರುವ ಸ್ವೀಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅನುಷ್ಕಾ ಶೆಟ್ಟಿಯ 48ನೇ ಸಿನಿಮಾದ ಪೋಸ್ಟರ್ ಇತ್ತೀಚೆಗೆ ರಿವೀಲ್ ಆಗಿದೆ. ಅಡುಗೆ ಮಾಡುವ ಚೆಫ್ ಆಗಿ ಕಾಣಿಸಿಕೊಳ್ಳುವ ಲುಕ್ ಪೋಸ್ಟರ್ ಸದ್ದು ಮಾಡಿದೆ.