Advertisement

Kantara 2: ಪಂಜುರ್ಲಿ ದೈವದ ಮೂಲದ ಸುತ್ತ ಸಾಗಲಿದೆ ʼಕಾಂತಾರ-2ʼ ಸಿನಿಮಾದ ಕಥೆ?

12:03 PM Nov 20, 2023 | Team Udayavani |

ಬೆಂಗಳೂರು: ರಿಷಬ್‌ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ ಬಹು ನಿರೀಕ್ಷಿತ ʼಕಾಂತಾರ-2ʼ ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದ್ದು, ಶೀಘ್ರದಲ್ಲಿ ಮುಹೂರ್ತ ಕಾರ್ಯಕ್ರಮ ನಡೆಯಲಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು.

Advertisement

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ʼಕಾಂತಾರʼ ತುಳುನಾಡಿನ ದೈವದ ಕಥೆಯನ್ನಿಟ್ಟುಕೊಂಡು ಪ್ಯಾನ್‌ ಇಂಡಿಯಾದಲ್ಲಿ ಹಿಟ್‌ ಆಗಿತ್ತು. ಸಿನಿಮಾ ದೊಡ್ಡ ಯಶಸ್ಸಾದ ಬಳಿಕ ಸಿನಿಮಾದ ಎರಡನೇ ಭಾಗ ಅಂದರೆ ಪ್ರೀಕ್ವೆಲ್‌ ನ್ನು ತೆರೆಗೆ ತರುವುದಾಗಿ ರಿಷಬ್‌ ಶೆಟ್ಟಿ ಇದೇ ವರ್ಷದ ಫೆಬ್ರವರಿಯಲ್ಲಿ ಸಿನಿಮಾದ 100 ದಿನದ ಸಂಭ್ರಮದಲ್ಲಿ ಹೇಳಿದ್ದರು. ನೀವು ನೋಡಿರುವುದು ಸಿನಿಮಾದ 2ನೇ ಭಾಗ ಮುಂದೆ ಬರಲಿರುವುದು ಸಿನಿಮಾದ ಪ್ರೀಕ್ವೆಲ್‌ ಎಂದು ಹೇಳಿ ಕುತೂಹಲ ಹುಟ್ಟಿಸಿದ್ದರು.

ಸಿನಿಮಾದ ಲೋಕೇಷನ್‌ ಹಾಗೂ ಸ್ಕ್ರಿಪ್ಟ್‌ ಬಗ್ಗೆ ರಿಷಬ್‌ ಸಾಕಷ್ಟು ತಯಾರಿ ನಡೆಸಿಕೊಂಡಿದ್ದು, ಎರಡನೇ ಭಾಗದ ಕಥೆ ಏನು ಎನ್ನುವುದರ ಬಗ್ಗೆ ಕುತೂಹಲ ಹೆಚ್ಚಿದೆ.

ʼಕಾಂತಾರ-2ʼ ನಲ್ಲಿ ಪಂಜುರ್ಲಿ ದೈವದ ಮೂಲದ ಕಥೆ ಇರಲಿದೆ ಎನ್ನಲಾಗಿದೆ. ಕ್ರಿ.ಶ. 301-400 ಕಾಲದ ಕಥೆ ಇರಲಿದೆ ಎನ್ನಲಾಗಿದೆ. ಪಂಜುರ್ಲಿ ದೈವದ ಹುಟ್ಟು ಹಾಗೂ ಆಚರಣೆ ಕುರಿತ ಕಥೆ ಪ್ರೀಕ್ವೆಲ್‌ ನಲ್ಲಿ ಇರಲಿದೆ ಎಂದು ʼಪಿಂಕ್‌ ವಿಲ್ಲಾʼ ವರದಿ ಮಾಡಿದೆ.

ʼಕಾಂತಾರʼ 16 ಕೋಟಿ ರೂ.ಬಜೆಟ್‌ ನಲ್ಲಿ ನಿರ್ಮಾಣವಾಗಿತ್ತು, ʼಕಾಂತಾರ-2ʼ ಬಜೆಟ್‌ ದೊಡ್ಡದಾಗಿರಲಿದೆ ಎನ್ನಲಾಗಿದೆ.

Advertisement

ನವೆಂಬರ್‌  ಅಂತ್ಯಕ್ಕೆ ಉಡುಪಿಯಲ್ಲಿ ʼಕಾಂತಾರ-2ʼ ಸಿನಿಮಾದ ಮುಹೂರ್ತ ನೆರವೇರಲಿದೆ. 2024 ರ ಕೊನೆಯಲ್ಲಿ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next