ತಿ.ನರಸೀಪುರ: ಹಿಂದುಳಿದ ವರ್ಗಗಳು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಸಾಮಾಕ ಹಾಗೂ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಂಡು, ಸಂಘಟಕ ರಾಗಿ ಜಾಗೃತರಾಗಬೇಕು ಎಂಬ ಆಶಯವನ್ನು ಕಾನ್ಶಿರಾಮ್ ಹೊಂದಿದ್ದರು ಎಂದು ಬಹುಜನ ಸಮಾಜ ಪಕ್ಷದ ವಿಭಾಗಿಯ ಉಸ್ತುವಾರಿ ಶಿವಮಹದೇವ ಸ್ಮರಿಸಿದರು.
ಪಟ್ಟಣದ ಶ್ರೀನಿವಾಸ ರಿಫ್ರೆಶ್ಮೆಂಟ್ ಸಭಾಂಗಣದಲ್ಲಿ ನಡೆದ ಬಹುಜನ ಸಮಾಜ ಪಕ್ಷ ಸ್ಥಾಪಕ ಕಾನ್ಶಿರಾಮ್ ಅವರ 14ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾನ್ಶಿರಾಮ್ ಅವರು ಶಾರೀರಿಕವಾಗಿ ನಮ್ಮನ್ನು ಅಗಲಿದ್ದರೂ ಪಕ್ಷವನ್ನು ಸಂಘಟಿಸಲು ಪಟ್ಟಂತಹ ಶ್ರಮ , ಜನರಲ್ಲಿ ಮೂಡಿಸಿ ರಾಜಕೀಯ ಜಾಗೃತಿ ಇಂದಿಗೂ ನಮ್ಮೆಲರಿಗೂ ದಾರಿದೀಪವಾಗಿದೆ. ಅವರಂತೆಯೇಬಹುಜನ ಸಮಾಜ ಪಕ್ಷವನ್ನು ತಳಮಟ್ಟದಿಂದ ಬಲವಾಗಿ ಕಟ್ಟೋಣ ಎಂದು ಸಲಹೆ ನೀಡಿದರು.
ಜಿಲ್ಲಾಧ್ಯಕ್ಷ ಬಿ.ಆರ್.ಪುಟ್ಟಸ್ವಾಮಿ ಮಾತನಾಡಿ, ಬಹುಜನ ಸಮಾಜ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಮೂರನೇ ± ಕ್ಷವಾಗಿ
ಗುರುತಿಸಿಕೊಳ್ಳಲು ಕಾನ್ಶಿರಾಮ್ ಪರಿಶ್ರಮದ ಕೊಡುಗೆಯಾಗಿದೆ. ಅವರ ಸೈದ್ಧಾಂತಿಕ ನಿಲುವುಗಳು ಹಾಗೂ ಬದ್ಧತೆಯ ಆಧಾರದ ಮೇಲೆ ಪಕ್ಷವನ್ನು ಬಲವಾಗಿ ಕಟ್ಟಬೇಕು. ಮುಂಬರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ವೇಳೆಗೆ ಪಕ್ಷದ ಪ್ರಾಬಲ್ಯವನ್ನು ವಿಸ್ತರಿಸಬೇಕು ಜವಾಬ್ದಾರಿ ನಮ್ಮೆಲ್ಲಎ ಮೇಲಿದೆ ಎಂದು ತಿಳಿಸಿದರು.
ಮೈಸೂರು ನಗರ ಉಸ್ತುವಾರಿ ಜ್ಞಾನಪ್ರಕಾಶ್, ಜಿಲ್ಲಾ ಕಾರ್ಯದರ್ಶಿಯರಗನಹಳ್ಳಿ ಬಿ.ಮಹದೇವಸ್ವಾಮಿ,ಕ್ಷೇತ್ರಾಧ್ಯಕ್ಷ ಕುಕ್ಕೂರು ಪುಟ್ಟಣ್ಣ, ಉಪಾಧ್ಯಕ್ಷ ನಾಸಿರ್ ಹುಸೇನ್, ಪ್ರಧಾನ ಕಾರ್ಯದರ್ಶಿ ಪುಟ್ಟಮರುಡಯ್ಯ, ಕ್ಷೇತ್ರ ಉಸ್ತುವಾರಿ ಪುಟ್ಟಸ್ವಾಮಿ, ಕಾರ್ಯದರ್ಶಿ ಮಹೇಂದ್ರ ಕುಮಾರ್, ಖಜಾಂಚಿ ಪುಟ್ಟರಾಜು, ಕಚೇರಿ ಕಾರ್ಯದರ್ಶಿ ಹೊಸಪುರ ಲಿಂಗರಾಜು, ಮುಖಂಡರಾದ ಇಮ್ರಾನ್, ಕರೋಹಟ್ಟಿ ನಟರಾಜು, ಹಿರಿಯೂರು ಸಿದ್ದಟ್ಟಿ,ಬೆಟ್ಟಹಳ್ಳಿ ಮಹದೇವ ಸ್ವಾಮಿ ಉಪಸ್ಥಿತರಿದ್ದರು.