Advertisement
ಇತ್ತೀಚೆಗಷ್ಟೇ ನೋಯ್ಡಾ ಮೂಲದ ವೈದ್ಯರೊಬ್ಬರು ಸ್ವಯಂ ಘೋಷಿತ ದೇವ ಮಾನವ ಕರೌಲಿ ಬಾಬಾ ವಿರುದ್ಧ ದೂರು ದಾಖಲಿಸಿದ್ದರು. ಬಾಬಾರ ಮಂತ್ರ ಪಠಣದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಕ್ಕೆ ಬಾಬಾರ ಬೆಂಬಲಿಗರು ನನಗೆ ಥಳಿಸಿದ್ದಾರೆ ಎಂದು ವೈದ್ಯ ಪೊಲೀಸ್ ಠಾಣೆಯಲ್ಲಿ ಕರೌಲಿ ಬಾಬಾನ ವಿರುದ್ಧ ದೂರು ದಾಖಲಿಸಿದ್ದರು.
Related Articles
Advertisement
ಇದೀಗ ಬಾಬಾ ಬೆಳಕಿಗೆ ಬಂದ ಮೇಲೆ ಒಂದು ದಿನದ ಹವನ ಮಾಡಿಸುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅತ್ಯಂತ ಬ್ಯುಸಿಯಾಗಿರುವ ಭಕ್ತರಿಗೆ ಹವನ ಶೀಘ್ರದಲ್ಲಿ ಮಾಡಿಸಬೇಕಾದರೆ 1.51 ಲಕ್ಷದಿಂದ 2.51 ಲಕ್ಷ ರೂ.ವನ್ನು ಪಾವತಿಸಬೇಕು. ಈ ಹವನ ಕ್ರಮ ಏ. 1ರಿಂದ ಜಾರಿಗೆ ಬರಲಿದೆ ಎಂದು ಬಾಬಾ ಸಹಾಯಕ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಅವಧಿಯಲ್ಲಿ ಕೆಲಸ ಮಾಡಿದ್ದ ಯುಪಿಯ ಮಾಜಿ ಡಿಜಿಪಿ ನನ್ನ ಮೇಲೆ ಕೇಳಿ ಬಂದ ಎಲ್ಲಾ ಆರೋಪಗಳ ಹಿಂದೆ ಇದ್ದಾರೆ. ಅವರೇ ನನ್ನ ಆಶ್ರಮಕ್ಕೆ ವೈದ್ಯನನ್ನು ಕಳುಹಿಸಿ ನನ್ನ ಮೇಲೆ ಎಫ್ ಐಆರ್ ದಾಖಲಿಸಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಬಾಬಾ ಹೇಳಿದ್ದಾರೆ.
ಭಾರತ – ಪಾಕಿಸ್ತಾನ ನಡುವೆ ಇರುವ ಸಮಸ್ಯೆಯನ್ನು ರಾಜಕೀಯ ಪಕ್ಷಗಳು ಬಂದು ಕೇಳಿದರೆ ನಾನು ಪರಿಹರಿಸುತ್ತೇನೆ ಎಂದು ಹೇಳುವ ಬಾಬಾ, ಕೋವಿಡ್ ಸಂದರ್ಭದಲ್ಲಿ ನನ್ನ ಯಾವ ಭಕ್ತರೂ ಮೃತಪಟ್ಟಿಲ್ಲ ಎನ್ನುವುದನ್ನೂ ಹೇಳಿದ್ದಾರೆ.