Advertisement

ಕಾನ್ಪುರ ದುರಂತಕ್ಕೆ ಪಾಕ್‌ ಹೊಣೆ

03:50 AM Feb 25, 2017 | Team Udayavani |

ಗೊಂಡ (ಉ.ಪ್ರ): ಇತ್ತೀಚೆಗೆ ಕಾನ್ಪುರದಲ್ಲಿ ಸಂಭವಿಸಿದ ರೈಲು ದುರಂತಕ್ಕೆ ಗಡಿಯಾಚೆಯಿಂದ ನಡೆದ ಸಂಚು ಕಾರಣವೆಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಈ ಮೂಲಕ 150 ಮಂದಿಯ ಸಾವಿಗೆ ಕಾರಣವಾದ ಅಪಘಾತದ ಬಗ್ಗೆ ಪಾಕಿಸ್ತಾನವೇ ಕಾರಣವೆಂದು ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಉಲ್ಲೇಖೀಸಿದ್ದಾರೆ. ಉತ್ತರ ಪ್ರದೇಶದ ಗೊಂಡಾದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. 

Advertisement

ಕೆಲವೇ ದಿನಗಳ ಹಿಂದಷ್ಟೇ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳದ ನಾಗರಿಕನೊಬ್ಬನನ್ನು ಬಂಧಿಸಲಾಗಿತ್ತು. ಬಿಹಾರ ಪೊಲೀಸರು ಮೊದಲ ಬಾರಿಗೆ ಪಾಕಿಸ್ತಾನದ ಐಎಸ್‌ಐ ಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ಬಯಲಿಗೆಳೆದಿದ್ದರು. ದುರಂತಕ್ಕೆ ಗಡಿಯಾಚೆಯಿಂದ ಸಂಚು ರೂಪಿಸಲಾಗಿದೆ. ಗೊಂಡ ಕೂಡ ನೇಪಾಳದ ಅಂಚಿನಲ್ಲಿದೆ ಎಂದು ಪ್ರಧಾನಿ ಹೇಳಿದರು.

ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಗಣನೀಯ ಸಾಧನೆ ಮಾಡಿದ್ದರಿಂದ ಸಂತೋಷಗೊಂಡಿರುವ ಪ್ರಧಾನಿ ಮೋದಿ ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತು ಹಾಕುವ ಸಂಕಲ್ಪವನ್ನು ಮತ್ತೆ ಮಾಡಿದ್ದಾರೆ. ಇದೇ ವೇಳೆ ಬರ್ಚಿಯಾದಲ್ಲಿ ಮಾತನಾಡಿದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ಧ್ವನಿ ಇಲಿಗಿಂತ ಕಡಿಮೆಯಾಗಿದೆ ಎಂದು ಲೇವಡಿ ಮಾಡಿದ್ದಾರೆ. ಈಗ ಅವರು ಸಿಂಹದಂತೆ ಗರ್ಜಿಸುವುದಿಲ್ಲ ಎಂದು ಕಟಕಿಯಾಡಿದ್ದಾರೆ ಕಾಂಗ್ರೆಸ್‌ ಉಪಾಧ್ಯಕ್ಷ. ಮೇಕ್‌ ಇನ್‌ ಇಂಡಿಯಾ ಉತ್ಪನ್ನಗಳ ಜತೆಗೆ ದೇಶದಲ್ಲಿ ಚೀನಾದಲ್ಲಿ ತಯಾರಾದ ವಸ್ತುಗಳೂ ಸಿಗುತ್ತವೆ ಎಂದಿದ್ದಾರೆ. ಇದೇ ವೇಳೆ ಐದನೇ ಹಂತದ ಮತದಾನ ಫೆ.27ರಂದು ನಡೆಯಲಿದೆ. ಪ್ರಚಾರ ಶನಿವಾರ ಅಂತ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next