ಉತ್ತರಪ್ರದೇಶ: ಕಾನ್ಪುರದಲ್ಲಿ ಎಂಟು ಪೊಲೀಸರ ಹತ್ಯೆಗೆ ಕಾರಣನಾಗಿದ್ದ ರೌಡಿಶೀಟರ್ ವಿಕಾಸ್ ದುಬೆಯ, ಆಪ್ತ ಸಹಾಯಕ ಅಮರ್ ದುಬೆ ಎಂಬಾತನನ್ನು ಉತ್ತರ ಪ್ರದೇಶದ ಹಮೀರ್ ಪುರ್ ಎಂಬಲ್ಲಿ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ.
ಉತ್ತರ ಪ್ರದೇಶ ವಿಶೇಷ ಪೊಲೀಸ್ ತಂಡ (ಎಸ್ ಟಿಎಫ್) ಇಂದು ರಾಜ್ಯ ರಾಜಧಾನಿ ಲಖನೌದಿಂದ 150 ಕಿ.ಮೀ ದೂರದಲ್ಲಿರುವ ಹಮೀರ್‌ಪುರ ಜಿಲ್ಲೆಯಲ್ಲಿ ಮುಂಜಾನೆ ಕಾರ್ಯಾಚರಣೆ ನಡೆಸಿ ಅಮರ್ ದುಬೆಯನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಿದ್ದಾರೆ ಎಂದು ಎಎನ್ ಐ ವರದಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ, ಕಾನೂನು ಮತ್ತು ಸುವ್ಯವಸ್ಥೆ, ಇಂದು ಮುಂಜಾನೆ ಅಮರ್ ದುಬೆಯಯನ್ನು ಎನ್ ಕಂಟರ್ ಮಾಡಲಾಗಿದೆ. ಸ್ಥಳೀಯ ಪೊಲೀಸರೊಮದಿಗೆ ಎಸ್ ಟಿ ಎಫ್ ಪೊಲೀಸ್ ಪಡೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಅಮರ್ ದುಬೆಯ ಕುರಿತು ಮಾಹಿತಿ ನೀಡಿದವರಿಗೆ 25,000 ಬಹುಮಾನ ಈ ಘೋಷಿಸಲಾಗಿತ್ತು ಎಂದಿದ್ದಾರೆ.
ಕಾನ್ಪುರ ಎನ್ ಕೌಂಟರ್ ಪ್ರಕರಣದಲ್ಲಿ ಅಮರ್ ದುಬೆ ಕೂಡ ಮುಖ್ಯ ಆರೋಪಿಯಾಗಿದ್ದು, ಮೋಸ್ಟ್ ವಾಂಟೆಡ್ ಅಪರಾಧಿಗಳ ಪಟ್ಟಿಯಲ್ಲಿ ಆತನ ಹೆಸರೇ ಮೊದಲಿತ್ತು.
Related Articles
ಕಳೆದ ವಾರ ಎಂಟು ಪೊಲೀಸರ ಹತ್ಯೆಯಲ್ಲಿ ದುಬೆ ಭಾಗಿಯಾಗಿದ್ದು, ಅನಂತರ ಪರಾರಿಯಾಗಿದ್ದ. ಇದೀಗ ರೌಡಿಶೀಟರ್ ವಿಕಾಸ್ ದುಬೆ ಹುಡುಕಾಟಕ್ಕಾಗಿ 40 ಪೊಲೀಸ್ ತಂಡಗಳು ಮತ್ತು ಎಸ್ ಟಿಎಫ್ ತಂಡಗಳನ್ನು ರಚಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ತಿಳಿಸಿದ್ದರು. ದುಬೆ ಅವರನ್ನು ಬಂಧಿಸುವವರೆಗೂ ವಿಶ್ರಾಂತಿ ಪಡೆಯುವುದಿಲ್ಲ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥರು ಇದೇ ವೇಳೆ ತಿಳಿಸಿದ್ದರು.