Advertisement

“ಕನ್ನಡದ ಚಹರೆಗಳ ಮರುಶೋಧವೇ ಕನ್ನಡ ಉಳಿಸುವ ಮಹತ್ತರ ಕಾಯಕ’

08:23 PM Mar 26, 2019 | sudhir |

ಮಲ್ಪೆ: ನಮ್ಮದಲ್ಲದ ಚಹರೆ ಹೊತ್ತು ಬಾಳುತ್ತಿರುವ ಕನ್ನಡವು ನಿಜವಾದ ಕನ್ನಡವಾಗಬೇಕಾದರೆ ತನ್ನ ಒಡಲಾಳದ ಸಹಜ ಚಹರೆಗಳನ್ನು ಮತ್ತೆ ಮರುಜೋಡಿಸಿಕೊಂಡು ತನ್ನನ್ನೇ ತಾನು ಮತ್ತೆ ಕಂಡುಕೊಳ್ಳುವಂತಾಗಬೇಕಿದೆ ಎಂದು ಖ್ಯಾತ ಸಂಸ್ಕೃತಿ ಚಿಂತಕ ಡಾ| ನಟರಾಜ ಎಸ್‌. ಬೂದಾಳ್‌ ಹೇಳಿದರು.

Advertisement

ಅವರು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗವು ಆಯೋಜಿ
ಸಿದ ಹತ್ರಾವಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಆಯೋಜಿಸಲಾದ ಗೋಷ್ಠಿಗಳಲ್ಲಿ ಕೃಷಿ, ಬಹುತ್ವ ಮತ್ತು ಬದುಕು ಕುರಿತು ಡಾ| ನರೇಂದ್ರ ರೈ ದೇರ್ಲ ಅವರು ಕೃಷಿ ಎಂದರೆ ಹೊಟ್ಟೆಯ ಹಸಿವಿಗೆ ಸಂಬಂಧಿಸಿದ್ದಷ್ಟೇ ಅಲ್ಲ, ಅದೊಂದು ಕೂಡು ಸಂಬಂಧದ ಸಾಂಸ್ಕೃತಿಕ ಆವರಣ ಎಂದರು. “ನೆಲಮೂಲ ನಾಗಾರಾಧನೆ’ ಕುರಿತು ಮಾತನಾಡಿದ ಡಾ| ಪೂವಪ್ಪ ಕಣಿಯೂರು ಅವರು ಕನ್ನಡ ಕರಾವಳಿಯ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ನಾಗ ನಮ್ಮ ಆರಾಧನೆಯ ಕೇಂದ್ರದಲ್ಲಿದ್ದರೂ ನಾವು ಮಾತ್ರ ಹೊರಗಿದ್ದೇವೆ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ| ಬಾಲಕೃಷ್ಣ ಎಸ್‌. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಡಾ| ಗಣನಾಥ ಶೆಟ್ಟಿ ಎಕ್ಕಾರು, ಡಾ. ಸುರೇಶ್‌ ರೈ ಕೆ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಳೆದ 10 ವರ್ಷಗಳಲ್ಲಿ ಕನ್ನಡ ವಿಭಾಗದಿಂದ ರ್‍ಯಾಂಕ್‌ ಗಳಿಸಿದ 12 ಮಂದಿ ಸಾಧಕ ರನ್ನು ಗೌರವಿಸಲಾಯಿತು.

Advertisement

ಕನ್ನಡ ವಿಭಾಗ ಮುಖ್ಯಸ್ಥ ಡಾ| ಜಯಪ್ರಕಾಶ್‌ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು ಕನ್ನಡ ವಿಭಾಗ ಪ್ರೊ| ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ಜತೆಗೆ ಸ್ಥಳೀಯ ಅಕ್ಕ-ಪಕ್ಕದ ಕಾಲೇಜಿನ ವಿಭಾಗದಿಂದ ಕಳೆದ 10 ವರ್ಷಗಳಲ್ಲಿ ಎಂ.ಎ. ಕನ್ನಡ ಪೂರೈಸಿದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಸಂವಾದ ಕಾರ್ಯಕ್ರಮ ಏರ್ಪಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next