Advertisement

Israel ಕನ್ನಡಿಗರು ಸುರಕ್ಷಿತ:ಸಹಾಯವಾಣಿಗೆ ಮೂವರಿಂದ ಕರೆ ಮಾಡಿ ಮಾಹಿತಿ ಸಂಗ್ರಹ

11:38 PM Oct 09, 2023 | Team Udayavani |

ಬೆಂಗಳೂರು: ಇಸ್ರೇಲ್‌ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆಗಾಗಿ ಕಂದಾಯ ಇಲಾಖೆಯು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ಮೂಲಕ ಸ್ಥಾಪಿಸಿರುವ ಸಹಾಯವಾಣಿ ಸಕ್ರಿಯವಾಗಿದ್ದು, ಸೋಮವಾರ ಮೂವರು ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

Advertisement

ಸೋಮವಾರ ಇಬ್ಬರು ಸಹಾಯವಾಣಿಯ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆಯಲು ಕರೆ ಮಾಡಿದ್ದರು. ಇನ್ನೊಬ್ಬರ ಮಗ ಇಸ್ರೇಲ್‌ನಲ್ಲಿ ಓದುತ್ತಿದ್ದು, ಆತನ ವಿಮಾನಯಾನದ ಟಿಕೆಟ್‌ ಅನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ಈ ಟಿಕೆಟ್‌ ಅನ್ನು ಹಿಂದೂಡಲು ಸಾಧ್ಯವೇ ಎಂದು ಕೇಳಿದ್ದಾರೆ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌ ತಿಳಿಸಿದ್ದಾರೆ.

ಈಗ ಇಸ್ರೇಲ್‌- ಭಾರತ ಮಧ್ಯೆ ವಿಮಾನ ಹಾರಾಟ ನಡೆಯುತ್ತಿಲ್ಲ. ಅದ್ದರಿಂದ ನಾವು ವಿದ್ಯಾರ್ಥಿಯ ಮಾಹಿತಿ ಪಡೆದುಕೊಂಡಿದ್ದು, ಈ ಬಗ್ಗೆ ವಿದೇಶಾಂಗ ಸಚಿವಾಲಯದ ಗಮನಕ್ಕೆ ತರುತ್ತೇವೆ ಎಂದು ತಿಳಿಸಿರುವುದಾಗಿ ರಶ್ಮಿ ಮಹೇಶ್‌ ಹೇಳಿದ್ದಾರೆ.

ಇಸ್ರೇಲ್‌ನಲ್ಲಿ ಸಿಲುಕಿಕೊಂಡವರು ಅಥವಾ ಅವರ ಸಂಬಂಧಿಕರು ನಮ್ಮನ್ನು ಸಂಪರ್ಕಿಸಿದರೆ ಅವರು ಕೇಳುವ ಮಾಹಿತಿಯನ್ನು ಒದಗಿಸಲು ಪ್ರಯತ್ನಿಸುತ್ತೇವೆ. ದಿಲ್ಲಿಯಲ್ಲಿರುವ ಕರ್ನಾ ಟಕದ ಭವನದ ಸ್ಥಾನಿಕ ಆಯುಕ್ತರಿಗೆ ಮಾಹಿತಿ ರವಾನಿಸುತ್ತೇವೆ. ಈ ಮಾಹಿತಿಯನ್ನು ವಿದೇಶಾಂಗ ವ್ಯವಹಾರಗಳ ಜಂಟಿ ಕಾರ್ಯ ದರ್ಶಿ ಅವರ ಗಮನಕ್ಕೆ ತರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇಸ್ರೇಲ್‌ನಲ್ಲಿ ಹಾಸನದ 20 ಮಂದಿ
ಹಾಸನ: ಇಸ್ರೇಲ್‌ನಲ್ಲಿ ಜಿಲ್ಲೆಯ 20ಕ್ಕೂ ಹೆಚ್ಚು ಮಂದಿ ಇದ್ದಾರೆ. ಅವರೆಲ್ಲರೂ ಚನ್ನರಾ ಯಪಟ್ಟಣ ತಾಲೂಕಿನ ಡಿಂಕ, ಸಕಲೇಶಪುರ ತಾಲೂಕಿನ ಅಂಕಿಹಳ್ಳಿ, ಬೆಳಗೋಡು ಗ್ರಾಮದವರು ಎಂದು ತಿಳಿದು ಬಂದಿದೆ. ಸಕಲೇಶಪುರದ ನವೀನ್‌, ಅಂಕಿಹಳ್ಳಿಯ ಆಂಥೋಣಿ, ಬೇಲೂರು ತಾಲೂಕು ಲಕ್ಕುಂದ ಗ್ರಾಮದ ರೀಮಾ ಪಿಂಟೋ, ಜಾನ್‌ ಪಿಂಟೋ, ವಿನಿತಾ ಪ್ರಿಯಾ ಪಿಂಟೋ, ರೋಷನ್‌ ಪಿಂಟೋ ಇಸ್ರೇಲ್‌ನ ತಲವಿ, ಜೆರುಸಲೇಂನಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚನ್ನರಾಯಪಟ್ಟಣ ತಾಲೂಕಿನ ಡಿಂಕ ಗ್ರಾಮದ ಕೃಷ್ಣೇಗೌಡ 20 ವರ್ಷಗಳಿಂದ ಅಲ್ಲಿನ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

Advertisement

ವಿದೇಶಾಂಗ ಸಚಿವರ ಜತೆ ಮಾತುಕತೆ
ಇಸ್ರೇಲ್‌ನಲ್ಲಿ ಸಿಲುಕಿರುವವರನ್ನು ಸುರಕ್ಷಿತ ವಾಗಿ ಕರೆತರಲು ಶಕ್ತಿ ಮೀರಿ ಹೋರಾಟ ನಡೆ ಸುವೆ. ತತ್‌ಕ್ಷಣವೇ ವಿದೇಶಾಂಗ ಸಚಿವರನ್ನು ಸಂಪರ್ಕಿಸಿ ಮಾತನಾಡುವುದಾಗಿ ಎಚ್‌. ಡಿ.ದೇವೇಗೌಡ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next