Advertisement
ಡಾ| ಎಸ್.ಆರ್. ರಾವ್ ಸುದೀರ್ಘ ಕಾಲ ಭಾರತೀಯ ಪುರಾತಣ್ತೀ ಇಲಾಖೆಯಲ್ಲಿದ್ದು ಸಿಂಧೂ ನದಿಯ ನಾಗರಿಕತೆಗೆ ಸಂಬಂಧಿಸಿದ ಉತ್ಪನನಕ್ಕೆ ನೇತೃತ್ವ ನೀಡಿದವರು. ನಿವೃತ್ತಿಯ ಬಳಿಕ ದ್ವಾರಕೆಯ ಇರುವಿಕೆಯನ್ನು ಗುರುತಿಸಿದರು. ಇದು ಭಾರತದ ಮೊದಲ ಸಮುದ್ರೀಯ ಉತVನನ.
Related Articles
Advertisement
ನಾಗರಿಕತೆಯ ನಿರಂತರತೆಕ್ರಿ.ಪೂ. 1800ರಿಂದ 500ರ ವರೆಗೆ ಭಾರತದ ಇತಿಹಾಸ ಕತ್ತಲೆಯಲ್ಲಿತ್ತು ಎಂದು ಪಾಶ್ಚಾತ್ಯ ಇತಿಹಾಸಕಾರರು ಹೇಳಿದ್ದರು. ಇದು ಹಾಗಲ್ಲ, ಮುಂದುವರಿದ ನಾಗರಿಕತೆ ಇತ್ತು ಎನ್ನುವುದು ಹರಪ್ಪ- ಮೊಹಂಜೊದಾರೋ ಉತVನನ, ದ್ವಾರಕೆಯ ಉತVನನದಿಂದ ಸಾಬೀತಾಗಿದೆ. ದ್ವಾರಕೆಯಲ್ಲಿ ಶ್ರೀಕೃಷ್ಣನ ಕಾಲದಲ್ಲಿ ನಿರ್ಮಿಸಿದ ಸಮುದ್ರ ತೀರದ ಬಂದರು ಜಗತ್ತಿನ ಮೊದಲ ಸಮುದ್ರತೀರದ, ಸಿಂಧೂತಟದ ಲೋಥಲ್‌ನಲ್ಲಿ ನಿರ್ಮಿಸಿದ್ದ ಬಂದರು ಜಗತ್ತಿನ ಮೊದಲ ಹಿನ್ನೀರ ಪ್ರದೇಶದ ಬಂದರು. ಸಿಂಧು ತೀರದ ನಾಗರಿಕತೆಯಿಂದ ಮಹಾಭಾರತದ ಕಾಲದ ವರೆಗೆ ಸಂಸ್ಕೃತ ಲಿಪಿ ಕಂಡುಬಂದಿದೆ. ಮಹಾಭಾರತದ ಕಾಲ ಎರಡನೆಯ ನಾಗರಿಕತೆಯಾಗಿದ್ದು ಕಂಚು, ತಾಮ್ರದ ಬಳಕೆ ಹೇರಳವಾಗಿತ್ತು. ಬೌದ್ಧರ ಕಾಲದ ನಲಂದ, ತಕ್ಷಶಿಲಾ ಕಾಲ ಘಟ್ಟದ ವರೆಗೆ ನಾಗರಿಕತೆ ಮುಂದುವರಿದಿತ್ತು ಎಂದು ಎಸ್.ಆರ್. ರಾವ್ ವಿಶ್ಲೇಷಿಸಿದ್ದರು. ದ್ವಾರಕೆಯ ಪ್ರಾಚೀನ ವರ್ಣನೆ
ಶ್ರೀಕೃಷ್ಣನ ಅಂತಿಮ ಕಾಲಘಟ್ಟದಲ್ಲಿ ದ್ವಾರಕೆಯು ಸಮುದ್ರದಿಂದ ನಾಶವಾಯಿತೆಂದು ಮಹಾಭಾರತ, ಹರಿವಂಶ, ಭಾಗವತ, ವಿಷ್ಣು ಪುರಾಣ, ಸ್ಕಂದ ಮೊದಲಾದ ಪುರಾಣಗಳಲ್ಲಿ ಇದೆ. ಶ್ರೀಕೃಷ್ಣ ದ್ವಾರಕೆಯಲ್ಲಿ ಮೊದಲು ನಿರ್ಮಿಸಿದ್ದು ಈಗ ಬೇಟ್ ದ್ವಾರಕಾ ಎಂದು ಕರೆಯುವ ಕುಶಸ್ಥಲೀ. ಇದು ಸಮುದ್ರದ ಮಧ್ಯ, ಅಭೇದ್ಯವಾಗಿತ್ತೆಂದೂ, ಮಥುರೆಯಿಂದ ವಲಸೆ ಬಂದ ಯಾದವರ ಸಂಖ್ಯೆ ಹೆಚ್ಚಾದಂತೆ ಕುಶಸ್ಥಲಿಯಲ್ಲಿ ಸ್ಥಳಾವಕಾಶದ ಸಮಸ್ಯೆ ಇದಿರಾಗಿ ಕೃಷ್ಣನು ಎರಡನೆಯ ನಗರವನ್ನು ಭೂಭಾಗದಲ್ಲಿ, ಗೋಮತಿ ನದಿ ಮತ್ತು ಪಶ್ಚಿಮ ಸಮುದ್ರದ ಸಂಗಮ ಸ್ಥಳದಲ್ಲಿ ಕಟ್ಟಬೇಕೆಂದು ನಿರ್ಧರಿಸಿದನೆಂದು ಸ್ಕಂದ ಪುರಾಣ, ಹರಿವಂಶ, ಮಹಾಭಾರತ ತಿಳಿಸಿವೆ. ಇದನ್ನು ಈಗಿನ ವಿಸ್ತರಿತ ನವಮುಂಬಯಿ ಪ್ರದೇಶಕ್ಕೆ ಎಸ್.ಆರ್. ರಾವ್ ಹೋಲಿಸಿದ್ದಾರೆ. “8 ಯೋಜನ ಉದ್ದ, 6 ಯೋಜನ ಅಗಲದ ಗೋಡೆಗಳಿಂದ ಕೂಡಿದ ನಗರ ಇದಾಗಿತ್ತು. ಅತೀ ವಿಶಿಷ್ಟ ತಾಂತ್ರಿಕ ಕೌಶಲದ ಕಟ್ಟಡಗಳಿದ್ದವು. ವಿಸ್ತಾರ ರಸ್ತೆ, ವಸತಿ ಕಟ್ಟಡಗಳು, ಕೋಟೆ, ಸಮುದಾಯ ಭವನ, ನಗರದ ಮೂಲ ಸೌಕರ್ಯಗಳಿಂದ ಕೂಡಿತ್ತು. ಆರು ಶಿಲೆಯ ಬಂದರುಕಟ್ಟೆ ಮತ್ತು ಇದಕ್ಕೆ ತಾಗಿಕೊಂಡು ಆರು ಉಗ್ರಾಣಗಳಿದ್ದವು’ ಎನ್ನುತ್ತದೆ ಹರಿವಂಶ. ಮಹಾಭಾರತದ ಸಭಾಪರ್ವದಲ್ಲಿ ಯುಧಿಷ್ಠಿರ ರಾಜಸೂಯ ಯಾಗ ಮಾಡುವ ಸಂದರ್ಭ ಕೃಷ್ಣನಿಗೆ ಅಗ್ರಪೂಜೆ ಸಲ್ಲಿಸಿದಾಗ ಯುಧಿಷ್ಠಿರ ದ್ವಾರಕಾ ಪಟ್ಟಣದ ವರ್ಣನೆ ಮಾಡುತ್ತಾನೆ. ಜರಾಸಂಧನ ಜತೆ ಯುದ್ಧ ಮಾಡಿದ ಬಳಿಕ ಮಥುರೆಯಿಂದ ದ್ವಾರಕೆಗೆ ಸ್ಥಳಾಂತರವಾಗುವಾಗ ದ್ವಾರಕೆಗೆ ಪ್ರವೇಶ ಮಾಡುವವರು ಚಕ್ರಾಂಕಿತ ರಾಗಬೇಕೆಂದು (ಚಕ್ರಾಂಕಿತಾಃ ಪ್ರವೇಷ್ಟವ್ಯಾಃ ಯಾವದಾಗಮನಂ ಮಮ||) ಕೃಷ್ಣ ಆದೇಶ ಹೊರಡಿಸಿದ್ದ. ಇದುವೇ ಮುದ್ರೆ, ಲಾಂಛನ. ಘಟ್ಟದ ವರೆಗೆ ನಾಗರಿಕತೆ ಮುಂದುವರಿದಿತ್ತು ಎಂದು ಎಸ್.ಆರ್. ರಾವ್ ವಿಶ್ಲೇಷಿಸಿದ್ದರು. ಪ್ರೊ| ಎಸ್.ಆರ್. ರಾವ್ ಕೇವಲ ಭೂಪುರಾತಣ್ತೀಜ್ಞರಲ್ಲದೆ ಸಮುದ್ರ ಪುರಾತಣ್ತೀ ಶಾಸ್ತ್ರದ ಸರ್ವಪ್ರಥಮಿಗರು. ಪುರಾಣಗಳ ಯಥಾರ್ಥತೆಯನ್ನು ಒರೆಗೆ ಹಚ್ಚಿ ವೈಜ್ಞಾನಿಕ ತಳಗಟ್ಟು ಹಾಕಿದರು. ಉತVನನದಲ್ಲಿದ್ದ ಗೋವಾದ ಎನ್‌ಐಒ ತಜ್ಞರ ಪ್ರಕಾರ ಸುಮಾರು 10 ಸಾವಿರ ವರ್ಷಗಳ ಹಿಂದೆ ಸಮುದ್ರ ಬಹಳ ಕೆಳಗೆ ಇತ್ತು. ಮೆಸೆಪೊಟೋಮಿಯಾದ ಮುದ್ರೆಗಳಿಗೆ ಹೋಲುವ ಮುದ್ರೆಗಳು ದ್ವಾರಕೆಯಲ್ಲಿ ಸಿಕ್ಕಿವೆ ಎನ್ನುವುದು ವಿಶೇಷ.
– ಕೆ. ಕೆ.ಮುಹಮ್ಮದ್,
ಪುರಾತಣ್ತೀ ಇಲಾಖೆಯ ನಿವೃತ್ತ ಅಧಿಕಾರಿ -ಮಟಪಾಡಿ ಕುಮಾರಸ್ವಾಮಿ